Expensive Milk: 1 ಲೀಟರ್ ಇಲಿ ಹಾಲಿನ ಬೆಲೆ 18 ಲಕ್ಷ…! ಯಾಕಿಷ್ಟು ದುಬಾರಿ ಗೊತ್ತಾ?
ಸಾಮಾನ್ಯವಾಗಿ ಯಾವುದೇ ಪ್ರಯೋಗಗಳನ್ನು ಮಾಡುವಂತಹ ಸಮಯದಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡುವುದನ್ನು ನೀವು ಕೇಳಿರುತ್ತೀರಿ. ಆದರೆ ಇತ್ತೀಚೆಗಷ್ಟೇ ಇಲಿಯ ಹಾಲಿನ ಕುರಿತು ಪ್ರಯೋಗ ಒಂದು ನಡೆದಿದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ, ಇಲಿ ಸಾವಿರಾರು ಲೀಟರ್ ಹಾಲು ಕೊಡುವುದಿಲ್ಲ. ಹೌದು ಒಂದು ಲೀಟರ್ ಇಲಿ ಹಾಲಿಗೆ ಸುಮಾರು 40 ಸಾವಿರ ಇಲಿಗಳ ಅಗತ್ಯವಿದೆ.
ಸಾಮಾನ್ಯವಾಗಿ ಯಾವುದೇ ಪ್ರಯೋಗಗಳನ್ನು ಮಾಡುವಂತಹ ಸಮಯದಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡುವುದನ್ನು ನೀವು ಕೇಳಿರುತ್ತೀರಿ. ಆದರೆ ಇತ್ತೀಚೆಗಷ್ಟೇ ಇಲಿಯ ಹಾಲಿನ ಕುರಿತು ಪ್ರಯೋಗ ಒಂದು ನಡೆದಿದೆ. ಇದೀಗಾಗಲೇ ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತಿದ್ದು, ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಿದೆ ಎಂಬುದು ಸಂಶೋಧನೆಯೊಂದರಲ್ಲಿ ಬಹಿರಂಗಪಡಿಸಿದ್ದು, ಹಿಂದೂಸ್ತಾನ್ ಟೈಮ್ಸ್ ತೆಲುಗಿನಲ್ಲಿ ವರದಿಯಾಗಿದೆ.
ಇಲಿ ಹಾಲು ಯಾಕಿಷ್ಟು ದುಬಾರಿ?
ಇತರ ಪ್ರಾಣಿಗಳಿಗೆ ಹೋಲಿಸಿದರೆ, ಇಲಿ ಸಾವಿರಾರು ಲೀಟರ್ ಹಾಲು ಕೊಡುವುದಿಲ್ಲ. ಒಂದು ಹಸು ವರ್ಷಕ್ಕೆ ಸುಮಾರು 10,000 ಲೀಟರ್ ಹಾಲು ನೀಡುತ್ತದೆ. ನೀಲಿ ತಿಮಿಂಗಿಲವು ದಿನಕ್ಕೆ 600 ಲೀಟರ್ ಹಾಲು ಉತ್ಪಾದಿಸುತ್ತದೆ. ಆದರೆ ಇಲಿಯಿಂದ ಒಂದು ಲೀಟರ್ ಹಾಲು ಪಡೆಯುವುದು ಅಷ್ಟು ಸುಲಭವಲ್ಲ. ಹೌದು ಒಂದು ಲೀಟರ್ ಇಲಿ ಹಾಲಿಗೆ ಸುಮಾರು 40 ಸಾವಿರ ಇಲಿಗಳ ಅಗತ್ಯವಿದೆ. ಇದಲ್ಲದೇ 30 ನಿಮಿಷಗಳ ಪ್ರಕ್ರಿಯೆಯಲ್ಲಿ ಸ್ವಲ್ಪ ಹಾಲು ಇಲಿಯಿಂದ ಹೊರಬರುತ್ತದೆ. ಅದಕ್ಕೆ ಸಾಕಷ್ಟು ಶ್ರಮವೂ ಬೇಕು. ಅದಕ್ಕಾಗಿಯೇ ಒಂದು ಲೀಟರ್ ಇಲಿ ಹಾಲಿಯ ಬೆಲೆ 23 ಸಾವಿರ ಯುರೋಗಳು ಅಂದರೆ ಸುಮಾರು 18 ಲಕ್ಷ ರೂಪಾಯಿ.
ಇದನ್ನೂ ಓದಿ: ಯುವರಾಜ್ ಸಿಂಗ್ ಪತ್ನಿ ಹೆಝೆಲ್ ಕೀಚ್ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ
40 ಸಾವಿರ ಇಲಿಗಳಿಂದ ಒಂದು ಲೀಟರ್ ಹಾಲು ತೆಗೆಯುವುದು ಸಾಮಾನ್ಯ ಸಂಗತಿಯಲ್ಲ. ಹಾಗಾಗಿಯೇ ಈ ಹಾಲಿನ ಬೆಲೆ ದುಬಾರಿಯಾಗಿದೆ. ಮಲೇರಿಯಾವನ್ನು ಗುಣಪಡಿಸಲು ಬಳಸುವುದರ ಜೊತೆಗೆ, ಇಲಿ ಹಾಲನ್ನು ಸಂಶೋಧನಾ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಇಲಿಗಳ ಮೇಲೆ ಅನೇಕ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಪ್ರಯೋಗಾಲಯದಲ್ಲಿ ಇಲಿ ಭ್ರೂಣಗಳನ್ನು ಉತ್ಪಾದಿಸಲು ವೈದ್ಯರು ಹೊಸ ವಿಧಾನಗಳನ್ನು ಸಂಶೋಧಿಸುತ್ತಿದ್ದಾರೆ. ಎರಡು ಇಲಿಗಳಿಂದ ಭ್ರೂಣಗಳನ್ನು ಉತ್ಪಾದಿಸುವ ಪ್ರಯೋಗವನ್ನು ಈಗಾಗಲೇ ಮಾಡಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಚೀನಾದ ಪ್ರಯೋಗಾಲಯದಲ್ಲಿ ಈ ಹಿಂದೆ ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಇದರಿಂದಾಗಿ ಸಿಸೇರಿಯನ್ ಮೂಲಕ ಹತ್ತು ಇಲಿ ಮರಿಗಳಿಗೆ ಜನ್ಮ ನೀಡಿತ್ತು. ‘ರ್ಯಾಟ್ ಮಾಡೆಲ್ 6’ ಹೆಸರಿನಲ್ಲಿ ಈ ಪ್ರಯೋಗ ಮಾಡಲಾಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:02 pm, Wed, 18 October 23