ಒಂದು ವರ್ಷ ವಯಸ್ಸಿನ ಮಗುವಿನ ಈಜುವ ಸ್ಟೈಲ್ ನೋಡಿದ್ರೆ ನೀವು ಅಚ್ಚರಿ ಪಡುವುದು ಖಂಡಿತ
ಇತ್ತೀಚಿನ ದಿನಗಳಲ್ಲಿ ಮಕ್ಕಳ ರಕ್ಷಣೆಗಾಗಿ ಎಲ್ಲ ಕಡೆಗಳಲ್ಲಿಯೂ ಸ್ವಿಮ್ಮಿಂಗ್ ಕ್ಲಾಸ್ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನು ಸರಿಯಾಗಿ ಒಂದು ವರ್ಷವೂ ಆಗದಿರುವ ಮಗುವಿಗೆ ಈಜು ಹೇಳಿಕೊಡುವ ವಿಡಿಯೋ ಒಂದು ಎಲ್ಲೆಡೆ ವೈರೆಲ್ ಆಗಿದೆ. ಈ ಮಗು ಹೇಗೆ ಸ್ವಿಮ್ಮಿಂಗ್ ಕಲಿಯಿತು ಎಂಬುದನ್ನು ನೀವೇ ನೋಡಿ.
ಈಜು ಎನ್ನುವುದು ಜೀವ ಹೋಗುತ್ತದೆ ಎನ್ನುವಾಗ ಉಪಯೋಗಕ್ಕೆ ಬರುವ ಕಲೆ. ಇದು ಎಲ್ಲರಿಗೂ ಕರಗತವಾಗುವುದಿಲ್ಲ. ಇದರಲ್ಲಿಯೇ ಪಳಗಿದವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ರಕ್ಷಣೆಗಾಗಿ ಎಲ್ಲ ಕಡೆಗಳಲ್ಲಿಯೂ ಸ್ವಿಮ್ಮಿಂಗ್ ಕ್ಲಾಸ್ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನು ಸರಿಯಾಗಿ ಒಂದು ವರ್ಷವೂ ಆಗದಿರುವ ಮಗುವಿಗೆ ಈಜು ಹೇಳಿಕೊಡುವ ವಿಡಿಯೋ ಒಂದು ಎಲ್ಲೆಡೆ ವೈರೆಲ್ ಆಗಿದೆ.
ಒಂದು ಸಣ್ಣ ಪೂಲ್ ನಲ್ಲಿ ಮಗುವಿಗೆ ಯಾವ ರೀತಿ ಈಜಬೇಕು ಎಂದು ತರಬೇತು ನೀಡುತ್ತಿರುವ ವಿಡಿಯೋ ಇದಾಗಿದ್ದು. ಮಗು ಈಜುವುದನ್ನು ನೋಡಿದವರು ಮಂತ್ರ ಮುಗ್ಧ ರಾಗುವುದರಲ್ಲಿ ಸಂಶಯವಿಲ್ಲ. ಅಷ್ಟು ಚಿಕ್ಕ ಮಗು ಹೇಳಿ ಕೊಟ್ಟಿದ್ದನ್ನು ಕ್ಷಣ ಮಾತ್ರದಲ್ಲಿ ಕಲಿತು ಯಾವುದೇ ಭಯವಿಲ್ಲದೆ ನೀರಿನಲ್ಲಿ ಲೀಲಾಜಾಲವಾಗಿ ಮೀನಿನಂತೆ ಚಲಿಸುವುದನ್ನು ನೋಡುವಾಗ ಈ ಪುಟ್ಟ ಪಾಪುಗಿಂತ ಚೆನ್ನಾಗಿ ಸ್ವಿಮ್ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ನಿಮಗೆ ಅನಿಸದೇ ಇರಲಾರದು.
ಇದನ್ನೂ ಓದಿ: ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸಿದ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ: ಬಿಜೆಪಿ ನಾಯಕಿಯ ಬಂಧನ
ವೈರಲ್ ವಿಡಿಯೋ ಇಲ್ಲಿದೆ
ಈ ವಿಡಿಯೋವನ್ನು @mahmuodmuhamed9326 ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಈಗಾಗಲೇ 5.9 ಮಿಲಿಯನ್ ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇನ್ನು ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿತ್ತು ಎಂದು ಅನೇಕರು ಹೇಳಿದ್ದಾರೆ. ಇನ್ನು ಕೆಲವರು ನಾವು ಇಷ್ಟು ಚೆನ್ನಾಗಿ ಈಜಲು ಸಾಧ್ಯವಿಲ್ಲ ಎಂದಿದ್ದಾರೆ. ಮತ್ತಿಷ್ಟು ಜನ ಎಲ್ಲಾ ಮಕ್ಕಳಿಗೂ ಈಜಲು ಕಲಿಸಬೇಕು, ಇದು ಅನೇಕ ಯುವ ಜೀವಗಳನ್ನು ಉಳಿಸುತ್ತದೆ ಎಂದಿದ್ದಾರೆ. ಈ ಮಗುವಿಗೆ ಎಲ್ಲರೂ ಆಶೀರ್ವದಿಸಿದ್ದು ಈ ಕಲೆ ಯಾವಾಗಲೂ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಮಕ್ಕಳು ಏನು ಮಾಡಿದರೂ ಚೆಂದ ಎನ್ನುವ ಮಾತು ಈ ವಿಡಿಯೋ ನೋಡಿದ ಮೇಲೆ ಅಕ್ಷರಶಃ ಸತ್ಯ ಎನಿಸುತ್ತಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ