ಪೂರ್ಣಿಮಾ ಶ್ರೀನಿವಾಸ್ ಅವರೊಂದಿಗೆ ಯಾದವ ಸಮುದಾಯದ ಅನೇಕರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ: ಡಿಕೆ ಶಿವಕುಮಾರ್

ಪೂರ್ಣಿಮಾ ಶ್ರೀನಿವಾಸ್ ಅವರೊಂದಿಗೆ ಯಾದವ ಸಮುದಾಯದ ಅನೇಕರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2023 | 4:55 PM

ಎಲ್ಲರಿಗೂ ಗೊತ್ತಿರುವ ಹಾಗೆ ಕೃಷ್ಣಪ್ಪ ಅವರಂತೆ ಪೂರ್ಣಿಮಾ ಕೂಡ ಯಾದವ (ಗೊಲ್ಲ) ಸಮುದಾಯದ ಪ್ರಮುಖ ಮತ್ತು ಬಲಿಷ್ಠ ನಾಯಕಿರ ಎನಿಸಿಕೊಂಡಿದ್ದಾರೆ. ರಾಜದ ನಾನಾ ಭಾಗಗಳಿಂದ ಸುಮಾರು ಐದು ಸಾವಿರ ಜನ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವರೆಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ನವರಾತ್ರಿ ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಮತ್ತು ಕೆಪಿಸಿಸಿ ಕಚೇರಿಯಲ್ಲೂ (KPCC Office) ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎ ಕೃಷ್ಣಪ್ಪ (A Krishnappa) ಅವರ ಮಗಳು ಹಾಗೂ ಹಿರಿಯೂರಿನ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Purnima Srinivas) ಇಂದು ತಮ್ಮ ಪತಿ ಹಾಗೂ ಯಾದವ ಸಮುದಾಯದ ಅಪಾರ ಬೆಂಬಲಿಗರೊಡನೆ ಕಾಂಗ್ರೆಸ್ ಪಕ್ಷ ಸೇರಿದರು. ಅವರೆಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇವತ್ತು ಪೂರ್ಣಿಮಾ ಮತ್ತು ಶ್ರೀನಿವಾಸ್ ಅವರಲ್ಲದೆ ಪ್ರವರ್ಗ 1 ಜಾತಿ ಒಕ್ಕೂಟ ಮತ್ತು ಯಾದವ ಸಮುದಾಯದ ಅನೇಕ ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಎಲ್ಲರಿಗೂ ಗೊತ್ತಿರುವ ಹಾಗೆ ಕೃಷ್ಣಪ್ಪ ಅವರಂತೆ ಪೂರ್ಣಿಮಾ ಕೂಡ ಯಾದವ (ಗೊಲ್ಲ) ಸಮುದಾಯದ ಪ್ರಮುಖ ಮತ್ತು ಬಲಿಷ್ಠ ನಾಯಕಿರ ಎನಿಸಿಕೊಂಡಿದ್ದಾರೆ. ರಾಜದ ನಾನಾ ಭಾಗಗಳಿಂದ ಸುಮಾರು ಐದು ಸಾವಿರ ಜನ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವರೆಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ