Viral Video: ಇದೆಂತಹಾ ವಿಚಿತ್ರ ಬೈಕ್​​, ಬಜಾಜ್ ಪಲ್ಸರ್​​​ನ  ಟೈರ್ ಹೀಗಿದೆ ನೋಡಿ 

ಬೈಕ್ಗೂ ಟ್ರ್ಯಾಕ್ಟರ್ ಟಯರ್ ಜೋಡಿಸಿ ಓಡಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ ಇಲ್ಲೊಬ್ಬ ವ್ಯಕ್ತಿ  ಇಂತಹ ಸಾಹಸಕ್ಕೆ ಕೈ ಹಾಕಿದ್ದಾನೆ. ತನ್ನ ಬಜಾಜ್ ಪಲ್ಸರ್ ಬೈಕ್​​ನ ಮುಂದಿನ ಟೈರ್ ಬಿಚ್ಚಿ ಅದಕ್ಕೆ ಟ್ರ್ಯಾಕ್ಟರ್ ಟೈರ್ ಜೋಡಿಸಿ, ಬೈಕ್ ರೈಡ್ ಮಾಡಿದ್ದಾನೆ. ಈತನ ಹುಚ್ಚು ಸಾಹಸ ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.

Viral Video: ಇದೆಂತಹಾ ವಿಚಿತ್ರ ಬೈಕ್​​, ಬಜಾಜ್ ಪಲ್ಸರ್​​​ನ  ಟೈರ್ ಹೀಗಿದೆ ನೋಡಿ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 19, 2023 | 2:32 PM

ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಏನೂ ಕೊರತೆಯಿಲ್ಲ. ಇತ್ತೀಚಿನ ದಿನಗಳಲ್ಲಿ  ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ   ಪ್ರತಿಭೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ರಾತ್ರೋರಾತ್ರಿ ಫೇಮಸ್ ಆಗುವ ಸಲುವಾಗಿ ಎಂತಹ ಹುಚ್ಚು ಸಾಹಸಕ್ಕೂ ಕೂಡಾ ಕೈ ಹಾಕುವವರು ಇದ್ದರೆ. ಈ ಸೋಷಿಯಲ್ ಮೀಡಿಯಾದ ವಿಷಯಕ್ಕೆ ಬಂದರೆ ನೋಡುಗರಿಗೆ  ಬೋರಿಂಗ್ ವೀಡಿಯೋಗಳಿಗಿಂತ ಇಂತಹ ಕ್ರಿಯೇಟಿವ್ ವೀಡಿಯೋಗಳೇ ಹೆಚ್ಚು ಇಷ್ಟವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ  ಬಜಾಬ್ ಪಲ್ಸರ್ ಬೈಕ್​​​​ಗೆ ಭಾರಿ ಗಾತ್ರದ ಟ್ರ್ಯಾಕ್ಟರ್ ಟೈರ್ ಜೋಡಿಸಿ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾನೆ. ಎಲ್ಲರೂ ತಮ್ಮ ಬೈಕ್​​ಗೆ ಹೊಸ ರೂಪವನ್ನು ನೀಡಲು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡುತ್ತಾರೆ.  ಆದರೆ ಈ ಭೂಪ  ಬೈಕ್​​ನ ಮುಂದುಗಡೆ ಟೈರ್ ಕಿತ್ತು ಹಾಕಿ ಟ್ರ್ಯಾಕ್ಟರ್ ಟೈರ್ ಜೋಡಿಸಿದ್ದಾನೆ. ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅನೇಕರು ಈ ದೇಸಿ ಪ್ರತಿಭೆಗೆ ಮೆಚ್ಚುಗೆಯನ್ನು  ಸೂಚಿಸಿದರೆ, ಇನ್ನೂ ಕೆಲವರು ಇಂತಹ ಹುಚ್ಚುಸಾಹಸದ ಅವಶ್ಯಕತೆಯಾದರೂ ಏತಕ್ಕೆ ಎಂದು ಪ್ರಶ್ನಿಸಿದ್ದಾರೆ.

ಈ ವೀಡಿಯೋವನ್ನು  @mrhifixyz ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬಜಾಜ್ ಪಲ್ಸರ್ ಬೈಕ್​​​ನ ಮುಂಭಾಗದ  ಟೈರ್ ತೆಗೆದು ಅದಕ್ಕೆ  ಟ್ರ್ಯಾಕ್ಟರ್ ಟೈರ್ ಜೋಡಿಸಿ, ಅದೇ ಬೈಕ್​​ನಲ್ಲಿ ಭಯವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: Viral Video: ಬುಸ್ ಕಿಸ್​​ ಎನ್ನವಂತಿಲ್ಲ ಸುಮ್ಮನಿರಬೇಕು ಎಂದು ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ ಎಂಟೆದೆ ಭಂಟ

ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೋ  6.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  260 ಸಾವಿರ ಲೈಕ್ಸ್​​​ ಪಡೆದುಕೊಂಡಿದೆ.  ಅಲ್ಲದೆ ಹಲವಾರು ಕಮೆಂಟ್ಸ್​​ ಬಂದಿದೆ.

ಇಲ್ಲಿದೆ ವೈರಲ್​​ ವಿಡಿಯೋ

View this post on Instagram

A post shared by Mr HiFi (@mrhifixyz)

ಬಬ್ಬ ಬಳಕೆದಾರರು ಭಾರತೀಯರ ನಾವೀನ್ಯತೆಗೆ ಇದು ನಿಜವಾದ ಉದಾಹರಣೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಆಕರ್ಷಕವಾಗಿ ಕಂಡರೂ, ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು  ನನ್ನಂದೊಂದು ಪ್ರಶ್ನೆ, ಟೈರ್ ಬದಲಿಸುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ