ಲೋಡ್ ಶೆಡ್ಡಿಂಗ್ ನಿಂದ ಕಂಗಾಲಾದ ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾ, ಕೋಟ್ಯಾಂತರ ರೂ. ಲಾಸ್
ಪೀಣ್ಯ ಕೈಗಾರಿಕಾ ಘಟಕದಲ್ಲಿ ಕಳೆದ ಹದಿನೈದು ದಿನಗಳಿಂದ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಈ ಹಿನ್ನಲೆ ಶೇ 30% ಲಾಸ್ ಆಗಿದೆ ಎಂದು ಪೀಣ್ಯಾ ಕೈಗಾರಿಕೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಪವರ್ ಕಟ್ ಮಾಡ್ತೀರುವುದರಿಂದಾಗಿ ಕೈಗಾರಿಕೆಗಳಲ್ಲಿ ರಿಜೆಕ್ಸನ್ ಪ್ರಮಾಣ ಏರಿಕೆಯಾಗಿದೆ. ಇದರಿಂದ ಲಾಭಕ್ಕಿಂತ ರಿಜೆಕ್ಸನ್ ನಷ್ಟವೇ ಹೆಚ್ಚಾಗಿದೆ.
ಬೆಂಗಳೂರು, ಅ.20: ದಕ್ಷಿಣಾ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ (Peenya Industrial Area) ಸದ್ಯ ಕರೆಂಟ್ ಕಣ್ಣಾಮುಚ್ಚಾಲೆಯಿಂದ ದಿನದಿಂದ ದಿನಕ್ಕೆ ನೆಲಕಚ್ಚುವ ಆತಂಕ ಎದುರಿಸುತ್ತಿದೆ. ಈಗಾಗಲೇ ಕೊವಿಡ್ ಸೇರಿದಂತೆ ನಾನಾ ಸಮಸ್ಯೆಗಳಿಂದ ನೆಲಕಚ್ಚಿರುವ ಪೀಣ್ಯ ಕೈಗಾರಿಕಾ ಘಟಕಕ್ಕೆ ಈಗ ಲೋಡ್ ಶೆಡ್ಡಿಂಗ್ (Load Shedding) ಬಿಗ್ ಶಾಕ್ ನೀಡಿದೆ. ಇದರಿಂದಾಗಿ ಕೋಟ್ಯಾಂತರ ರೂ. ಲಾಸ್ ಆಗಿದೆ.
ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಫ್ರೀ ಕರೆಂಟ್ ಎಫೆಕ್ಟ್ ಪೀಣ್ಯಾ ಕೈಗಾರಿಕಾ ಘಟಕಕ್ಕೆ ತಟ್ಟಿತಾ ಎನ್ನುವಂತಾಗಿದೆ. ಪೀಣ್ಯ ಕೈಗಾರಿಕಾ ಘಟಕದಲ್ಲಿ ಕಳೆದ ಹದಿನೈದು ದಿನಗಳಿಂದ ಕರೆಂಟ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಈ ಹಿನ್ನಲೆ ಶೇ 30% ಲಾಸ್ ಆಗಿದೆ ಎಂದು ಪೀಣ್ಯಾ ಕೈಗಾರಿಕೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಹದಿನೈದು ದಿನದಿಂದ ಪವರ್ ಕಟ್ ಮಾಡಲಾಗ್ತಿದೆ ಕೈಗಾರಿಕಾ ಘಟಕಗಳಲ್ಲಿ ಲೋಡ್ ಶೆಡ್ಡಿಂಗ್ ಶುರುವಾಗಿದೆಯಂತೆ. ಸದ್ಯ ಪೀಣ್ಯ ಕೈಗಾರಿಕಾ ಘಟಕದಲ್ಲಿ ಸಾವಿರಾರು ಸಣ್ಣಕೈಗಾರಿಕೆಗಳಿಂದ ಹಿಡದು ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳಿವೆ. ಪ್ರತಿ ನಿತ್ಯ ಇಲ್ಲಿ ಕೋಟ್ಯಾಂತರ ರೂಪಾಯಿ ಉದ್ಯಮ ನಿರ್ವಹಿಸುತ್ತಿವೆ. ಆದ್ರೆ ಸದ್ಯ ಕಳೆದ ಹದಿನೈದು ದಿನಗಳಿಂದ ಲೋಡ್ ಶೆಡ್ಡಿಂಗ್ ಮಾಡಲಾಗ್ತಿದ್ದು ಪೀಣ್ಯದಲ್ಲಿರುವ ಸಾವಿರಾರು ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆ ಶುರುವಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಪವರ್ ಕಟ್ ಮಾಡ್ತೀರುವುದರಿಂದಾಗಿ ಕೈಗಾರಿಕೆಗಳಲ್ಲಿ ರಿಜೆಕ್ಸನ್ ಪ್ರಮಾಣ ಏರಿಕೆಯಾಗಿದೆಯಂತೆ. ಇದರಿಂದ ಲಾಭಕ್ಕಿಂತ ರಿಜೆಕ್ಸನ್ ನಷ್ಟವೇ ಹೆಚ್ಚಾಗಿದೆಯಂತೆ. ಹೀಗಾಗಿ ಪೀಣ್ಯ ಕೈಗಾರಿಕಾ ಘಟಕ ಹಾಗೂ ಉದ್ಯಮಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗುತ್ತಿಗೆದಾರನ ಕಿಡ್ನ್ಯಾಪ್ ಮಾಡಿ 3 ಕೋಟಿಗೆ ಬೇಡಿಕೆ; ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ
ಸದ್ಯ ಪೀಣ್ಯದಲ್ಲಿ ಕರೆಂಟ್ ಸಮಸ್ಯೆಯಿಂದ ಕಂಗಾಲಾಗಿರುವ ಕೈಗಾರಿಕಾ ಉದ್ಯಮಿಗಳ ಮಾಲೀಕರು ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಳೆದ ಹದಿನೈದು ದಿನದಿಂದ ಪವರ್ ಕಟ್ ನಿಂದಾಗಿ ಕೋಟ್ಯಾಂತರ ರೂಪಾಯಿ ಆರ್ಥಿಕ ನಷ್ಟ ಅನಭವಿಸುತ್ತಿದ್ದು ಲೋಡ್ ಶೆಡ್ಡಿಂಗ್ ಮಾಡಿದ್ರೆ ಕೈಗಾರಿಕೆಗಳು ಆರ್ಥಿಕ ಪಾತಳಕ್ಕೆ ಕುಸಿಯುವ ಬಗ್ಗೆಯೂ ಆತಂಕ ಹೊರ ಹಾಕಿವೆ.
ಒಟ್ನಲ್ಲಿ ಕೊರೊನಾದಿಂದ ಪೀಣ್ಯ ಇಂಡಸ್ಟ್ರಿಯಲ್ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ವು. ಕಳೆದ ಕೆಲವು ದಿನಗಳಿಂದ ಮತ್ತೆ ಚೇತರಿಕೆಯ ಹಾದಿ ಹಿಡದಿವೆ. ಆದ್ರೆ ಇದರ ನಡುವೆ ಈಗ ವಿದ್ಯುತ್ ಶಾಕ್ ಇಂಡಸ್ಟ್ರಿಯಲ್ ಕಂಪನಿಗಳಿಗೆ ಸಂಕಷ್ಟ ತಂದಿದೆ. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದು ಇಂಧನ ಇಲಾಖೆಯೂ ಭರವಸೆ ಏನೋ ನೀಡಿದೆ. ಆದ್ರೆ ಸರ್ಕಾರ ಗೃಹ ಜ್ಯೋತಿಯ ಉಚಿತ ಕರೆಂಟ್ ಜೊತೆಗೆ ಕೈಗಾರಿಕಾ ಘಟಕ ಸೇರಿದಂತೆ ರಾಜ್ಯಕ್ಕೆ ಬೇಕಿರುವ ಅವಶ್ಯಕ ವಿದ್ಯುತ್ ಹೇಗೆ ನಿಭಾಯಿಸುತ್ತೆ ಅಂತ ಕಾದು ನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ