Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಐದನೇ ಮಹಡಿಯಿಂದ ಸೂಪರ್ ಮ್ಯಾನ್​​ನಂತೆ ಜಿಗಿದ ಶ್ವಾನ, ಮುಂದೇನಾಯಿತು? ನೋಡಿ   

ಎತ್ತರದ ಕಟ್ಟಡದಿಂದ ಕೆಳ ಜಿಗಿದರೆ ಯಾರಾದರೂ ಜೀವಂತವಾಗಿ ಉಳಿಯುವುದುಂಟೆ, ಆದರೂ ಎತ್ತರದ  ಕಟ್ಟಡದಿಂದ ಕೆಳ ಜಿಗಿಯುವ ಸ್ಟೈಲಿಶ್ ದೃಶ್ಯಾವಳಿಗಳನ್ನು  ಸೂಪರ್ ಮ್ಯಾನ್ ಹಾಗೂ ಇನ್ನಿತರ ಫ್ಯಾಂಟಸಿ ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ಇಲ್ಲೊಂದು ಶ್ವಾನ ಸಿನಿಮೀಯ ರೀತಿಯಲ್ಲಿ  ನಿರ್ಮಾಣ ಹಂತದಲ್ಲಿನ ಕಟ್ಟಡವೊಂದರ ಐದನೇ ಮಹಡಿಯಿಂದ ಕೆಳಜಿಗಿದು ಏನೂ ಆಗೇ ಇಲ್ಲವೆಂಬಂತೆ ಎದ್ದು ನಡೆದುಕೊಂಡು ಹೋಗಿದೆ.  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ದೃಶ್ಯವಾಳಿ ಹಲವರನ್ನು  ಆಶ್ಚರ್ಯಚಕಿತಗೊಳಿಸಿದೆ.

Viral Video: ಐದನೇ ಮಹಡಿಯಿಂದ ಸೂಪರ್ ಮ್ಯಾನ್​​ನಂತೆ ಜಿಗಿದ ಶ್ವಾನ, ಮುಂದೇನಾಯಿತು? ನೋಡಿ   
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 19, 2023 | 4:38 PM

ಪ್ರಾಣಿಗಳು ಕೆಲವೊಮ್ಮೆ ಎಷ್ಟು ವಿಚಿತ್ರವಾಗಿ ವರ್ತಿಸುತ್ತವೆ ಎಂದರೆ  ಅದನ್ನು ನಂಬಲ ಸಾಧ್ಯವಾಗದಷ್ಟು. ಇಂತಹ ಪ್ರಾಣಿಗಳ ಕುರಿತ ಆಶ್ಚರ್ಯಯುತ ವೀಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಶ್ವಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.  ಕಪ್ಪು ಬಣ್ಣದ ನಾಯಿಯೊಂದು ನಿರ್ಮಾಣ ಹಂತದಲ್ಲಿನ ಕಟ್ಟಡದ ಐದನೇ ಮಹಡಿಯಿಂದ ಕೆಳಜಿಗಿದು, ತನಗೆ ಏನು ಆಗಿಲ್ಲ ಎಂಬಂತೆ  ಎದ್ದು ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಎತ್ತರದ ಕಟ್ಟಡದಿಂದ ಜಿಗಿದರೆ  ಯಾರಾದರೂ ಬದುಕುವುದುಂಟೆ, ಎತ್ತರದ ಕಟ್ಟಡದಿಂದ ಸ್ಟೈಲಿಶ್ ಆಗಿ ಜಿಗಿಯುವ ಇಂತಹ  ದೃಶ್ಯವನ್ನು ಸೂಪರ್ ಮ್ಯಾನ್ ಇತ್ಯಾದಿ ಫ್ಯಾಂಟಸಿ ಸಿನಿಮಾಗಳಲ್ಲಿ ನೋಡಬಹುದು.  ಆದರೆ ಈ ಶ್ವಾನ ಇಂತಹ ಸಾಹಸವನ್ನು ಮಾಡಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಈ ವೈರಲ್ ವೀಡಿಯೋವನ್ನು ಕ್ರೇಜಿ ಕ್ಲಿಪ್ಸ್ (@crayclipsonly)  ಎಂಬ ಪೇಜ್ ತನ್ನ  X ಖಾತೆಯಲ್ಲಿ ಹಂಚಿಕೊಂಡಿದ್ದು, “ಐದನೇ ಮಹಡಿಯಿಂದ ಜಿಗಿದ ನಾಯಿ ಯಾವುದೇ ಗಾಯಗಳಾಗದೆ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.

ವಿಡಿಯೋ ಇಲ್ಲಿದೆ ನೋಡಿ

23 ಸೆಕೆಂಡುಗಳ ಈ ವಿಡಿಯೋದಲ್ಲಿ ಕಪ್ಪು ಬಣ್ಣದ ನಾಯಿಯೊಂದು ನಿರ್ಮಾಣ ಹಂತದಲ್ಲಿನ ಕಟ್ಟಡದ ಐದನೇ ಮಹಡಿಯಿಂದ ಕೆಳ ಜಿಗಿಯಲು ಪ್ರಯತ್ನಿಸುವುದನ್ನು ಕಾಣಬಹುದು.  ಮೊದಲಿಗೆ ಅತ್ತಿಂದ ಇತ್ತ ಕಣ್ಣಾಯಿಸಿ, ಹೇಗೆ ಜಿಗಿಯಬೇಕೆಂದು ಯೋಚಿಸಿ ಐದನೇ ಮಹಡಿಯಿಂದ ಕೆಳಗೆ ಜಿಗಿದ ಶ್ವಾನ, ನಂತರ ತನಗೆ ಏನು ಆಗೇ ಇಲ್ಲವೆಂಬಂತೆ ಎದ್ದು ನಡೆದುಕೊಂಡು ಹೋಗಿದೆ. ಬಹುಶಃ ನಾಯಿಗೆ ಹೇಗೆ ಕೆಳಗಿಳಿಯುವುದು ಎಂದು ತಿಳಿಯದೆ ಮೇಲಿಂದ ಕೆಳಗೆ ಹಾರಲು ಪ್ರಯತ್ನಿಸಿದೆ.  ಆದರೂ ವಿಡಿಯೋ ಹಲವರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಇದೆಂತಹಾ ವಿಚಿತ್ರ ಬೈಕ್​​, ಬಜಾಜ್ ಪಲ್ಸರ್​​​ನ  ಟೈರ್ ಹೀಗಿದೆ ನೋಡಿ 

X  ನಲ್ಲಿ ವೈರಲ್ ಆಗಿರುವ ಈ ವೀಡಿಯೋ 13.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಅನೇಕರು ಇದಕ್ಕೆ ಕಮೆಂಟ್​​ ಕೂಡ ಮಾಡಿದ್ದಾರೆ.  ಒಬ್ಬ ಬಳಕೆದಾರರು “ಶ್ವಾನದ ದಿಟ್ಟತನಕ್ಕೆ ಮೆಚ್ಚಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಾಯಿಗೆ ಯಾವುದೇ ಗಾಯಗಳಾಗಿಲ್ಲವೆಂದು  ಕಂಡರೂ ಖಂಡಿತವಾಗಿಯೂ ಅದರ ಮೂಳೆಗಳಿಗೆ ಪೆಟ್ಟಾಗಿರುತ್ತೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವೀಡಿಯೋವನ್ನು ನೋಡಿ, ಇದು ನಂಬಲ ಸಾಧ್ಯವಾದ ಘಟನೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ