Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇ ಭಗವಂತಾ! ರುಚಿಕರವಾಗಿದೆ ಎಂದು ನೀವು ಚಪ್ಪರಿಸಿಕೊಂಡು ಸವಿಯುವ ನೂಡಲ್ಸ್ ಹೇಗೆ ತಯಾರಿಸುತ್ತಾರೆ ನೀವೇ ನೋಡಿ!

Noodles Making Food Factory: ವೈರಲ್ ಆದ ವೀಡಿಯೋದಲ್ಲಿ, ನೂಡಲ್ಸ್ ತಯಾರಿಸುವ ಇಡೀ ಪ್ರಕ್ರಿಯೆಯಲ್ಲಿ ಹಿಟ್ಟನ್ನು ಕಲಸುವುದರಿಂದ ಪ್ರಾರಂಭಿಸಿ, ನೂಡಲ್ಸ್ ಅನ್ನು ಹಬೆಯಲ್ಲಿ ಬೇಯಿಸುವುದು ಮತ್ತು ಅಂತಿಮವಾಗಿ ಪ್ಯಾಕಿಂಗ್ ಮಾಡುವವರೆಗಿನ ಪ್ರಕ್ರಿಯೆಯನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇಲ್ಲಿ ಶುಚಿತ್ವದ ಮಾನದಂಡಗಳನ್ನು ಪಾಲಿಸುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ.

ಹೇ ಭಗವಂತಾ! ರುಚಿಕರವಾಗಿದೆ ಎಂದು ನೀವು ಚಪ್ಪರಿಸಿಕೊಂಡು ಸವಿಯುವ ನೂಡಲ್ಸ್ ಹೇಗೆ ತಯಾರಿಸುತ್ತಾರೆ ನೀವೇ ನೋಡಿ!
ರುಚಿಕರವಾಗಿದೆ ಎಂದು ಸವಿಯುವ ನೂಡಲ್ಸ್ ಹೇಗೆ ತಯಾರಿಸುತ್ತಾರೆ ನೀವೇ ನೋಡಿ!
Follow us
ಸಾಧು ಶ್ರೀನಾಥ್​
|

Updated on:Oct 18, 2023 | 3:00 PM

ಪ್ರತಿದಿನ ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ಹಲವಾರು ರೀತಿಯ ವೈರಲ್ ವೀಡಿಯೊಗಳನ್ನು ನೋಡುತ್ತೇವೆ.. ಇವುಗಳಲ್ಲಿ ಹೆಚ್ಚಿನವು ಆಹಾರ ಕುರಿತಾದ ವೀಡಿಯೊಗಳನ್ನು ಒಳಗೊಂಡಿರುತ್ತವೆ. ಆಹಾರ ತಯಾರಿಸುವ ಮತ್ತು ತಿನ್ನುವ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಆದರೆ ಕೆಲವು ಆಹಾರದ ವೀಡಿಯೊಗಳನ್ನು ನೋಡುವುದರಿಂದ ನಮ್ಮ ಕುತೂಹಲ ಮತ್ತು ತಿನ್ನುವ ಬಯಕೆ ಎರಡನ್ನೂ ಕೊಲ್ಲುತ್ತದೆ. ಇದಲ್ಲದೆ, ಅಂತಹ ವೀಡಿಯೊಗಳನ್ನು ನೋಡುವುದರಿಂದ ಅಸಹ್ಯ, ಭಯ ಅಥವಾ ಆತಂಕಕ್ಕೆ ಕಾರಣವಾಗಬಹುದು. ಈ ರೀತಿಯ ವೀಡಿಯೊಗಳ ಕಂಟೆಂಟ್ ಅನ್ನು ನೋಡಿದಾಗ ಅಲ್ಲಿನ ನೈರ್ಮಲ್ಯದ ಪರಿಸ್ಥಿತಿಗಳು, ಶುಚಿತ್ವ ಇಲ್ಲದಿರುವುದು, ಆಹಾರ ತಯಾರಿಕೆ ಕ್ರಮಗಳ ಬಗ್ಗೆ ಅಸಡ್ಡೆ ತೋರುವುದು ಕಂಡಾಗ ನೆಟಿಜನ್‌ಗಳು ಹೆಚ್ಚು ಚಿಂತೆಗೀಡಾಗುತ್ತಾರೆ. ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟ್ರೀಟ್ ಫುಡ್ ಸ್ಟಾಲ್ ಗಳಿಗೆ ನೂಡಲ್ಸ್ ಮಾಡುವ ಈ ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ವೀಡಿಯೋದಲ್ಲಿ, ನೂಡಲ್ಸ್ ತಯಾರಿಸುವ ಇಡೀ ಪ್ರಕ್ರಿಯೆಯಲ್ಲಿ ಹಿಟ್ಟನ್ನು ಕಲಸುವುದರಿಂದ ಪ್ರಾರಂಭಿಸಿ, ನೂಡಲ್ಸ್ ಅನ್ನು ಹಬೆಯಲ್ಲಿ ಬೇಯಿಸುವುದು ಮತ್ತು ಅಂತಿಮವಾಗಿ ಪ್ಯಾಕಿಂಗ್ ಮಾಡುವವರೆಗಿನ ಪ್ರಕ್ರಿಯೆಯನ್ನು ವೀಡಿಯೊದಲ್ಲಿ ವಿವರವಾಗಿ ತೋರಿಸಲಾಗಿದೆ. ಇಲ್ಲಿ ಶುಚಿತ್ವದ ಮಾನದಂಡಗಳನ್ನು ಪಾಲಿಸುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಲ್ಲಿ ಸಂಪೂರ್ಣವಾಗಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಅಲ್ಲಿನ ಸಿಬ್ಬಂದಿಯಂತೂ ಕಾಲಿನಿಂದ ತುಳಿದುಕೊಂಡೇ ಒಡಾಡುತ್ತಿದ್ದಾರೆ. ಹೀಗೆ ತಯಾರಿಸಿದ ನೂಡಲ್ಸ್ ಅವರು ನಡೆದಾಡುತ್ತಿದ್ದ ನೆಲದ ಮೇಲೆ ರಾಶಿ ರಾಶಿ ಹಾಕಿದ್ದರು. ಒಂದಲ್ಲ ಒಂದು ಕಡೆ.. ಆರಂಭದಿಂದ ಕೊನೆಯವರೆಗೂ ಪ್ರತಿ ಬಾರಿಯೂ ಎಲ್ಲೆಂದರಲ್ಲಿ ಅಶುಚಿತ್ವವೇ ಎದ್ದುಕಾಣುತ್ತಿದೆ. ಅದೇನೇ ಇರಲಿ, ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ. ವೈರಲ್ ವಿಡಿಯೋ ನೋಡಿ ನೀವೂ ಶಾಕ್ ಆಗುತ್ತೀರಿ.

ವೈರಲ್ ಆಗಿರುವ ವಿಡಿಯೋ ಕೋಲ್ಕತ್ತಾದಿಂದ ಬಂದಿದೆ ಎನ್ನಲಾಗಿದೆ. ಇದು ಸಂಪೂರ್ಣ ಅನೈರ್ಮಲ್ಯದ ವಾತಾವರಣದಲ್ಲಿ ನೂಡಲ್ಸ್ ತಯಾರಿಸುವ ಪ್ರಕ್ರಿಯೆಯನ್ನು ತೋರಿಸಿದೆ. ಇನ್ನೂ ಹಲವಾರು ಆಹಾರ ತಯಾರಿ ಘಟಕಗಳು ಹೀಗೆಯೇ ಕೆಲಸ ಮಾಡುತ್ತವೆ ಎಂದು ವಿಡಿಯೋ ನೋಡಿದ ಹಲವರು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ. ಅಂತಹ ಆಹಾರವನ್ನು ಸೇವಿಸಿದ ನಂತರ ಜನರ ಸ್ಥಿತಿಯ ಬಗ್ಗೆ ಅನೇಕರು ಚಿಂತಿತರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:57 pm, Wed, 18 October 23

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ