Bengaluru News: ವಿಮಾನದಲ್ಲಿ ಯುವತಿಗೆ ಕಿರುಕುಳ ನೀಡಿದ ಆಫ್​ ಡ್ಯೂಟಿ ಪೈಲಟ್​

ಬೆಂಗಳೂರಿನಿಂದ ಪುಣೆಗೆ ವಿಮಾನದಲ್ಲಿ ಹೊರಟಿದ್ದ ಯುವತಿಗೆ, ​​ಕರ್ತವ್ಯದಲ್ಲಿಲ್ಲದ ಪೈಲಟ್ ನನಗೆ ಕಿರುಕುಳ ನಿಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bengaluru News: ವಿಮಾನದಲ್ಲಿ ಯುವತಿಗೆ ಕಿರುಕುಳ ನೀಡಿದ ಆಫ್​ ಡ್ಯೂಟಿ ಪೈಲಟ್​
ಆಕಾಸ್​ ಏರ್​​
Follow us
ವಿವೇಕ ಬಿರಾದಾರ
|

Updated on: Oct 17, 2023 | 11:17 AM

ಬೆಂಗಳೂರು ಅ.17: ಬೆಂಗಳೂರಿನಿಂದ (Bengaluru) ಪುಣೆಗೆ (Pune) ಆಕಾಸ್​​ ವಿಮಾನದಲ್ಲಿ (Airplane) ಹೊರಟಿದ್ದ ಯುವತಿಗೆ, ​​ಕರ್ತವ್ಯದಲ್ಲಿಲ್ಲದ ಪೈಲಟ್ ನನಗೆ ಕಿರುಕುಳ ನಿಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಿರುಕುಳಕ್ಕೆ ಒಳಗಾದ 20 ವರ್ಷದ ಯುವತಿ ಆಕಾಸ್ ವಿಮಾನಯಾನ ಸಂಸ್ಥೆಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪವಿದೆ. ಘಟನೆ ಬಗ್ಗೆ ವಿವರವಾಗಿ ತನಿಖೆ ನಡೆಸಲು ನಾವು ಯುವತಿಯನ್ನು ಸಂಪರ್ಕಿಸಲು ಯತ್ನಿಸಿದೇವು. ಆದರೆ ಅವರು ಸಂಪರ್ಕಕಕ್ಕೆ ಸಿಗಲಿಲ್ಲ ಎಂದು ಆಕಾಸ್​ ಏರ್​​ಲೈನ್ಸ್​​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆ ಬಗ್ಗೆ ಯುವತಿ ಸಾಮಾಜಿ ಜಾಲತಾಣದಲ್ಲಿ ಫೋಸ್ಟ್​​ ಹಾಕಿದ ಪ್ರಕಾರ “ನಾನು (ಯುವತಿ) ಬೆಂಗಳೂರಿನಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್ ಮುಗಿಸಿಕೊಂಡು ಭಾನುವಾರದಂದು ವಿಮಾನದಲ್ಲಿ ಪುಣೆಗೆ ಹೊರಟಿದ್ದೆ. ವಿಮಾನದ ಹಿಂಭಾಗದಲ್ಲಿ ಸೀಟ್ ಸಂಖ್ಯೆ 32Cಯಲ್ಲಿ ಕುಳಿತಿದ್ದೆ. ನನ್ನ ಲಗೇಜ್​ಗಳನ್ನು ಕ್ಯಾಬಿನ್​​ನಲ್ಲಿ ಇರಿಸಲು ಸೀಟ್​ ಸಂಖ್ಯೆ 30ರಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಸಹಾಯ ಮಾಡಿದರು. ನಂತರ ಅವರು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅವರು ಕರ್ತವ್ಯದಲ್ಲಿಲ್ಲದ ಆಕಾಸ್​​ ಏರ್ ಪೈಲಟ್ ಎಂದು ಪರಿಚಯಿಸಿಕೊಂಡರು. ಅಲ್ಲದೆ ಅವರು ಏರ್‌ಲೈನ್ ಐಡಿ ಕಾರ್ಡ್ ಹಾಕಿಕೊಂಡಿದ್ದರು”.

ಇದನ್ನೂ ಓದಿ: ಸಮಯಪಾಲನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ

ಕೆಲ ಸಮಯದ ನಂತರ ಪೈಲಟ್, ತಾನು ಕುಳಿತಿದ್ದ ಆಸನದ ಬಳಿಯೇ ಕೂರುವಂತೆ ಒತ್ತಾಯಿಸಿದರು. ನಾನು ಹೋಗಿ ಕೂತೆ, ಬಳಿಕ ವಿಮಾನ ಸಿಬ್ಬಂದಿ ನನ್ನ ಲಗೇಜ್ಅನ್ನು ಸ್ಥಳಾಂತರಿಸಿದರು. ಬಳಿಕ ಪೈಲಟ್​ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಇದನ್ನು ಸಹಿಸದೆ ನಾನು ನನ್ನ ಮೊದಲಿನ ಸೀಟ್​ನಲ್ಲಿ ಹೋಗಿ ಕುಳಿತೆ. ಈ ಬಗ್ಗೆ ವಿಮಾನದ ಸಿಬ್ಬಂದಿಗೆ ತಿಳಿಸಿದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪುಣೆಯಲ್ಲಿ ಇಳಿದ ನಂತರ ಪೈಲಟ್ ನನ್ನನ್ನು ಹಿಂಬಾಲಿಸಿದರು. ತನ್ನೊಂದಿಗೆ ಬರುವಂತೆ ಹೇಳಿದರು. ಅಲ್ಲದೆ ಮೊಬೈಲ್ ನಂಬರ್​ ನೀಡುವಂತೆ ಒತ್ತಾಯಿಸಿದರು.”

ಈ ಬಗ್ಗೆ ಆಕಾಸ್​ ಏರ್​ಲೈನ್ಸ್​​ಗೆ ದೂರು ನೀಡಿದ್ದೇನೆ. ದೂರು ನೀಡಿ 15 ದಿನ ಕಳೆದರು ಏನು ಪ್ರಯೋಜನವಾಗಿಲ್ಲ ಎಂದು ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ