ಪ್ರಯಾಣಿಕರ ಲಗೇಜ್​ ಖಾಲಿ ಮಾಡದೆ ಸಿಂಗಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ಲೇನ್​​, ಮುಂದೇನಾಯ್ತು ಈ ಸ್ಟೋರಿ ಓದಿ

ವಿಮಾನಯಾನ ಸಿಬ್ಬಂದಿಯ ಮರುವಿನಿಂದ ಅವಾಂತರ ಸೃಷ್ಟಿಯಾಗಿದ್ದು, ಸಿಂಗಾಪೂರಿನಿಂದ ಬೆಂಗಳೂರಿಗೆ ಬರಬೇಕಾದ ವಿಮಾನ ಸಮಯದ ಸರಿಯಾಗಿ ಬರದೆ ತಡವಾಗಿ ಬಂದಿದೆ. ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.

ಪ್ರಯಾಣಿಕರ ಲಗೇಜ್​ ಖಾಲಿ ಮಾಡದೆ ಸಿಂಗಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ಲೇನ್​​, ಮುಂದೇನಾಯ್ತು ಈ ಸ್ಟೋರಿ ಓದಿ
ಇಂಡಿಗೋ
Follow us
ವಿವೇಕ ಬಿರಾದಾರ
|

Updated on: Oct 19, 2023 | 10:46 AM

ವಿಮಾನಯಾನ ಸಿಬ್ಬಂದಿಯ ಮರುವಿನಿಂದ ಅವಾಂತರ ಸೃಷ್ಟಿಯಾಗಿದ್ದು, ಸಿಂಗಾಪೂರಿನಿಂದ (Singapore) ಬೆಂಗಳೂರಿಗೆ (Bengaluru) ಬರಬೇಕಾದ ವಿಮಾನ (Airplane) ಸಮಯದ ಸರಿಯಾಗಿ ಬರದೆ ತಡವಾಗಿ ಬಂದಿದೆ. ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಹೌದು ಬುಧವಾರ ಇಂಡಿಗೋ 6E-1006 ವಿಮಾನ ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣಿಸಿದೆ. ವಿಮಾನ ಸಿಂಗಾಪುರ ತಲುಪಿದ ಮೇಲೆ ಪ್ರಯಾಣಿಕರೆಲ್ಲರು ಇಳಿದಿದ್ದಾರೆ. ಆದರೆ ವಿಮಾನಯಾನ ಸಿಬ್ಬಂದಿ ವಿಮಾನದಲ್ಲಿದ್ದ ಲಗೇಜ್​ಗಳನ್ನು ಖಾಲಿ ಮಾಡಲು ಮರೆತಿದ್ದಾರೆ.

ನಂತರ ವಿಮಾನ ಈ ಲಗೇಜ್​ಗಳನ್ನು ಹೊತ್ತು ಸಿಂಗಾಪುರದ ಚಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5:35ಕ್ಕೆ ಬೆಂಗಳೂರಿಗೆ ಪ್ರಯಾಣ ಆರಂಭಿಸಿದೆ. ಆಗ ಪ್ರಯಾಣಿಕರು ವಿಮಾನ ನಿಲ್ದಾಣ ಸಿಬ್ಬಂದಿಗೆ ನಮ್ಮ ಲಗೇಜ್​ಗಳನ್ನು ಹೊತ್ತು ವಿಮಾನ ಹೋಗಿದೆ, ನಿಮ್ಮ ಸಿಬ್ಬಂದಿ ಲಗೇಜ್​ಗಳನ್ನು ಖಾಲಿ ಮಾಡಲು ಮರೆತಿದ್ದಾರೆ ಎಂದು ದೂರಿದ್ದಾರೆ.

ಇದನ್ನೂ ಓದಿ: Bengaluru News: ವಿಮಾನದಲ್ಲಿ ಯುವತಿಗೆ ಕಿರುಕುಳ ನೀಡಿದ ಆಫ್​ ಡ್ಯೂಟಿ ಪೈಲಟ್​

ಕೂಡಲೆ ವಿಮಾನ ನಿಲ್ದಾಣದ ಅಧಿಕಾರಿ ಪೈಲಟ್​​ಗೆ ವಿಷಯ ತಿಳಿಸಿದ್ದಾರೆ. A321neo ವಿಮಾನ ಮತ್ತೆ ವಾಪಸ್​​ ಚಂಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಬೆಳಿಗ್ಗೆ 6.57ಕ್ಕೆ ಲ್ಯಾಂಡ್ ಆಗಿದೆ.​ ಆಗ ವಿಮಾನಯಾನ ಸಿಬ್ಬಂದಿ ಲಗೇಜ್​ಗಳನ್ನು ಖಾಲಿ ಮಾಡಿದ್ದಾರೆ. ನಂತರ ವಿಮಾನ ಬೆಳಿಗ್ಗೆ 10:12ಕ್ಕೆ ಟೇಕ್​ ಆಫ್​ ಆಗಿದೆ. 11:44ಕ್ಕೆ ಬೆಂಗಳೂರು ತಲುಪಿದೆ.

ಈ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆ ಟ್ವೀಟ್​ ಮಾಡಿ: ನಮ್ಮ ವಿಮಾನಯಾ ಸಿಬ್ಬಂದಿಯಿಂದ ಆದ ತಪ್ಪಿಗೆ ನಾವು ಕ್ಷಮೆ ಕೇಳುತ್ತೇವೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ಇದರಿದ ಪ್ರಯಾಣಿಕರಿಗೆ ತೊಂದರೆಯಾಯಿತು. ಮತ್ತು ಅವರಿಗೆ ಮನೆಗಳಿಗೆ ತೆರಳಲು ವಿಳಂಬವಾಯಿತು. ಪ್ರಯಾಣಿಕರಿಗೆ ಉಪಹಾರಗಳನ್ನು ನೀಡಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರತಿದಿನ ಸುಮಾರು 2,000 ವಿಮಾನಗಳನ್ನು ನಿರ್ವಹಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ