Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅಪಘಾತದಲ್ಲಿ ವ್ಯಕ್ತಿ ಸಾವು, ತನಿಖೆ ವೇಳೆ ಬಯಲಾಯ್ತು ಕೊಲೆ ವಿಚಾರ

ಬೆಂಗಳೂರು ನಗರದ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪಘಾತದ ಮೂಲಕ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರು: ಅಪಘಾತದಲ್ಲಿ ವ್ಯಕ್ತಿ ಸಾವು, ತನಿಖೆ ವೇಳೆ ಬಯಲಾಯ್ತು ಕೊಲೆ ವಿಚಾರ
ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿ ಸಾವು, ತನಿಖೆ ವೇಳೆ ಬಯಲಾಯ್ತು ಕೊಲೆ ವಿಚಾರ
Follow us
Prajwal Kumar NY
| Updated By: Rakesh Nayak Manchi

Updated on: Oct 20, 2023 | 4:30 PM

ಬೆಂಗಳೂರು, ಅ.20: ನಗರದ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಗುಜರಿ ಅಂಗಡಿ ವ್ಯವಹಾರ ನಡೆಸುತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪಘಾತದ ಮೂಲಕ ಕೊಲೆ (Murder) ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಗುಜರಿ ಅಂಗಡಿ ವ್ಯವಹಾರ ನಡೆಸುತಿದ್ದ ಅಸ್ಗರ್ ಎಂಬಾತನ ಮೇಲೆ ತಡರಾತ್ರಿ ನಾಲ್ವರು ದಾಳಿ ನಡೆಸಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅಲ್ಲದೆ, ಇದೊಂದು ಅಪಘಾತ ಪ್ರಕರಣ ಎಂದು ಬಿಂಬಿಸುವ ಯತ್ನ ನಡೆಸಿದ್ದರು. ಆದರೆ, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ಅಸ್ಗರ್ ಹಾಗೂ ಆರೋಪಿಗಳ ನಡುವೆ ಕಳೆದ ಕೆಲ ದಿನಗಳ ಹಿಂದೆ ಪರಿಚಯ ಆಗಿತ್ತು. ಅದರಂತೆ ಅಸ್ಗರ್ ಬಳಿ ಆರೋಪಿಗಳು ಕಾರನ್ನು ಖರೀದಿಸಿದ್ದರು. ಈ ವೇಳೆ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಪ್ರಮುಖ ಹಾಗೂ ಅಸ್ಗರ್ ಮಧ್ಯೆ ಜಗಳ ನಡೆದಿತ್ತು. ಜಗಳದ ವೇಳೆ ಅಸ್ಗರ್ ಮೇಲೆ ಹಲ್ಲೆ ನಡೆಸಲಾಗಿತ್ತು.

ಇದನ್ನೂ ಓದಿ: ಹಾಸನ: ಕ್ಷುಲ್ಲಕ ಕಾರಣಕ್ಕೆ ಕೊಲೆ, ಮಡದಿಯಿಂದ ದೂರ ಇದ್ದವನ ಪ್ರಾಣಕ್ಕೆ ಕಂಟಕರಾದ ಎಣ್ಣೆ ಸ್ನೇಹಿತರು

ತನ್ನ ಮೇಲೆ ಹಲ್ಲೆ ನಡೆಸಿರುವ ಆರೋಪಿ ವಿರುದ್ಧ ಆಸ್ಗರ್, ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು 307 ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಚಾರ ತಿಳಿದ ಆರೋಪಿ, ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದನು. ಇದನ್ನು ಆಸ್ಗರ್ ನಿರಾಕರಿಸಿದ್ದರು.

ಹೀಗಾಗಿ, ನಿನ್ನೆ ದೂರವಾನಿ ಕರೆ ಮಾಡಿ ಮಾತಾಡುವ ನೆಪದಲ್ಲಿ ಆಸ್ಗರ್​ನನ್ನು ಕರೆಸಿದ್ದಾನೆ. ಈ ವೇಳೆ ಕೂಡ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಅಂತಾ ಹೇಳಿ ಗೆಳೆಯನ ಜೊತೆ ಬೈಕ್​ನಲ್ಲಿ ವಾಪಸ್ ಹೊರಟಿದ್ದಾನೆ. ಈ ವೇಳೆ ಆರೋಪಿಗಳು ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದರು.

ಘಟನೆಯಲ್ಲಿ ಆಸ್ಗರ್ ಸಾವನ್ನಪ್ಪಿದ್ದು, ಆತನ ಸ್ನೇಹಿತನ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ. ಆರಂಭದಲ್ಲಿ ಆ್ಯಕ್ಸಿಡೆಂಟ್ ಅಂತಾ ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರಿ ಪೊಲೀಸರು, ಆಸ್ಗರ್ ಗೆಳೆಯನ ಹೇಳಿಕೆ ಪಡೆದು ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯೊಬ್ಬನ್ನು ಬಂಧಿಸಿದ ಪೊಲೀಸರು, ಉಳಿದ ಮೂವರ ಬಂಧನಕ್ಕಾಗಿ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ