AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hottest Chilli: ಇದು ವಿಶ್ವದ ಅತೀ ಖಾರದ ಮೆಣಸು, ವಿಶ್ವ ದಾಖಲೆ ಸೇರಿದ ಪೆಪ್ಪರ್ ಎಕ್ಸ್

ಈ ವಿಶ್ವದಲ್ಲಿ ಹಲವಾರು ಬಗೆಯ ಮೆಣಸಿನಕಾಯಿಗಳನ್ನು ಬೆಳೆಯಲಾಗುತ್ತದೆ. ಕೆಲವು ಮೆಣಸಿನಕಾಯಿಗಳು ಖಾರವಾಗಿದ್ದರೆ, ಕೆಲವು ಮೆಣಸಿನಕಾಯಿ ಅಷ್ಟೇನೂ ಖಾರವಿರುವುದಿಲ್ಲ.  ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ   ಮೆಣಸುಗಳನ್ನೇ ಹೆಚ್ಚಿನವರು ಅತೀ ಖಾರದ ಮೆಣಸು ಎಂದು ಭಾವಿಸುತ್ತಾರೆ. ಆದರೆ ಇದಕ್ಕಿಂತ ಸಾವಿರಪಟ್ಟು ಖಾರದ ಮೆಣಸಿನಕಾಯಿಯೊಂದಿದೆ.  ಇದೀಗ ಈ ಮೆಣಸು ವಿಶ್ವದ ಅತೀ ಖಾರಯುಕ್ತ ಮೆಣಸು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದೆ. 

World Hottest Chilli: ಇದು ವಿಶ್ವದ ಅತೀ ಖಾರದ ಮೆಣಸು, ವಿಶ್ವ ದಾಖಲೆ ಸೇರಿದ ಪೆಪ್ಪರ್ ಎಕ್ಸ್
ವೈರಲ್​​ ಪೋಸ್ಟ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 20, 2023 | 4:37 PM

ಮೆಣಸಿನಕಾಯಿಯಿಲ್ಲದೆ ಅಡುಗೆ ಪೂರ್ಣವಾಗಲು ಸಾಧ್ಯವೇ. ಅದರಲ್ಲೂ ನಮ್ಮ ದೇಶದ ಜನರು ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿಯೇ ಮೆಣಸಿನಕಾಯಿಯ ಕೃಷಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಹಲವು ಜಾತಿಗಳ ಮೆಣಸಿನಕಾಯಿಗಳಿವೆ. ಕೆಲವೊಂದು ಮೆಣಸಿನಕಾಯಿ ಖಾರವಾಗಿದ್ದರೆ, ಇನ್ನೂ ಕೆಲವು ಮೆಣಸಿನಕಾಯಿ ಖಾರವಿರುವುದಿಲ್ಲ. ಆದರೆ ವಿಶ್ವದ ಅತೀ ಖಾರವನ್ನು ಹೊಂದಿರುವ ಮೆಣಸಿನಕಾಯಿ ಯಾವುದೆಂದು ನಿಮಗೆ ಗೊತ್ತಾ? ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ   ಮೆಣಸುಗಳನ್ನೇ ಹೆಚ್ಚಿನವರು ಅತೀ ಖಾರದ ಮೆಣಸು ಎಂದು ಭಾವಿಸುತ್ತಾರೆ. ಆದರೆ ಇದಕ್ಕಿಂತ ಸಾವಿರಪಟ್ಟು ಖಾರದ ಮೆಣಸಿನಕಾಯಿಯೊಂದಿದೆ.  ಇದೀಗ ಈ ಮೆಣಸು ವಿಶ್ವದ ಅತೀ ಖಾರಯುಕ್ತ ಮೆಣಸು ಎಂಬ ವಿಶ್ವ ದಾಖಲೆಯನ್ನು ಮಾಡಿದೆ. ಅಷ್ಟಕ್ಕೂ ಈ ಮೆಣಸಿನಕಾಯಿ ಯಾವುದು ಅದನ್ನು ಎಲ್ಲಿ ಬೆಳೆಯಲಾಗುತ್ತದೆ ಎಂಬುದನ್ನು ನೋಡೋಣ.

ಕೆರೊಲಿನಾ ರೀಪರ್ ಅತೀ ಹೆಚ್ಚು ಖಾರವನ್ನು ಹೊಂದಿರುವ ಮೆಣಸು ಎಂದು ಹಲವರು ಭಾವಿಸಿದ್ದಾರೆ, ಆದರೆ ಈ ದಾಖಲೆಯನ್ನು ಪೆಪ್ಪರ್ ಎಕ್ಸ್ ಎಂಬ ಮೆಣಸು ತನ್ನದಾಗಿಸಿಕೊಂಡಿದೆ.  ಹೌದು ಈ ಹಿಂದೆ 2013 ರಲ್ಲಿ ಕೆರೊಲಿನಾ ರೀಪರ್ ಪೆಪ್ಪರ್ ವಿಶ್ವದ ಅತೀ ಖಾರದ ಮೆಣಸು ಎಂಬ ವಿಶ್ವ ದಾಖಲೆಯನ್ನು ಮಾಡಿತ್ತು. ಮೆಣಸಿನಕಾಯಿಗಳ  ಖಾರದ ಪ್ರಮಾಣವನ್ನು ಸ್ಕೋವಿಲ್ಲೆ ಹೀಟ್ ಯೂನಿಟ್ಸ್  (SHU) ಯಂತ್ರದಲ್ಲಿ ಅಳೆಯಲಾಗುತ್ತದೆ. ಅದರಲ್ಲಿ ರೀಪರ್ ಪೆಪ್ಪರ್  ಸುಮಾರು 1.64  ಮಿಲಿಯನ್  SHU ಪ್ರಮಾಣದ ಖಾರವನ್ನು ಹೊಂದಿದೆ.  ಆದರೆ ಪೆಪ್ಪರ್ ಎಕ್ಸ್   2.69 ಮಿಲಿಯನ್ SHU ಪ್ರಮಾಣದ ಖಾರವನ್ನು ಹೊಂದಿದ್ದು, ಅತೀ ಖಾರದ ಮೆಣಸು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಇದೀಗ ತನ್ನದಾಗಿಸಿದೆ.

ಇದನ್ನೂ ಓದಿ: ಅಪಘಾತದಲ್ಲಿ ವ್ಯಕ್ತಿ ಸಾವು, ತನಿಖೆ ವೇಳೆ ಬಯಲಾಯ್ತು ಕೊಲೆ ವಿಚಾರ

ಈ ಮೆಣಸಿನಕಾಯಿಯನ್ನು ಬೆಳೆದವರು ಯಾರು?

ಆಕಾರದಲ್ಲಿ ಕ್ಯಾಪ್ಸಿಕಂನಂತೆ ಕಾಣುವ ಸಣ್ಣ ಗಾತ್ರದ ಪೆಪ್ಪರ್ ಎಕ್ಸ್ ಮೆಣಸನ್ನು ಬೆಳೆದವರು ಅಮೇರಿಕಾದ ಪುಕರ್ಬಟ್ ಪೆಪ್ಪರ್ ಕಂಪೆನಿಯ ಮಾಲೀಕ ಹಾಗೂ ಸಂಸ್ಥಾಪಕ  ಎಡ್ ಕರಿ  ಎಂಬವರು. ಈ ಮೊದಲು ವಿಶ್ವದಾಖಲೆಯನ್ನು ಮಾಡಿದ ಕೆರೊಲಿನಾ ರೀಪರ್ ಮೆಣಸನ್ನು ಕೂಡಾ ಇವರೇ ಬೆಳೆದಿದ್ದು, ಇದೀಗ ತಮ್ಮ ದಾಖಲೆನ್ನು ತಾವೇ ಮುರಿದಿದ್ದಾರೆ. ಈ  ಪೆಪ್ಪರ್ ಎಕ್ಸ್  ತಳಿಯನ್ನು ಬೆಳೆಯಲು ಎಡ್ ಕರಿ ಅವರು ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿಗಳ ಕ್ರಾಸ್ ಬ್ರೀಡಿಂಗ್ ಮಾಡಿ, ಅಂತಿಮವಾಗಿ ಈ ಒಂದು ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ