ಹಾಸನ: ಕ್ಷುಲ್ಲಕ ಕಾರಣಕ್ಕೆ ಕೊಲೆ, ಮಡದಿಯಿಂದ ದೂರ ಇದ್ದವನ ಪ್ರಾಣಕ್ಕೆ ಕಂಟಕರಾದ ಎಣ್ಣೆ ಸ್ನೇಹಿತರು
ಹತ್ಯೆಗೀಡಾದ ಕಾಂತರಾಜು ಎರಡು ತಿಂಗಳಿನಿಂದ ಇದ್ದ ಕೆಲಸನವನ್ನು ಬಿಟ್ಟು ತಂಗ್ಯಮ್ಮ ಎನ್ನುವವರ ಪುಟ್ಟ ರೂಂ ಒಂದನ್ನ ಬಾಡಿಗೆ ಪಡೆದು ಒಂದು ತಿಂಗಳ ಕಾಲ ಇರ್ತೀನಿ ಅಷ್ಟೇ, ನಂತರ ಊರಿಗೆ ಹೋಗ್ತಿನಿ ಎಂದು 15 ದಿನಗಳ ಹಿಂದೆ ಬಂದು ರೂಂ ಬಾಡಿಗೆಗೆ ತೆಗೆದುಕೊಂಡಿದ್ದನಂತೆ.
ಫಾಸ್ಟ್ ಫುಡ್ ತಯಾರು ಮಾಡೋ ವೃತ್ತಿ ಮಾಡಿಕೊಂಡಿದ್ದ ಆತ ಅದೊಬ್ಬ ಮಹಿಳೆ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ, ಪದೇ ಪದೆ ಇವನು ನನಗೆ ತೊಂದ್ರೆ ಕೊಡ್ತಾನೆ ಅಂತಾ ಆಕೆ ತನ್ನ ಪರಿಚಿತರ ಜೊತೆ ಹೇಳಿಕೊಂಡಿದ್ಲಂತೆ, ವಿನಾಕಾರಣ ಮಹಿಳೆಗೆ ಯಾಕೆ ಕಾಟ ಕೊಡ್ತೀರಾ ಎಂದು ಬುದ್ದಿ ಹೇಳೋಕೆ ಬಂದ ಕಿರಾತಕರು ಕುಡಿದ ಅಮಲಿನಲ್ಲಿದ್ದವನ ಮೇಲೆ ಹಲ್ಲೆ ಮಾಡಿದ್ದಾರೆ, ನನ್ನ ಮೇಲೆ ಯಾಕ್ರೋ ಹಲ್ಲೆ ಮಾಡ್ತೀರಾ ಎಂದು ತಿರುಗಿ ಬಿದ್ದವನ ಮೇಲೆ ಪ್ರತಾಪ ತೋರಿದ ಪಾಪಿಗಳು ಮನಸೋ ಇಚ್ಚೆ ಹಲ್ಲೆ ಮಾಡಿ ಕೊಂದೇ ಬಿಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪರಿಚಿತನನ್ನೆ ಕೊಂದ ಪಾತಕಿಗಳು (man murder) ಎಸ್ಕೇಪ್ ಆಗಿರುವ ಕೇಸ್ ದಾಖಲಿಸಿಕೊಂಡಿರುವ ಹಾಸನ ಪೊಲೀಸರು (Hassan) ಆರೊಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮಹಿಳೆ ಜೊತೆ ಕಿರಿಕ್ ಆರೋಪ- ಅದರಿಂದಾಗಿ ಅಡುಗೆ ಬಟ್ಟನ ಬರ್ಬರ ಹತ್ಯೆ. ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿ ಕೊಂದು ಮುಗಿಸಿದ್ರಾ ಪಾಪಿಗಳು.. ಮದುವೆಯಾಗಿ ಮಡದಿಯಿಂದ ದೂರ ಇದ್ದವನ ಪ್ರಾಣಕ್ಕೆ ಕಂಟಕರಾದ ಸ್ನೇಹಿತರು. ಹೌದು ಮೊನ್ನೆ ಮಂಗಳವಾರ ರಾತ್ರಿ ಹಾಸನ ನಗರದ ಅರಸೀಕೆರೆ ರಸ್ತೆಯ ಬಿ. ಕಾಟಿಹಳ್ಳಿ ಯ ಮುಖ್ಯ ರಸ್ತೆಯಲ್ಲಿ ಕಾಂತರಾಜ್ (45) ಎಂಬಾತನ ಬರ್ಬರ ಹತ್ಯೆ ನಡೆದಿದೆ.
ಮೂಲತಃ ಅರಕಲಗೂಡು ಪಟ್ಟಣದವನಾದ ಕಾಂತರಾಜು ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿ ಇಲ್ಲಿನ ಫಾಸ್ಟ್ ಫುಡ್ ಹೊಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ, ತಿಂಗಳ ಹಿಂದೆ ಕೆಲಸ ಬಿಟ್ಟು ಅಲೆಯುತ್ತಿದ್ದವನು ಮೊನ್ನೆ ರಾತ್ರಿ ಬರ್ಬರವಾಗಿ ಕೊಲೆಯಾಗಿದ್ದಾರೆ. ರಾತ್ರಿ 11 ಗಂಟೆಯಲ್ಲಿ ನಾಲ್ವರು ಯುವಕರು ಕಾಂತರಾಜು ಮೇಲೆ ಹಲ್ಲೆ ಮಾಡುತ್ತಿರುವುದನ್ನು ಮಹಿಳೆಯೊಬ್ಬರು ನೋಡಿ, ಜಗಳ ಬಿಡಿಸಿದ್ದಾರೆ. ಅಂದಹಾಗೆ ಆ ಮಹಿಳೆಯ ಬಾಡಿಗೆ ರೂಮಿನಲ್ಲೇ ಕಾಂತರಾಜು ವಾಸವಾಗಿದ್ದ.
ಆದ್ರೆ ಬೆಳಗಾಗುವಷ್ಟರಲ್ಲಿ ಆತನ ರೂಂ ಸಮೀಪವೇ ಸಂಪೂರ್ಣ ಬೆತ್ತಲಾದ ಪರಿಸ್ಥಿತಿಯಲ್ಲಿ ಕಾಂತರಾಜ್ ಮೃತದೇಹ ಪತ್ತೆಯಾಗಿದೆ. ಕಲ್ಲು ಇಟ್ಟಿಗೆ ದೊಣ್ಣೆಗಳಿಂದ ಹಲ್ಲೆ ಮಾಡಿರೊ ಆರೋಪಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಡುಗೆ ಕೆಲಸ ಮಾಡಿಕೊಂಡಿದ್ದ ಕಾಂತರಾಜು ಕುಡಿತದ ಚಟಕ್ಕೆ ದಾಸನಾಗಿದ್ದ. ಆದ್ರೆ ಮೊನ್ನೆ ರಾತ್ರಿ ಏನಾಯ್ತೊ ಗೊತ್ತಿಲ್ಲ, ಯುವಕರ ಗುಂಪು ಈತನ ಮೇಲೆ ಅಟ್ಯಾಕ್ ಮಾಡಿದೆ, ಅವರ ಹಲ್ಲೆಯಿಂದಲೇ ಕಾಂತರಾಜ್ ಮೃತಪಟ್ಟಿದ್ದಾನೆ ಎನ್ನುತ್ತಾರೆ ಕಾಂತರಾಜ್ ಮನೆ ಮಾಲೀಕರಾದ ತಂಗ್ಯಮ್ಮ.
Also Read: ಹಾಸನ – ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಿತ್ತಾಡಿಕೊಂಡ ಶಿವಲಿಂಗೇಗೌಡ, ಹೆಚ್ಕೆ ಸುರೇಶ್
ಹತ್ಯೆಗೀಡಾದ ಕಾಂತರಾಜು ಎರಡು ತಿಂಗಳಿನಿಂದ ಇದ್ದ ಕೆಲಸನವನ್ನು ಬಿಟ್ಟು ತಂಗ್ಯಮ್ಮ ಎನ್ನುವವರ ಪುಟ್ಟ ರೂಂ ಒಂದನ್ನ ಬಾಡಿಗೆ ಪಡೆದು ಒಂದು ತಿಂಗಳ ಕಾಲ ಇರ್ತೀನಿ ಅಷ್ಟೇ, ನಂತರ ಊರಿಗೆ ಹೋಗ್ತಿನಿ ಎಂದು 15 ದಿನಗಳ ಹಿಂದೆ ಬಂದು ರೂಂ ಬಾಡಿಗೆಗೆ ತೆಗೆದುಕೊಂಡಿದ್ದನಂತೆ.
ಆತನಿಗೆ ಬುದ್ದಿ ಹೇಳೋಕೆ ಅಂತಾ ಮೊನ್ನೆ ರಾತ್ರಿ ಹೋಗಿದ್ದ ಹುಡುಗರು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ತೀವ್ರ ಹಲ್ಲೆಯಿಂದ ಕುಸಿದು ಬಿದ್ದ ಕಾಂತರಾಜ್ ಮೃತಪಟ್ಟಿದ್ದಾನೆ. ವೆಂಕಟೇಶ್, ಜೀವನ್, ಸಂಜು, ಮತ್ತು ದುಶ್ಯಂತ್ ಎಂಬ ನಾಲ್ವರು ಹಲ್ಲೆ ಮಾಡಿದ್ದಾರೆ. ಕೊಲೆ ಮಾಡೋ ಉದ್ದೇಶದಿಂದಲೇ ಹಲ್ಲೆ ಮಾಡಿದ್ದು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಕಾಂತರಾಜು ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹಾಸನ ಬಡಾವಣೆ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡಿರೊ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹಾಸನ ಎಸ್ಪಿ ಮೊಹಮ್ಮದ್ ಸುಜೇತ ತಿಳಿಸಿದ್ದಾರೆ. ಒಟ್ನಲ್ಲಿ ಹಂತಕರ ಬಂಧನದ ಬಳಿಕ ಕೊಲೆ ಹಿಂದಿನ ಅಸಲಿ ಸತ್ಯ ಬಯಲಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ