Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆ: ಪತಿಯೇ ಕೊಲೆಗೈದಿರುವ ಶಂಕೆ

ವಿವಾಹಿತ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಡೆದಿದೆ. ಪತಿಯೇ ಶಶಿಕಲಾರನ್ನು ಕೊಲೆಗೈದು ಶವ ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಪತಿ ಸುಧಾಕರ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಾವಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆ: ಪತಿಯೇ ಕೊಲೆಗೈದಿರುವ ಶಂಕೆ
ಮೃತ ಪತ್ನಿ ಶಶಿಕಲಾ, ಬಾವಿ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 7:54 PM

ಮಂಗಳೂರು, ನವೆಂಬರ್​​​​ 03: ವಿವಾಹಿತ ಮಹಿಳೆಯ ಮೃತದೇಹ (Dead body) ಬಾವಿಯಲ್ಲಿ ಪತ್ತೆ ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಡೆದಿದೆ. ಜ್ಯೋತಿ ನಗರದಲ್ಲಿ ಮನೆ ಬಳಿಯ ಬಾವಿಯಲ್ಲಿ ಶಶಿಕಲಾ(25) ಶವ ಪತ್ತೆಯಾಗಿದೆ. ಪತಿಯೇ ಶಶಿಕಲಾರನ್ನು ಕೊಲೆಗೈದು ಶವ ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಪತಿ ಸುಧಾಕರ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ: ಸ್ಥಳದಲ್ಲೇ 8 ಕುರಿಗಳ ದಾರುಣ ಸಾವು

ಬೆಂಗಳೂರು ಗ್ರಾಮಾಂತರ: ರಸ್ತೆ ದಾಟುತ್ತಿದ್ದ ಕುರಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ರಾಮಣ್ಣ ಎನ್ನುವವರಿಗೆ ಸೇರಿದ ಕುರಿಗಳ ಮೇಲೆ‌ ಕಾರು ಹರಿದಿದೆ.

ಇದನ್ನೂ ಓದಿ: ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್!

ಕುರಿಗಳೇ ಆಸರೆಯಾಗಿ ಇಟ್ಟುಕೊಂಡಿದ್ದ ರೈತರ ರಾಮಣ್ಣ, ಕುರಿಗಳ ಸಾವಿನಿಂದ ಕಣ್ಣಿರು ಹಾಕಿದ್ದಾರೆ. ಕುರಿ ಗುದ್ದಿದ ಚಾಲಕನನ್ನ ಗ್ರಾಮಸ್ಥರು ಹಿಡಿದಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾರಿಕೇಡ್​​ಗೆ ಬೈಕ್​ ಡಿಕ್ಕಿ: ಪೊಲೀಸ್ ಕಾನ್ಸ್​ಟೇಬಲ್​ ಸಾವು

ಕೋಲಾರ: ಬ್ಯಾರಿಕೇಡ್​​ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್​ಟೇಬಲ್​ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಮಾರಿಕುಪ್ಪಂ ಬಳಿ ನಡೆದಿದೆ. ಚಿರಂಜೀವಿ (37) ಮೃತ ಪೊಲೀಸ್ ಕಾನ್ಸ್​ಟೇಬಲ್. ಮೂರು ದಿನದ ಹಿಂದೆ ಬ್ಯಾರಿಕೇಡ್​ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿಯಲ್ಲಿಯೂ ಮಂಗಳೂರು ರೀತಿಯ ಕೃತ್ಯ: ರೇಷನ್ ಕಾರ್ಡ್​​ಗೆ ಥಂಬ್ ಕೊಟ್ಟವರ ಖಾತೆಯಿಂದ ಹಣ ಮಾಯ

ಕೆಜಿಎಫ್ ಡಿಎಆರ್ ಪೊಲೀಸ್ ಸಿಬ್ಬಂದಿಯಿಂದ ಅಂತಿಮ ದರ್ಶನ ಪಡೆಯದಿದ್ದು, ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅಂಡರ್‌ಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಡರ್​ಗೆ ಬೈಕ್​ ಡಿಕ್ಕಿ: ಸವಾರ ಸಾವು, ಯುವತಿ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಡಿವೈಡರ್​ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಯುವತಿ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದ ಬಳಿ ನಡೆದಿದೆ. ಗಾಯಗೊಂಡಿರುವ ಯುವತಿಗೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.