ವೈದ್ಯರ ಎಡವಟ್ಟಿನಿಂದ ಎರಡು ವರ್ಷ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದ ಮಹಿಳೆ

ವೈದ್ಯರ ಒಂದು ಸಣ್ಣ ನಿರ್ಲಕ್ಷ್ಯಕ್ಕೆ,  ಇಂಗ್ಲೆಂಡ್ ಮೂಲದ ಮಹಿಳೆಯೊಬ್ಬರು ಚರ್ಮದ ಕ್ಯಾನ್ಸರ್​​​ ಬರೋಬ್ಬರಿ ಎರಡು ವರ್ಷಗಳ ಕಾಲ ರೋಗನಿರ್ಣಯವನ್ನು ಪಡೆದುಕೊಳ್ಳುತ್ತಾರೆ. ಆದರೆ ಮತ್ತೊಂದು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದಾಗ ಆಕೆಗೆ ಯಾವುದೇ ರೀತಿಯ ಕ್ಯಾನ್ಸರ್ ರೋಗ ಇಲ್ಲವೆಂಬುವುದು ಪತ್ತೆಯಾಗಿದೆ. ಇದರಿಂದ ಆಘಾತಕ್ಕೊಳಗಾದ ಮಹಿಳೆ, ಸುಖಾಸುಮ್ಮನೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗೆ ಒಳಪಡಿಸಿದ್ದಕ್ಕಾಗಿ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ, ಸತತ ಎರಡು ವರ್ಷಗಳ ಕಾನೂನು ಹೋರಾಟದಲ್ಲಿ ಜಯಗಳಿಸುವ ಮೂಲಕ ಭಾರಿ ಮೊತ್ತದ ಪರಿಹಾರವನ್ನು ಪಡೆದುಕೊಂಡಿದ್ದಾಳೆ.

ವೈದ್ಯರ ಎಡವಟ್ಟಿನಿಂದ ಎರಡು ವರ್ಷ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದ ಮಹಿಳೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 19, 2023 | 6:26 PM

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಅದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಇದು ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿರುತ್ತದೆ.  ಮತ್ತು ಸಮಯಕ್ಕೆ ಸರಿಯಾಗಿ ರೋಗನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಕ್ಯಾನ್ಸರ್  ರೋಗವನ್ನು ಜಯಿಸಬಹುದು. ಆದರೆ ಇಲ್ಲೊಬ್ಬ ಮಹಿಳೆ ಕ್ಯಾನ್ಸರ್ ರೋಗ ಇಲ್ಲದೆಯೇ  ಬರೋಬ್ಬರಿ ಎರಡು ವರ್ಷಗಳ ಕಾಲ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ನಂತರ ಈಕೆಗೆ ಯಾವುದೇ ರೀತಿಯ ಕ್ಯಾನ್ಸರ್  ಇಲ್ಲವೆಂಬುದು ಪತ್ತೆಯಾಗಿದೆ.

ವರದಿಗಳ ಪ್ರಕಾರ, ಯಾರ್ಕ್ಷೈರ್ ಮೂಲದ ಮೇಗನ್ ರಾಯ್ಲ್ ಎಂಬ 33 ವರ್ಷದ ಮಹಿಳೆ  ಲಂಡನ್ ನಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು, 2019 ರಲ್ಲಿ  ಆಕೆಗೆ ಚರ್ಮದಲ್ಲಿ ವಿಪರೀತ ತುರಿಕೆ ಕಾಣಿಸಿಕೊಂಡ ಕಾರಣ  ಆಕೆ ರಾಯಲ್ ಮಾರ್ಸ್ಡೆನ್ ಎಂಬ ಆಸ್ಪತ್ರೆಗೆ ದಾಖಲಾಗುತ್ತಾರೆ.  ಅಲ್ಲಿ ವೈದ್ಯರು ಈಕೆಗೆ ಚರ್ಮದ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ.  ಹಾಗೂ ಆಕೆ ರೋಗದಿಂದ ಬೇಗ ಗುಣಮುಖವಾಗಲು ರೋಗನಿರ್ಣಯವನ್ನು ಪಡೆದುಕೊಳ್ಳುತ್ತಾಳೆ. ಅಲ್ಲದೆ ಚಿಕಿತ್ಸೆಯ ಭಾಗವಾಗಿ ಆಕೆ ಶಸ್ತ್ರ ಚಿಕಿತ್ಸೆ ಮತ್ತು ಇಮ್ಯುನೊಥೆರಪಿಗೂ ಕೂಡಾ ಒಳಗಾಗುತ್ತಾಳೆ.

ನಂತರ 2021 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವಿದ್ದ ಕಾರಣ ಆಕೆ ಮತ್ತೊಂದು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲೆಂದು ಹೋಗುತ್ತಾಳೆ. ಅಲ್ಲಿ  ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಗೆ ಯಾವುದೇ  ರೀತಿಯ ಚರ್ಮದ ಕ್ಯಾನ್ಸರ್ ಇಲ್ಲ ಎಂಬುದು ಪತ್ತೆಯಾಗುತ್ತದೆ. ವೈದ್ಯರು ಈ ವಿಷಯವನ್ನು ಮೇಗನ್ ಅವರಿಗೆ ಹೇಳಿದಾಗ ಆಕೆ  ಆಘಾತಕ್ಕೆ ಒಳಗಾಗುತ್ತಾರೆ.

ಇದಾದ ಬಳಿಕ  ವೈದ್ಯರ ನಿರ್ಲಕ್ಷ್ಯಕ್ಕೆ ಆ ಮಹಿಳೆ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸುತ್ತಾರೆ.   ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ನ್ಯಾಯಾಂಗ ಹೋರಾಟದಲ್ಲಿ ಇದೀಗ ನ್ಯಾಯಾಲಯ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಿ , ರಾಯಲ್ ಮಾರ್ಸ್ಡೆನ್  NHS ಫೌಂಡೇಶನ್  ಮತ್ತು ಇಂಪೀರಿಯಲ್ ಕಾಲೇಜ್ ಹೆಲ್ತ್ಕೇರ್  NHS  ಫೌಂಡೇಶನ್ ಟ್ರಸ್ಟ್  ಮೇಗನ್ ಅವರಿಗೆ  ಭಾರೀ ಮೊತ್ತದ ಪರಿಹಾರವನ್ನು   ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: Viral Video: ಈ ಪುಟ್ಟ ಕಂದಮ್ಮನ ಡ್ಯಾನ್ಸ್ ನೋಡಿದ್ರೆ, ನೀವು ಬಾದಲ್ ಬರ್ಸಾ ಬಿಜುಲಿಗೆ ಸ್ಟೆಪ್​​​ ಹಾಕುವುದು ಖಂಡಿತ 

ಎರಡು ವರ್ಷಗಳ ಕಾನೂನು ಹೋರಾಟದಲ್ಲಿ ಜಯಗಳಿಸಿದ ಮೇಗನ್,  ಇಂತಹ ಘಟನೆಗಳು ನಡೆಯಬಹುದು ಎಂದು ಕಲ್ಪನೆ ಮಾಡಲು ಸಾಧ್ಯವಿಲ್ಲ, ಕ್ಯಾನ್ಸರ್ ಇದೆ ಎಂದು ಪತ್ತೆಯಾದಾಗ ನಾನು ಖಿನ್ನತೆಗೆ ಜಾರಿದ್ದೂ ಇದೆ.  ಎರಡು ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾಗಿದ್ದೇನೆ. ಆದರೆ ನನಗೆ ಕ್ಯಾನ್ಸರ್ ಇಲ್ಲ ಎಂದು ತಿಳಿದಾಗ ತುಂಬಾ ಆಘಾತಕ್ಕೊಳಗಾದೆ. ಅಲ್ಲದೆ ಕೋಪ ಮತ್ತು ಹತಾಶೆಯ ಭಾವನೆಯೂ ಉಂಟಾಯಿತು ಹೇಳಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ