AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮನಿಗಾಗಿ 35 ಕೆಜಿ ದೇಹತೂಕ ಹೆಚ್ಚಿಸಿಕೊಂಡ ರೂಪದರ್ಶಿ, ಆದರೆ ಆತ ಮಾಡಿದ್ದೇನು? 

ಪ್ರೀತಿಯ ಬಲೆಯಲ್ಲಿ ಬಿದ್ದವರು ತಮ್ಮ ಪ್ರೇಮಿಗಾಗಿ ಯಾವ ತ್ಯಾಗಕ್ಕೂ ತಯಾರಿರುತ್ತಾರೆ ಎನ್ನುವಂತಹದ್ದನ್ನು ಸಿನೆಮಾ, ಕಥೆಗಳಲ್ಲಿ ಮಾತ್ರವಲ್ಲದೆ ಇಂತಹ ಹಲವಾರು ಘಟನೆಗಳನ್ನು ನಿಜಜೀವನದಲ್ಲೂ  ನೋಡಿರುತ್ತೇವೆ.  ಅದೇ ರೀತಿ ಚೀನಾದ ಯುವತಿಯೊಬ್ಬಳು, ತನ್ನ ಪ್ರಿಯತಮನನ್ನು ಮೆಚ್ಚಿಸಲು ಕೇವಲ ಒಂದೇ ತಿಂಗಳಿನಲ್ಲಿ 35 ಕೆ.ಜಿಗಳಷ್ಟು ದೇಹತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ. 

ಪ್ರಿಯತಮನಿಗಾಗಿ 35 ಕೆಜಿ ದೇಹತೂಕ ಹೆಚ್ಚಿಸಿಕೊಂಡ ರೂಪದರ್ಶಿ, ಆದರೆ ಆತ ಮಾಡಿದ್ದೇನು? 
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Oct 18, 2023 | 5:23 PM

Share

ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೇಮಿಗಾಗಿ ಯಾವ ತ್ಯಾಗಕ್ಕೂ ಬೇಕಾದರೂ ತಯಾರಿರುತ್ತಾರೆ. ಹೆಚ್ಚಿನವರು ಪ್ರೇಮಿಗಳಿಗಾಗಿ ತಮ್ಮ ಸ್ವಭಾವ, ಫ್ಯಾಶನ್ ಬದಲಾಸಿಕೊಂಡರೆ,  ಇನ್ನೂ ಕೆಲವರು ತಮ್ಮ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕೆ ಮನೆಯವರನ್ನೇ ಬಿಟ್ಟು ಪ್ರೇಮಿಯ ಜೊತೆ ಓಡಿ ಹೋಗುತ್ತಾರೆ. ಅಷ್ಟೇ ಏಕೆ ಇನ್ನೂ ಕೆಲವು ಪ್ರೇಮಿಗಳು ಪ್ರೀತಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ.  ಇಂತಹ ಘಟನೆಗಳು ಕೇವಲ ಸಿನೆಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ನಡೆಯುತ್ತಿರುತ್ತವೆ.  ಕೆಲವು ಸಮಯಗಳ ಹಿಂದೆ ಯುವತಿಯೊಬ್ಬಳು ತನ್ನ ಪ್ರಿಯತಮನ ಸಾಲ ತೀರಿಸುವ ಸಲುವಾಗಿ ಮನೆಯಲ್ಲಿನ ಒಡವೆ ಬಂಗಾರವನ್ನು ಕದ್ದು, ಸಿಕ್ಕಿಹಾಕಿಕೊಂಡ ಘಟನೆಯನ್ನು ಕೇಳಿರಬಹುದು. ಈ ಕಥೆ ಹೀಗಾದರೆ ಇಲ್ಲೊಬ್ಬ ಯುವತಿ ತನ್ನ ಪ್ರಿಯತಮನನ್ನು ಮೆಚ್ಚಿಸಲು ಕೇವಲ ಒಂದು ತಿಂಗಳಿನಲ್ಲಿ ಬರೋಬ್ಬರಿ 35 ಕೆ.ಜಿ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ.

ವಿಚಿತ್ರವಾದರೂ ಇದು ಸತ್ಯ. ಈ ಘಟನೆ ಚೀನಾದಲ್ಲಿ ನಡೆದಿದ್ದು, ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದಲ್ಲಿ ವಾಸವಿರುವ ಜೆಂಗ್ ಎಂಬ ಹೆಸರಿನ ರೂಪದರ್ಶಿಯೊಬ್ಬಳು ತನ್ನ ಪ್ರೇಮಿಯನ್ನು ಮೆಚ್ಚಿಸಲು ದೇಹತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ.  ಆಕೆಯ ಪ್ರಿಯಕರನಿಗೆ ಗುಂಡು ಗುಂಡಗಿನ (Chubby Girl’s) ಹುಡುಗಿಯೆಂದರೆ ಇಷ್ಟ ಎಂಬ ಕಾರಣಕ್ಕೆ ಈಕೆ ಮಾಡೆಲ್ ವೃತ್ತಿಯನ್ನು ತೊರೆದು  ಕೇವಲ ಒಂದು ತಿಂಗಳಿನಲ್ಲಿ 35 ಕೆ.ಜಿ ಗಳಷ್ಟು ದೇಹ ತೂಕವನ್ನು ಹೆಚ್ಚಿಸಿದ್ದಾಳೆ.

ರೂಪದರ್ಶಿಯಾಗಿದ್ದ ಜೆಂಗ್ ತನ್ನ ಪ್ರಿಯತಮನನ್ನು ಮೊದಲ ಬಾರಿ ಭೇಟಿಯಾಗುವ ಸಂದರ್ಭದಲ್ಲಿ ಆಕೆಯ ದೇಹ ತೂಕ 50 ಕೆ.ಜಿಗಳಷ್ಟಿತ್ತು. ಮತ್ತು ಆ ಮೊದಲ ಭೇಟಿಯಲ್ಲಿ ಆಕೆಯ ಪ್ರಿಯತಮ ವೀ ಝೆಂಗ್ ನನಗೆ ಗುಂಡಗಿನ ಹುಡುಗಿಯರೆಂದರೆ ತುಂಬಾ ಇಷ್ಟ. ನನ್ನ ಮಾಜಿ ಪ್ರಿಯತಮೆಯೂ ತುಂಬಾ ಗುಂಡಾಗಿ ಮುದ್ದುಮುದ್ದಾಗಿದ್ದಳು ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಈಕೆಗೂ  ದೇಹತೂಕವನ್ನು ಹೆಚ್ಚಿಸಿಕೊಳ್ಳುವಂತೆ ಕೇಳಿಕೊಂಡಿದ್ದಾನೆ.  ಒಂದು ವೇಳೆ ನೀನು  ದೇಹ ತೂಕವನ್ನು ಹೆಚ್ಚಿಸಿಕೊಂಡರೆ, ಖಂಡಿತವಾಗಿಯೂ ನಿನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡುತ್ತಾನೆ.

ಇದನ್ನೂ ಓದಿ: ಪಾಪಿ ತೋಳಗಳಿಗೆ ಮಣ್ಣು ಮುಕ್ಕಿಸಿದ ಚಾಣಕ್ಯ ಮೊಲ! 

ಮೊದಮೊದಲು ಈ ನಿರ್ಧಾರಕ್ಕೆ ಒಪ್ಪದ ಜೆಂಗ್ ನಂತರ ತನ್ನ ದೇಹ ತೂಕಕ್ಕಿಂತ ನನ್ನ ಪ್ರೀತಿಯೇ ಮುಖ್ಯವೆಂದು ಧೃಡ ನಿರ್ಧಾರ ಮಾಡಿ ಕೇವಲ ಒಂದು ತಿಂಗಳಿನಲ್ಲಿ 35 ಕೆ.ಜಿಗಳಷ್ಟು ದೇಹ ತೂಕವನ್ನು ಹೆಚ್ಚಿಸಿಕೊಳ್ಳುತ್ತಾಳೆ.  ಪ್ರಿಯತಮನಿಗಾಗಿ ತನ್ನ ರೂಪದರ್ಶಿ ವೃತ್ತಿಯನ್ನು ತೊರೆದು ದೇಹತೂಕವನ್ನು ಹೆಚ್ಚಿಸಿಕೊಂಡ ಈಕೆಯನ್ನು ಕೊನೆಯಲ್ಲಿ ಪ್ರಿಯತಮ ಒಬ್ಬಂಟಿಯಾಗಿ ಬಿಟ್ಟುಹೋಗಿದ್ದಾನೆ.

ಇದರಿಂದ ಆಘಾತಕ್ಕೊಳಗಾದ ಜೆಂಗ್ ನಂತರ  ದೇಹ ತೂಕವವನ್ನು ಕಳೆದುಕೊಂಡು ಮೊದಲಿನಂತಾಗಿದ್ದೇನೆ ಎಂದು  ಸೋಶಿಯಲ್ ಮೀಡಿಯಾ ಫ್ಲಾಟ್ಫಾರ್ಮ We Chat ನಲ್ಲಿ ತನ್ನ ನೋವಿನ ಕಥೆಯನ್ನು ಹಂಚಿಕೊಂಡಿದ್ದಾಳೆ. ಈಕೆಯ ಕಥೆಯನ್ನು ಕೇಳಿದ ಅನೇಕರು ಆತನಿಗೆ ನಿನ್ನ ಪ್ರೀತಿ ಪಡೆಯುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಈಕೆಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:22 pm, Wed, 18 October 23

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ