Viral Video: ಪಾಪಿ ತೋಳಗಳಿಗೆ ಮಣ್ಣು ಮುಕ್ಕಿಸಿದ ಚಾಣಕ್ಯ ಮೊಲ! 

ಬಲಶಾಲಿ ಪ್ರಾಣಿಗಳು ಕಾಡಿನ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುವಂತಹ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಅಂತಹದ್ದೇ ಒಂದು ವೀಡಿಯೋ ವೈರಲ್ ಆಗಿದ್ದು,  ತೋಳಗಳೆರಡು ಪುಟ್ಟ ಮೊಲವನ್ನು ಬೇಟೆಯಾಡಲು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.

Viral Video: ಪಾಪಿ ತೋಳಗಳಿಗೆ ಮಣ್ಣು ಮುಕ್ಕಿಸಿದ ಚಾಣಕ್ಯ ಮೊಲ! 
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 18, 2023 | 3:29 PM

ಕಾಡನಲ್ಲಿ ಬಲಿಷ್ಠ ಪ್ರಾಣಿಗಳು, ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತಿರುತ್ತವೆ. ಸಿಂಹಗಳು ಒಂಟಿಯಾಗಿ ಬೇಟೆಯಾಡಿದರೆ ತೋಳಗಳು ಗುಂಪುಗಳಾಗಿ ಬೇಟೆಯಾಡುತ್ತವೆ. ಹೀಗಿದ್ದರೂ ಶಕ್ತಿಗಿಂತ ಯುಕ್ತಿ ಮೇಲು ಎಂದು ತೋರಿಸಿ ಅದೆಷ್ಟೋ ಸಣ್ಣಪುಟ್ಟ ಪ್ರಾಣಿಗಳು ದೈತ್ಯರ ಬೇಟೆಯಿಂದ ತಪ್ಪಿಸಿಕೊಳ್ಳುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಎರಡು ತೋಳಗಳು ಸೇರಿ ಮೊಲವನ್ನು ಬೇಟೆಯಾಡಲು ಪ್ರಯತ್ನಿಸುತ್ತವೆ. ಆದರೆ ಈ  ಪುಟ್ಟ ಮೊಲವು ತೋಳಗಳ ಬೇಟೆಯಿಂದ ತಪ್ಪಿಸಿಕೊಂಡು,  ಎಂತಹದ್ದೇ  ಪರಿಸ್ಥಿತಿ ಎದುರಾದರೂ ಬದುಕುವ ಹಾಗೂ ಜಯಿಸುವ ಛಲವನ್ನು ಬಿಡಬಾರದೆಂಬುದನ್ನು  ತೋರಿಸಿಕೊಟ್ಟಿದೆ.

ಈ ವೈರಲ್ ವೀಡಿಯೋವನ್ನು  Figen (@TheFigen) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು “ಜೀವನ ಎಂದರೇನು…. ಎಂದಿಗೂ ಬಿಟ್ಟುಕೊಡಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ತೋಳಗಳೆರಡು ಪುಟ್ಟ ಮೊಲವನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.  ತೋಳಗಳೆರಡು ಮೊಲವನ್ನು ಅಟ್ಟಾಡಿಸಿಕೊಂಡು ಹೋಗುತ್ತದೆ. ಇನ್ನೇನು ಈ ಮೊಲ ತೋಳಗಳಿಗೆ ಆಹಾರವಾಗಿಬಿಡುತ್ತದೆ ಎನ್ನುವಷ್ಟರಲ್ಲಿ ಮೊಲ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗೆ ಛಲ ಬಿಡದ ಮೊಲ, ನಿಮಗಿಂತ ನಾನೇನು ಕಡಿಮೆಯಿಲ್ಲ, ಒಬ್ಬಂಟಿಯಾಗಿದ್ದರೆ ಏನಂತೆ ಗೆಲ್ಲುವ ಛಲ, ದೈರ್ಯ ನನಗಿದೆ ಎನ್ನುತ್ತಾ ಯುಕ್ತಿಯಿಂದ ತೋಳಗಳ ಬೇಟೆಯಿಂದ ತಪ್ಪಿಸಿಕೊಂಡು ದೂರ ಓಡಿಹೋಗುತ್ತದೆ. ಆ ಸಂದರ್ಭದಲ್ಲಿ ತೋಳಗಳ ಮುಖದಲ್ಲಿ ಹತಾಶೆಯ ಭಾವನೆಯನ್ನು ಕಾಣಬಹುದು.  ಕೊನೆಯಲ್ಲಿ ತೋಳಗಳ ಬೇಟೆಯಿಂದ ಪಾರದ ಮೊಲದ ಮುಖದಲ್ಲಿ ಗೆಲುವಿನ ಉತ್ಸಾಹವನ್ನು ಕಾಣಬಹುದು.

ಇದನ್ನೂ ಓದಿ: ಬುಸ್ ಕಿಸ್​​ ಎನ್ನವಂತಿಲ್ಲ ಸುಮ್ಮನಿರಬೇಕು ಎಂದು ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ ಎಂಟೆದೆ ಭಂಟ

ಜೀವನದಲ್ಲಿ ಏನೇ ಕಷ್ಟ ಬರಲಿ, ಆದರೆ ಸೋಲನ್ನು ಒಪ್ಪಿಕೊಳ್ಳಬಾರದು, ಧೈರ್ಯದಿಂದ ಮುನ್ನುಗ್ಗಿ ಜೀವನವನ್ನು ಗೆಲ್ಲಬೇಕು ಎಂಬ ಜೀವನ ಪಾಠವನ್ನು ಈ ಮೊಲದಿಂದ ನಾವು ಕಲಿಯಬಹುದು.

ವೈರಲ್​ ವಿಡಿಯೋ ಇಲ್ಲಿದೆ:

ಅಕ್ಟೋಬರ್ 17 ರಂದು ಹಂಚಿಕೊಳ್ಳಲಾದ ಈ ವೀಡಿಯೋ 8.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು “ಓಡುವ ವೇಗಕ್ಕಿಂತ ತಂತ್ರಗಾರಿಕೆ ಮುಖ್ಯ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು  “ಕೇವಲ ಸೆಕೆಂಡುಗಳ ಅಂತರದಲ್ಲಿ ನಮ್ಮ ಜೀವನವು ತಲೆಕೆಳಗಾಗಬಹುದು. ಹಾಗಾಗಿ ದೃತಿಗೆಡದೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಜೀವನದಲ್ಲಿ ಅಡೆತಡೆಗಳು, ಹೋರಾಟಗಳು ಇದ್ದೇ ಇರುತ್ತವೆ, ಆದರೆ ಜಯಿಸುವ ಛಲವನ್ನು ಕಳೆದುಕೊಳ್ಳಬಾರದು” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮೊಲದ ಬದುಕುವ ಛಲ ಮತ್ತು ತಂತ್ರಗಾರಿಕೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:29 pm, Wed, 18 October 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು