AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಮೇರಿಕನ್ ಭಾರತೀಯ ಊಟವನ್ನು ಬಾಯಿ ಚಪ್ಪರಿಸುತ್ತಾ ತಿನ್ನೋದು ನೋಡಿದ್ರೆ ನಮ್ಮ ಬಾಯಲ್ಲೂ ನೀರೂರುತ್ತೆ!

ಭಾರತೀಯ ಊಟವನ್ನು ಮೊದಲ ಬಾರಿಗೆ ಸವಿದ ಅಮೆರಿಕನ್ನೊಬ್ಬ ಅವುಗಳ ಸ್ವಾದ ಮತ್ತು ರುಚಿಯಿಂದ ಅದೆಷ್ಟು ಪ್ರಭಾವಿತ ಮತ್ತು ರೋಮಾಂಚಿತನಾಗಿದ್ದಾನೆ ಅಂದರೆ X ನಲ್ಲಿ ಶೇರ್ ಮಾಡಿದ ತನ್ನ ವಿಡಿಯೋನಲ್ಲಿ, ‘ನನ್ನ ಸ್ವಾದ ಗ್ರಂಥಿಗಳ ಅತಿಕ್ರಮಣವಾಗಿದೆ, ಇದು ಅಪರಾಧವಲ್ಲದೆ ಮತ್ತೇನೂ ಅಲ್ಲ!’ ಅಂತ ಉದ್ಗರಿಸಿದ್ದಾನೆ

ಈ ಅಮೇರಿಕನ್ ಭಾರತೀಯ ಊಟವನ್ನು ಬಾಯಿ ಚಪ್ಪರಿಸುತ್ತಾ ತಿನ್ನೋದು ನೋಡಿದ್ರೆ ನಮ್ಮ ಬಾಯಲ್ಲೂ ನೀರೂರುತ್ತೆ!
ಭಾರತೀಯ ಊಟಕ್ಕೆ ಫಿದಾ ಆಗಿರುವ ಅಮೇರಿಕನ್
TV9 Web
| Edited By: |

Updated on: Oct 18, 2023 | 6:11 PM

Share

ಭಾರತದ ಆಹಾರ ಮತ್ತು ತಿಂಡಿ ಪದಾರ್ಥಗಳಿಗೆ ಮನಸೋಲದವರು ಯಾರಾದರೂ ಇದ್ದಾರೆಯೇ? ನಮ್ಮ ದೇಶದ ವ್ಯಂಜನಗಳಿಗೆ ವಿದೇಶಗಳಲ್ಲೂ ಅಪಾರ ಬೇಡಿಕೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ವಿದೇಶಿಯರು ಬಾಯಿ ಚಪ್ಪರಿಸುತ್ತಾ ತಿನ್ನುತ್ತಾರೆ. ಭಾರತೀಯ ಮೂಲದ ಜನ ವಿಶ್ವದ ನಾನಾ ಭಾಗಗಳಲ್ಲಿ ರೆಸ್ಟುರಾಂಟ್ ಗಳನ್ನು ಓಪನ್ ಮಾಡಿ ಆಯಾ ದೇಶಗಳ ಜನರಿಗೆ ನಮ್ಮ ರೆಸಿಪಿಗಳನ್ನು ಒದಗಿಸುತ್ತಿದ್ದಾರೆ. ಭಾರತದ ಐಕಾನಿಕ್ ಅಹಾರ ಪದಾರ್ಥಗಳಾಗಿರುವ ಶಾಹಿ ಪನೀರ್, ದಾಲ್ ಮಖನಿ, ಬಟರ್ ನಾನ್, ಗಾರ್ಲಿಕ್ ನಾನ್ ಮತ್ತು ಸಿಹಿ ತಿಂಡಿಗಳಾದ ಗುಲಾಬ್ ಜಾಮೂನ್, ಜೆಲೇಬಿ ಮೊದಲಾದವು ವಿದೇಶಗಳಲ್ಲೂ ಭಾರೀ ಜನಪ್ರಿಯ. ಬೇರೆ ಬೇರೆ ದೇಶಗಳಲ್ಲಿನ ಜನ ಭಾರತೀಯಯ ಹೋಟೆಲ್ ಗಳಿಗೆ ಹೋಗಿ ಅಲ್ಲಿನ ಊಟ ತಿಂಡಿಗಳನ್ನು ಸವಿಯುತ್ತಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಭಾರತೀಯ ಊಟವನ್ನು ಮೊದಲ ಬಾರಿಗೆ ಸವಿದ ಅಮೆರಿಕನ್ನೊಬ್ಬ ಅವುಗಳ ಸ್ವಾದ ಮತ್ತು ರುಚಿಯಿಂದ ಅದೆಷ್ಟು ಪ್ರಭಾವಿತ ಮತ್ತು ರೋಮಾಂಚಿತನಾಗಿದ್ದಾನೆ ಅಂದರೆ X ನಲ್ಲಿ ಶೇರ್ ಮಾಡಿದ ತನ್ನ ವಿಡಿಯೋನಲ್ಲಿ, ‘ನನ್ನ ಸ್ವಾದ ಗ್ರಂಥಿಗಳ ಅತಿಕ್ರಮಣವಾಗಿದೆ, ಇದು ಅಪರಾಧವಲ್ಲದೆ ಮತ್ತೇನೂ ಅಲ್ಲ!’ ಅಂತ ಉದ್ಗರಿಸಿದ್ದಾನೆ

ನಾವು ಚರ್ಚಸುತ್ತಿರುವ ಈ ಅಮೆರಿಕನ್ ಕೆಂಟುಕಿಯಲ್ಲಿರುವ ‘ಇಂಡಿಯ ಓವನ್’ ರೆಸ್ಟುರಾಂಟ್ ನಲ್ಲಿ ಪಕೋಡ, ಬಟರ್ ಚಿಕನ್, ಗಾರ್ಲಿಕ್ ನಾನ್, ಅನ್ನ ಮತ್ತು ಗುಲಾಬ್ ಜಾಮೂನ್ ಆರ್ಡರ್ ಮಾಡಿದ್ದಾನೆ. ಕಾರೊಂದರಲ್ಲಿ ಕುಳಿತು ತಿನ್ನುತ್ತಿರುವ ಅವನು ಪ್ರತಿಯೊಂದು ಫುಡ್ ಐಟೆಮ್ ಗೆ ರೇಟಿಂಗ್ ನೀಡುತ್ತಾನೆ. ಮೊದಲು ಪಕೋಡವನ್ನು ಬಾಯಿ ಚಪ್ಪರಿಸುತ್ತಾ ತಿಂದು ಅದಕ್ಕೆ 10 ರಲ್ಲಿ 8 ಅಂಕ ನೀಡುತ್ತಾನೆ. ಗಾರ್ಲಿಕ್ ನಾನ್ ರುಚಿಗಂತೂ ಅವನು ಕ್ಲೀನ್ ಬೋಲ್ಡ್ ಆಗಿ 10 ರಲ್ಲಿ 9.5 ಅಂಕ ನೀಡುತ್ತಾನೆ. ‘ನನ್ನ ಬದುಕಿನಲ್ಲಿ ಇದುವರೆಗೆ ತಿಂದಿರುವ ಅತ್ಯುತ್ತಮ ಬ್ರೆಡ್,’ ಇದು ಅಂತ ಹೇಳುತ್ತಾನೆ. ನಂತರ ಬಟರ್ ಚಿಕನ್ ಮೆಲ್ಲಲಾರಂಭಿಸುವ ಅಮೆರಿಕನ್, ‘ಅದ್ವಿತೀಯ ರುಚಿ,’ ‘ಡಿವೈನ್’ ಅನ್ನುತ್ತಾ ಅದಕ್ಕೆ 9.9 ಅಂಕ ನೀಡುತ್ತಾನೆ. ನಾನ್ ಅನ್ನು ಚಿಕನ್ ನಲ್ಲಿ ಅದ್ದಿ ತಿಂದು ಅದರ ರುಚಿಗೆ ವಿಸ್ಮಯ ಪಡುತ್ತಾ ಆನಂದಪರವಶನಾಗುತ್ತಾನೆ. ಗುಲಾಬ್ ಜಾಮೂನ್ ನೊಂದಿಗೆ ಅವನು ಊಟ ಸಂಪನ್ನಗೊಳಿಸುತ್ತಾನೆ.

ವಿಡಿಯೋ ನೋಡಿ:

ಈಗಾಗಲೇ ಸುಮಾರು 2.5 ಮಿಲಿಯನ್ ವಿವ್ಸ್ ಮತ್ತು 25 ಸಾವಿರಕ್ಕೂ ಹೆಚ್ಚು ಬಾರಿ ರೀಪೋಸ್ಟ್ ಆಗಿರುವ ಈ ವಿಡಿಯೋ ಭಾರಿ ಹಿಟ್ ಆಗಿದೆ ಅಂತ ಬೇರೆ ಹೇಳಬೇಕೆ? ‘ಭಾರತದ ಆಹಾರಕ್ಕೆ ಇದು ನನ್ನ ಶತ ಪ್ರತಿಶತ ಪ್ರತಿಕ್ರಿಯೆ ಆಗಿದೆ, ಚಿಕ್ಕಂದಿನಲ್ಲಿ ಒಮ್ಮೆ ಲೋವಾದಲ್ಲಿ ಇಂಡಿಯನ್ ಫುಡ್ ಸೇವಿಸಿದ್ದೆ,’ ಅಂತ ಅವನು ಹೇಳಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ