AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಪುಟ್ಟ ಕಂದಮ್ಮನ ಡ್ಯಾನ್ಸ್ ನೋಡಿದ್ರೆ, ನೀವು ಬಾದಲ್ ಬರ್ಸಾ ಬಿಜುಲಿಗೆ ಸ್ಟೆಪ್​​​ ಹಾಕುವುದು ಖಂಡಿತ 

ಇತ್ತೀಚಿಗಷ್ಟೆ ಬಾದಲ್ ಬರ್ಸಾ ಬಿಜುಲಿ ಎಂಬ ನೇಪಾಳಿ ಹಾಡಿಗೆ ಯುವತಿಯರಿಬ್ಬರು ರೀಲ್ಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಆ ನಂತರ ಈ ಹಾಡಿನ ಕ್ರೇಜ್ ಕೂಡಾ ಹೆಚ್ಚಾಗಿ, ಎಲ್ಲರೂ ಹಾಡಿಗೆ ಡ್ಯಾನ್ಸ್ ಮಾಡುವಂತ ರೀಲ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಈ ಹಾಡಿನ ಕ್ರೇಜ್ ಇನ್ನೇನೂ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ  ಇಲ್ಲೊಂದು ಪುಟ್ಟ ಕಂದಮ್ಮ ಈ ಹಾಡಿಗೆ ಮುದ್ದಾಗಿ ನೃತ್ಯ ಮಾಡುವ ಮೂಲಕ ಈ ಹಾಡಿನ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಸಿದ್ದಾಳೆ.

Viral Video: ಈ ಪುಟ್ಟ ಕಂದಮ್ಮನ ಡ್ಯಾನ್ಸ್ ನೋಡಿದ್ರೆ, ನೀವು ಬಾದಲ್ ಬರ್ಸಾ ಬಿಜುಲಿಗೆ ಸ್ಟೆಪ್​​​ ಹಾಕುವುದು ಖಂಡಿತ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Oct 19, 2023 | 5:07 PM

Share

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ʼಬಾದಲ್ ಬರ್ಸಾ ಬಿಜುಲಿ ಸಾವನ್ ಕೋ ಪಾನಿʼ ಎಂಬ ನೇಪಾಳಿ ಹಾಡಿನ ಕ್ರೇಜ್ ಹೆಚ್ಚಾಗಿತ್ತು.  ಯೂಟ್ಯೂಬ್ ಶಾರ್ಟ್ ವೀಡಿಯೋಗಳಿಂದ ಹಿಡಿದು ಇನ್ಸ್ಟಾಗ್ರಾಮ್ ರೀಲ್ಸ್ ವರೆಗೂ ಈ ಹಾಡಿನದ್ದೇ ಹವಾ. ಅದೆಷ್ಟೋ ಯುವತಿಯರು, ಪುಟ್ಟಮಕ್ಕಳು ಈ ಹಾಡಿಗೆ ಸ್ಟೆಪ್ ಹಾಕಿ ಪೇಮಸ್ ಆಗಿದ್ದುಂಟು, ಇನ್ನೇನೂ ಈ  ಹಾಡಿನ ಕ್ರೇಜ್ ಕಡಿಮೆಯಾಗುತ್ತಿದೆ ಎನುವಷ್ಟರಲ್ಲಿ ಇದೀಗ ಪುಟ್ಟ ಬಾಲಕಿಯೊಬ್ಬಳು “ಬಾದಲ್ ಬರ್ಸಾ ಬಿಜುಲಿ” ಹಾಡಿಗೆ ನೃತ್ಯ ಮಾಡುವ ಮೂಲಕ ಸುದ್ದಿಯಾಗಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸದ್ಯ ಸಖತ್​​ ವೈರಲ್ ಆಗುತ್ತಿದೆ. ಪುಟ್ಟ ಕಂದಮ್ಮನ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಈ ವಿಡಿಯೋವನ್ನು ಸೂರಜ್ ಭೋಸಲೆ (@surajbhosale1010) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಪುಟ್ಟ ಬಾಲಕಿ ಗಣೇಶ ಮಂಟಪದ ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವ ದೃಶ್ಯಾವಳಿಯನ್ನು ಈ ವಿಡಿಯೋದಲ್ಲಿ ಕಾಣಬಹುದು.  ಪುಟ್ಟ ಬಾಲಕಿ ಕೆಂಪು ಬಣ್ಣದ ಫ್ರಾಕ್ ತೊಟ್ಟು ʼಬಾದಲ್ ಬರ್ಸಾ ಬಿಜುಲಿ ಸಾವನ್ ಕೋ ಪಾನಿʼ ಹಾಡಿಗೆ  ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುದ್ದಾಗಿ ನೃತ್ಯವನ್ನು ಮಾಡುತ್ತಾಳೆ, ಅಲ್ಲಿ ವೇದಿಕೆಯ ಮುಂದೆ ನೆರೆದಿದ್ದ ಜನರೆಲ್ಲಾ ಈ ಬಾಲಕಿಯ  ನೃತ್ಯಕ್ಕೆ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾ ಪ್ರೋತ್ಸಾಹಿಸುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳ ವೀಡಿಯೋ ಇದಾರರೂ ಪುಟ್ಟ ಬಾಲಕಿಯ ನೃತ್ಯಕ್ಕೆ ಎಲ್ಲರೂ ಮನಸೋತಿದ್ದಾರೆ.

ಇದನ್ನೂ ಓದಿ: ಐದನೇ ಮಹಡಿಯಿಂದ ಸೂಪರ್ ಮ್ಯಾನ್​​ನಂತೆ ಜಿಗಿದ ಶ್ವಾನ, ಮುಂದೇನಾಯಿತು? ನೋಡಿ   

ವೈರಲ್​​ ವಿಡಿಯೋ ಇಲ್ಲಿದೆ:

ಅಕ್ಟೋಬರ್ 4 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 6.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಮಿಲಿಯನ್ ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವು ಕಮೆಂಟ್​​​ಗಳು ಕೂಡ ಬಂದಿದೆ.  ಒಬ್ಬ ಬಳಕೆದಾರರು ಈಕೆ ಎಕ್ಸ್ಪ್ರೆಷನ್ ಕ್ವೀನ್  ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು  ಅದ್ಭುತ ನೃತ್ಯ ಎಂದು ಹೇಳಿದ್ದಾರೆ. ಇನ್ನು ಹಲವರು ಈ ಪುಟ್ಟ ಬಾಲಕಿ ತುಂಬಾ ಮುದ್ದಾಗಿ ನೃತ್ಯ ಮಾಡಿದ್ದಾಳೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

Published On - 5:04 pm, Thu, 19 October 23

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್