ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಹೆಂಡತಿಗೆ ಹಲ್ಲೆ ಮಾಡೋ ದೃಶ್ಯ ಕಂಡು ಹಾರ್ಟ್ ಅಟ್ಯಾಕ್​ನಿಂದ ಪ್ರಾಣಬಿಟ್ಟ ಗಂಡ

ವ್ಯಕ್ತಿಯೋರ್ವ ತನ್ನ ಹೆಂಡತಿಗೆ ಹಲ್ಲೆ ಮಾಡುವ ದೃಶ್ಯ ಕಂಡು, ಗಂಡ ಹಾರ್ಟ್ ಅಟ್ಯಾಕ್ (Heart Attack)​ನಿಂದ ಸಾವನ್ನಪ್ಪಿದ ಘಟನೆ ಬೆಂಗಳೂರು(Bengaluru)ನಗರದ ಚಂದ್ರಲೇಔಟ್​ನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಹೆಂಡತಿಗೆ ಹಲ್ಲೆ ಮಾಡೋ ದೃಶ್ಯ ಕಂಡು ಹಾರ್ಟ್ ಅಟ್ಯಾಕ್​ನಿಂದ ಪ್ರಾಣಬಿಟ್ಟ ಗಂಡ
ಬಂಧಿತ ಆರೋಪಿಗಳು
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 03, 2023 | 5:45 PM

ಬೆಂಗಳೂರು, ನ.03: ವ್ಯಕ್ತಿಯೋರ್ವ ತನ್ನ ಹೆಂಡತಿಗೆ ಹಲ್ಲೆ ಮಾಡುವ ದೃಶ್ಯ ಕಂಡು, ಗಂಡ ಹಾರ್ಟ್ ಅಟ್ಯಾಕ್ (Heart Attack)​ನಿಂದ ಸಾವನ್ನಪ್ಪಿದ ಘಟನೆ ಬೆಂಗಳೂರು(Bengaluru)ನಗರದ ಚಂದ್ರಲೇಔಟ್​ನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಮುದಾಸೀರ್ ಖಾನ್ ಮೃತ ವ್ಯಕ್ತಿ. ಇನ್ನು ಈ ಘಟನೆ ನಿನ್ನೆ(ನ.02) ರಾತ್ರಿ ನಡೆದಿದ್ದು, ನನ್ನ ಮೇಲೆ ವಾಹಿದ್ ಅಹ್ಮದ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡೋದನ್ನ ನೋಡಿದ ನನ್ನ ಪತಿ ಮುದಾಸೀರ್ ಖಾನ್​ಗೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾನೆ ಎಂದು ಗಂಡನ ಸಾವಿನ ಬಗ್ಗೆ ಮಹಿಳೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಇನ್ನು ಮಹಿಳೆ ಮೇಲಿನ ಹಲ್ಲೆ ಸಂಬಂಧ 307 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ವಾಹಿದ್ ಹಾಗೂ ಆತನ ಸಹೋದರ ಮತಿನ್ ಎಂಬುವವರನ್ನು ಬಂಧಿಸಲಾಗಿದೆ. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ‘ಮಹಿಳೆ ಜೊತೆ ಈ ಹಿಂದೆ ವಾಹಿದ್ ಸಂಬಂಧ ಹೊಂದಿದ್ದು, ನಾಲ್ಕು ತಿಂಗಳ ಹಿಂದೆ ಗೊತ್ತಾಗಿ ರಾಜಿ ಮಾಡಿಸಲಾಗಿತ್ತು. ಅದಾದ ಬಳಿಕ ಆಕೆಯ ಬಗ್ಗೆ ವಾಹಿದ್ ಕೆಟ್ಟದಾಗಿ ಹೇಳಿಕೊಂಡು ಓಡಾಡುತಿದ್ದ. ಇದನ್ನು ದಂಪತಿ ಹೋಗಿ ಪ್ರಶ್ನೆ ಮಾಡಲು ತೆರಳಿದ್ದರು. ಈ ವೇಳೆ ಮಹಿಳೆಗೆ ವಾಹಿದ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಕಂಡು ಮುದಾಸೀರ್ ಹೃದಯಾಘಾತದಿಂದ ಸಾವನಪ್ಪಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲೊಂದು ಹೃದಯ ವಿದ್ರಾವಕ ಘಟನೆ: ಕುಚಿಕು ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಗೆಳೆಯ ಸಾವು

ಗಂಡ-ಹೆಂಡತಿ ಜಗಳ; ಪೋಲಿಸರ ಸಂಧಾನಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

ಹುಬ್ಬಳ್ಳಿ: ಕೋಟಿಲಿಂಗೇಶ್ವರ ನಗರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಬಳಿಕ ಪೋಲಿಸರ ಸಂಧಾನಕ್ಕೆ ಬೇಸತ್ತ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್ ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆದರೆ, ಗಂಡ -ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ತವರು ಮನೆಗೆ ಹೋಗಿದ್ದ ಪ್ರೀತಿಯ ಕುಟುಂಬಸ್ಥರು ನಿನ್ನೆ ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಯಿಸಿ ಬೇದರಿಕೆ ಹಾಕಿ. ನೋಟಿಸ್​ ನೀಡಿ ನಿಖಿಲ್​ನನ್ನು ಠಾಣೆ ಕರೆಸಿ ಪೋಲಿಸರು ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಕೇಶ್ವಾಪುರ ಪೊಲೀಸರು ಒಂದೆ ದಿನದಲ್ಲಿ 2 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿ ನಿಖಿಲ್ ಬಿಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಮನನೊಂದು ಮನೆಗೆ ಬಂದು ಇಂದು ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Fri, 3 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ