ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ; ಈ ವಿಮಾನ ಪ್ರಯಾಣದಲ್ಲಿ 350 ಎಂಬಿಪಿಎಸ್ ವೇಗದ ವೈಫೈ ಸೌಲಭ್ಯ

Qatar Airways and SpaceX Agreement: ಕತಾರ್ ಏರ್ವೇಸ್​ನ ಫ್ಲೈಟ್​ಗಳಲ್ಲಿ ಪ್ರಯಾಣಿಕರು ಗರಿಷ್ಠ 10 ಎಂಬಿಪಿಎಸ್ ವೇಗದವರೆಗೂ ಇಂಟರ್ನೆಟ್ ಪಡೆಯಬಹುದು. ಈಗ ಸ್ಟಾರ್​ಲಿಂಕ್ ಸೌಲಭ್ಯ ಸಿಕ್ಕರೆ 350 ಎಂಬಿಪಿಎಸ್​ನಷ್ಟು ವೇಗದ ವೈಫೈ ಇಂಟರ್ನೆಟ್ ಸಿಗಲಿದೆ. ಬ್ರಾಡ್​ಬ್ಯಾಂಡ್​ಗಳಲ್ಲಿ ಸಿಗುವಷ್ಟೆ ವೇಗದ ಇಂಟರ್ನೆಟ್ ಇದು. ಕತಾರ್ ಏರ್ವೇಸ್ ಈಗಷ್ಟೇ ಸ್ಟಾರ್ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಯಾವಾಗ ಈ ಸರ್ವಿಸ್ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ. 350 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಕ್ಕರೆ ಮೊಬೈಲ್​ಗಳಲ್ಲಿ ಆನ್​ಲೈನ್ ಗೇಮಿಂಗ್ ಇತ್ಯಾದಿ ಆಡಲು ಸಾಧ್ಯವಾಗುತ್ತದೆ.

ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ; ಈ ವಿಮಾನ ಪ್ರಯಾಣದಲ್ಲಿ 350 ಎಂಬಿಪಿಎಸ್ ವೇಗದ ವೈಫೈ ಸೌಲಭ್ಯ
ಕತಾರ್ ಏರ್ವೇಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2023 | 12:59 PM

ಕತಾರ್ ಏರ್ವೇಸ್ ಸಂಸ್ಥೆ ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ (SpaceX) ಜೊತೆ ಒಪ್ಪಂದಕ್ಕೆ ಸಹಿಹಾಕಿದೆ. ಸ್ಪೇಸ್ ಎಕ್ಸ್​ನ ಸ್ಟಾರ್​ಲಿಂಕ್ ವೈಫೈ ಅನ್ನು ಬಳಸಲು ಈ ಒಪ್ಪಂದ ಕೈಗೊಳ್ಳಲಾಗಿದೆ. ಇದರೊಂದಿಗೆ ಕತಾರ್ ಏರ್ವೇಸ್ ವಿಮಾನದೊಳಗೆ (Qatar Airways flight) ಬ್ರಾಡ್​ಬ್ಯಾಂಡ್​ನಷ್ಟು ವೇಗದ ವೈಫೈ ಇಂಟರ್ನೆಟ್ ಸಿಗಲಿದೆ. ವರದಿಗಳ ಪ್ರಕಾರ 350 ಎಂಬಿಪಿಎಸ್​ನಷ್ಟು ವೇಗದ ಇಂಟರ್ನೆಟ್ ಅನ್ನು ವಿಮಾನ ಪ್ರಯಾಣಿಕರು ಉಚಿತವಾಗಿ ಪಡೆಯಬಹುದಾಗಿದೆ. ಇದರೊಂದಿಗೆ ಕತಾರ್ ಏರ್ವೇಸ್ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್​ಗೆ ಅತಿದೊಡ್ಡ ಏರ್​ಲೈನ್ ಪಾರ್ಟ್ನರ್ ಸಂಸ್ಥೆ ಎನಿಸಿದೆ.

ಸದ್ಯ, ಕತಾರ್ ಏರ್ವೇಸ್​ನ ಫ್ಲೈಟ್​ಗಳಲ್ಲಿ ಪ್ರಯಾಣಿಕರು ಗರಿಷ್ಠ 10 ಎಂಬಿಪಿಎಸ್ ವೇಗದವರೆಗೂ ಇಂಟರ್ನೆಟ್ ಪಡೆಯಬಹುದು. ಈಗ ಸ್ಟಾರ್​ಲಿಂಕ್ ಸೌಲಭ್ಯ ಸಿಕ್ಕರೆ 350 ಎಂಬಿಪಿಎಸ್​ನಷ್ಟು ವೇಗದ ವೈಫೈ ಇಂಟರ್ನೆಟ್ ಸಿಗಲಿದೆ. ಬ್ರಾಡ್​ಬ್ಯಾಂಡ್​ಗಳಲ್ಲಿ ಸಿಗುವಷ್ಟೆ ವೇಗದ ಇಂಟರ್ನೆಟ್ ಇದು.

ಕತಾರ್ ಏರ್ವೇಸ್ ಈಗಷ್ಟೇ ಸ್ಟಾರ್ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಯಾವಾಗ ಈ ಸರ್ವಿಸ್ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ. 350 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಕ್ಕರೆ ಮೊಬೈಲ್​ಗಳಲ್ಲಿ ಆನ್​ಲೈನ್ ಗೇಮಿಂಗ್ ಇತ್ಯಾದಿ ಆಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್​ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?

ಕತಾರ್ ಏರ್ವೇಸ್ ಬೆಂಗಳೂರು ಸೇರಿದಂತೆ ಭಾರತದ 13 ನಗರಗಳಿಗೆ ಫ್ಲೈಟ್ ಸೇವೆ ಒದಗಿಸುತ್ತದೆ. ದೋಹಾದಿಂದ ಬೆಂಗಳೂರಿಗೆ ಬರಲು ಪ್ರಯಾಣ ಅವಧಿ ಸುಮಾರು 4 ಗಂಟೆ ಇರುತ್ತದೆ. ಇಷ್ಟು ಹೊತ್ತು ಸಮಯ ಕಳೆಯಲು ಉತ್ತಮ ಇಂಟರ್ನೆಟ್ ಅವಶ್ಯಕವಾಗಿದೆ.

ಹಿಂದೆಲ್ಲಾ ಫ್ಲೈಟ್​ಗಳಲ್ಲಿ ಮೊಬೈಲ್​ಗಳನ್ನು ಸ್ವಿಚ್ ಆಫ್ ಮಾಡಬೇಕಿತ್ತು, ಅಥವಾ ಫ್ಲೈಟ್ ಮೋಡ್​ನಲ್ಲಿಡಬೇಕಿತ್ತು. ಈಗ ಅನೇಕ ವಿಮಾನಗಳೊಳಗೆ ವೈಫೈ ಕನೆಕ್ಟಿವಿಟಿ ಕೊಡಲಾಗುತ್ತಿದೆ. ಭಾರತೀಯ ಏರ್​ಲೈನ್ಸ್ ಕಂಪನಿಗಳೂ ಇನ್-ಫ್ಲೈಟ್ ಇಂಟರ್ನೆಟ್ ಸೌಲಭ್ಯ ನೀಡುತ್ತವೆ.

ಇದನ್ನೂ ಓದಿ: Oil Prices Down: ಇಸ್ರೇಲ್-ಹಮಾಸ್ ಸಂಘರ್ಷ; ಕಳೆದ ವಾರ ಭರ್ಜರಿ ಏರಿಕೆ ಆಗಿದ್ದ ತೈಲ ಬೆಲೆ ಇಂದು ಅಲ್ಪ ಇಳಿಕೆ

ವಿಮಾನ ಪ್ರಯಾಣದ ವೇಳೆ ಇಂಟರ್ನೆಟ್ ಬಳಕೆ ನಿರ್ಬಂಧಿಸುವುದು ಯಾಕೆ?

ವಿಮಾನ ಪ್ರಯಾಣಿಸುವಾಗ ವಿವಿಧ ಸ್ಟೇಷನ್​ಗಳಿಂದ ಅದಕ್ಕೆ ಸಿಗ್ನಲ್​ಗಳು ಸಿಗುತ್ತಿರುತ್ತವೆ. ಫ್ಲೈಟ್​​ನೊಳಗೆ ಯಾರಾದರೂ ಮೊಬೈಲ್ ಬಳಸಿದರೆ ಅದರಿಂದ ವಿಮಾನದ ಕಮ್ಯೂನಿಕೇಶನ್ ಸಿಸ್ಟಂಗೆ ಅಡಚಣೆ ಆಗಬಹುದು. ಹೀಗಾಗಿ, ಫ್ಲೈಟ್​ನಲ್ಲಿ ಮೊಬೈಲ್ ಆಫ್ ಮಾಡಲು ಸೂಚಿಸಲಾಗುತ್ತದೆ.

ಈಗೆಲ್ಲಾ ವಿಮಾನದ ಕಮ್ಯೂನಿಕೇಶನ್ ಸಿಸ್ಟಂಗಳು ಸುಧಾರಣೆ ಆಗಿದ್ದು, ಇಂಟರ್ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ