ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​: ತೀರ್ಪಿನ ವಿವರ ಬಿಡುಗಡೆ ಮಾಡಿದ ಹೈಕೋರ್ಟ್

ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​ಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್​​​​ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ  ವಜಾಗೊಳಿಸಿತ್ತು. ಯಾವೆಲ್ಲ ಕಾರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಕೇಸ್​ ವಜಾಗೊಳಿಸಲಾಗಿದೆ ಎಂಬುದಕ್ಕೆ ಇದೀಗ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ವಿವರ ಬಿಡುಗಡೆ ಮಾಡಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​: ತೀರ್ಪಿನ ವಿವರ ಬಿಡುಗಡೆ ಮಾಡಿದ ಹೈಕೋರ್ಟ್
ಡಿಸಿಎಂ ಡಿಕೆ ಶಿವಕುಮಾರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2023 | 6:01 PM

ಬೆಂಗಳೂರು, ಅಕ್ಟೋಬರ್​​​​​ 20: ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​ಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್​​​​ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ  ವಜಾಗೊಳಿಸಿತ್ತು. ಯಾವೆಲ್ಲ ಕಾರಣಕ್ಕೆಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಕೇಸ್​ ವಜಾಗೊಳಿಸಲಾಗಿದೆ ಎಂಬುದಕ್ಕೆ  ಇದೀಗ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ವಿವರ ಬಿಡುಗಡೆ ಮಾಡಲಾಗಿದೆ. ಸಿಬಿಐ 84 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಡಿಸಿಎಂ ಡಿಕೆ ಶಿವಕುಮಾರ್​ ಸಲ್ಲಿಸಿದ್ದ 2412 ಪುಟಗಳಷ್ಟು ದಾಖಲೆ ಪರಿಶೀಲಿಸಿದೆ. ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖಾ ಪ್ರಗತಿ ವರದಿ ಸಲ್ಲಿಸಿದ್ದು, ನಗದು ವ್ಯವಹಾರ ಬಗ್ಗೆ ಉಲ್ಲೇಖಿಸಲಾಗಿದೆ.

ಅಗಾಧ ಪ್ರಮಾಣದ ಅನುಮಾನಾಸ್ಪದ ನಗದು ವ್ಯವಹಾರ ಬಗ್ಗೆ ಉಲ್ಲೇಖಿಸಲಾಗಿದೆ. ಡಿಕೆ ಶಿವಕುಮಾರ್​ ಹಾಗೂ ಕುಟುಂಬದವರ 98 ಬ್ಯಾಂಕ್ ಖಾತೆ ಪರಿಶೀಲಿಸಲಾಗುತ್ತಿದೆ. ಇದನ್ನು ಪರಿಶೀಲಿಸಲು ಲೆಕ್ಕ ಪರಿಶೋಧಕರ ನೆರವು ಪಡೆಯಲಾಗಿದೆ. ಈವರೆಗೂ ತನಿಖೆಯನ್ನು ಪೂರ್ಣಗೊಳಿಸಲಾಗಿಲ್ಲ. ಹಾಗಾಗಿ ರಾಜಕೀಯ ದ್ವೇಷದಿಂದ ತನಿಖೆ ಎಂಬುದನ್ನು ಒಪ್ಪಲಾಗದು.

ಇದನ್ನೂ ಓದಿ: ಸಿಬಿಐ ತನಿಖೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ: ಡಿಕೆ ಶಿವಕುಮಾರ್​ಗೆ ಮತ್ತೆ ಸಂಕಷ್ಟ

ಐಟಿ ಇಲಾಖೆ, ಇಡಿ, ಸಿಬಿಐ ದಾಖಲೆಗಳನ್ನು ಸಂಗ್ರಹಿಸಿದೆ. ತನಿಖೆಯ ಈ ಹಂತದಲ್ಲಿ ಅಂತಿಮ ನಿರ್ಣಯ ಮಾಡಲಾಗದು. ಡಿಕೆ ಶಿವಕುಮಾರ್​ ಸಲ್ಲಿಸಿದ ದಾಖಲೆಗಳನ್ನು ತನಿಖಾಧಿಕಾರಿ ಪರಿಶೀಲಿಸಬೇಕು. ಕೋರ್ಟ್ ಈ ಹಂತದಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ತೀರ್ಪಿನಲ್ಲಿ ಸಿಬಿಐ ಸಲ್ಲಿಸಿದ ವರದಿ ಉಲ್ಲೇಖ ಮಾಡಿದ್ದು, ಮುಚ್ಚಿದ ಲಕೋಟೆಯಲ್ಲಿನ‌ ಮಾಹಿತಿ ಈ ಹಂತದಲ್ಲಿ ಬಹಿರಂಗ ಮಾಡಲಾಗದು. 70 ಸ್ಥಿರಾಸ್ತಿ, 30 ಚರಾಸ್ತಿ, 47 ಆದಾಯ, 125 ವಿವಿಧ ಖರ್ಚುಗಳ ಉಲ್ಲೇಖ ಮಾಡಿದ್ದು, ಹಲವು ಅನುಮಾನಾಸ್ಪದ ನಗದು ವ್ಯವಹಾರಗಳ ಉಲ್ಲೇಖವಿದೆ ಎಂದು ನ್ಯಾ.ಕೆ.ನಟರಾಜನ್‌ರವರಿದ್ದ ಹೈಕೋರ್ಟ್ ಪೀಠ ತೀರ್ಪು ನೀಡಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ 1 ದಿನ ಮಳೆ ಆಗದಿದ್ದರೇ ಸರ್ಕಾರಕ್ಕೆ 1 ಸಾವಿರ ಕೋಟಿ ರೂ. ನಷ್ಟ: ಡಿಕೆ ಶಿವಕುಮಾರ್​​​

ವಿಚಾರಣೆ ವೇಳೆ ಸಿಬಿಐ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದವೂ ಉಲ್ಲೇಖಿಸಲಾಗಿದೆ. ಕೆಲ ಆಸ್ತಿಗಳನ್ನು ಚುನಾವಣಾ ಪ್ರಮಾಣಪತ್ರದಲ್ಲಿ ಡಿಕೆ ಶಿವಕುಮಾರ್​ ಉಲ್ಲೇಖಿಸಿಲ್ಲ. 7.8 ಕೋಟಿಯ ಗ್ಲೋಬಲ್ ಮಾಲ್, ಕನಕಪುರ ನಗರದ ಆಸ್ತಿಗಳು, ಬೆನ್ನಿ ಸ್ಟೋನ್ ಗಾರ್ಡನ್, ಸದಾಶಿವನಗರದ ಮನೆ ಉಲ್ಲೇಖಿಸಿಲ್ಲ. ಪತ್ನಿಯ ಹೆಸರಿನಲ್ಲಿ 17.33 ಕೋಟಿ ರೂ. ಸ್ಥಿರಾಸ್ತಿ, 2.77 ಕೋಟಿ ರೂ. ಚರಾಸ್ತಿ, 2018ರವರೆಗೆ 43.12 ಕೋಟಿ ರೂ. ಆಸ್ತಿ 3.2 ಕೋಟಿ ರೂ. 10 ಚರಾಸ್ತಿ ಇರುವುದು ಪತ್ತೆಯಾಗಿದೆ. ಮಕ್ಕಳ ಹೆಸರಿನಲ್ಲಿ 61.75 ಕೋಟಿ ರೂ, 25.9 ಕೋಟಿ ರೂ. ಸ್ಥಿರಾಸ್ತಿ, ಅವಲಂಬಿತ ಮಕ್ಕಳ ಹೆಸರಿನಲ್ಲಿ ಆಸ್ತಿ ಇರುವುದಾಗಿ ವಾದ ಮಂಡಿಸಲಾಗಿದೆ. ಆದರೆ ಕೋರ್ಟ್ ಲೆಕ್ಕ ಪರಿಶೋಧಕರಂತೆ ಈಗ ಪರಿಶೀಲಿಸಲಾಗದು. ಅಂತಿಮ ವರದಿ ಸಲ್ಲಿಸಿದ ಬಳಿಕವಷ್ಟೇ ಪರಿಶೀಲಿಸಬಹುದು ಎಂದು  ನ್ಯಾ.ಕೆ.ನಟರಾಜನ್‌ರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.