73 ವರ್ಷದ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಮಗ, ವಿಡಿಯೋ ವೈರಲ್​​

ಪಂಜಾಬ್​​​ನಲ್ಲೊಂದು ಮನಕಲಕುವ ವಿಡಿಯೋ ವೈರಲ್​​ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಎಲ್ಲ ಕಡೆ ವೈರಲ್​​​ ಆಗಿದೆ. ಈ ವಿಡಿಯೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶ​​​ ಕೂಡ ವ್ಯಕ್ತವಾಗಿದೆ. ತನ್ನ 73 ವರ್ಷದ ತಾಯಿಗೆ ವಕೀಲನೊಬ್ಬ ಮತ್ತು ಆತನ ಪತ್ನಿ, ಮಗ ಸೇರಿ ಥಳಿಸುತ್ತಿರುವ ವಿಡಿಯೋ ಸಿಸಿಟಿವಿ ಸೆರೆಯಾಗಿದೆ .

73 ವರ್ಷದ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಮಗ, ವಿಡಿಯೋ ವೈರಲ್​​
ವೈರಲ್​​ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 09, 2023 | 12:47 PM

ಪಂಜಾಬ್​​, ನ.9: ತಾಯಿ ಎಂಬುವವಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾಳೆ. ಮಕ್ಕಳ ಪ್ರತಿಯೊಂದು ಹಂತದಲ್ಲೂ ಅಮ್ಮ ನಿಂತಿರುತ್ತಾಳೆ. ಅದು ಅವನ ಕಷ್ಟ ಮತ್ತು ಸುಖದ ಕಾಲದಲ್ಲೂ ಜೊತೆಗೆಯಾಗಿರುತ್ತಾಳೆ. ಅದರಲ್ಲೂ ಅಮ್ಮ ಗಂಡು ಮಕ್ಕಳಿಗೆ ಹೆಚ್ಚು ಪ್ರೀತಿ ನೀಡುತ್ತಾಳೆ. ಆದರೆ ಆ ಗಂಡು ಮಕ್ಕಳು ಹೆಂಡತಿ ಬಂದ ಮೇಲೆ ಬದಲಾಗುತ್ತಾರೆ. ಕೊನೆಗೆ ತಾಯಿಯನ್ನೇ ದೂರು ಮಾಡುತ್ತಾರೆ ಎಂಬ ಮಾತಿಗೆ ಈ ವಿಡಿಯೋ ಸಾಕ್ಷಿ. ಪಂಜಾಬ್​​​ನಲ್ಲೊಂದು ಮನಕಲಕುವ ವಿಡಿಯೋ ವೈರಲ್​​ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಎಲ್ಲ ಕಡೆ ವೈರಲ್​​​ ಆಗಿದೆ. ಈ ವಿಡಿಯೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶ​​​ ಕೂಡ ವ್ಯಕ್ತವಾಗಿದೆ.

ತನ್ನ 73 ವರ್ಷದ ತಾಯಿಗೆ ವಕೀಲನೊಬ್ಬ ಮತ್ತು ಆತನ ಪತ್ನಿ, ಮಗ ಸೇರಿ ಥಳಿಸುತ್ತಿರುವ ವಿಡಿಯೋ ಸಿಸಿಟಿವಿ ಸೆರೆಯಾಗಿದೆ . ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ಘಟನೆ ಬೆಳಕಿಗೆ ಬಂದದ್ದು ಆಕೆಯ ಮಗಳಿಂದ, ಥಳಿತಕ್ಕೆ ಒಳಗಾದ ತಾಯಿಯ ಯೋಗಕ್ಷೇಮ ನೋಡಿಕೊಂಡು ಹೋಗಲು ಬಂದಿದ್ದ ಮಗಳಿಗೆ ಈ ವಿಚಾರ ಗೊತ್ತಾಗಿದೆ. ತಾಯಿ ಕೊಣೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿರುವ ಬಗ್ಗೆ ಮಗಳು ದೀಪಶಿಖಾ ಪತ್ತೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ವಕೀಲ ಅಂಕುರ್ ವರ್ಮಾ ಅವರನ್ನು ಬಂಧಿಸಲಾಗಿದೆ.

ಇನ್ನು ಮಗನಿಂದ ದೌರ್ಜನ್ಯಕ್ಕೆ ಒಳಗಾದ ತಾಯಿಯನ್ನು ಆಶಾ ರಾಣಿ ಎಂದು ಗುರುತಿಸಲಾಗಿದ್ದು, ಮಗ ನೀಡುತ್ತಿದ್ದ ಕಿರುಕುಳದ ಬಗ್ಗೆ ತನ್ನ ಮಗಳು ದೀಪಶಿಖಾ ಅವರಿಗೆ ಹೇಳಿದ್ದಾರೆ. ಸಿಸಿಟಿವಿಯಲ್ಲಿ ತೋರಿಸಿರುವ ದೃಶ್ಯ ಪ್ರಕಾರ ವಕೀಲ ಅಂಕುರ್ ವರ್ಮಾ ಅವರ ಮಗನೇ ಹಾಸಿಗೆ ಮೇಲೆ ನೀರನ್ನು ಚೆಲ್ಲಿ, ಅಜ್ಜಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ ಎಂದು ಅಪ್ಪನಿಗೆ ಕರೆದು ಹೇಳುತ್ತಾನೆ. ಮಗನ ಮಾತು ಕೇಳಿ, ಹೆತ್ತ ಅಮ್ಮ ಎಂದು ನೋಡದೆ ಹಿಗ್ಗಾ-ಮುಗ್ಗಾ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:ಹೋಟೆಲ್ ನಲ್ಲಿ ಲ್ಯಾಪ್ ಟಾಪ್ ಕಳೆದಿದೆ ಅಂತ ರೊಚ್ಚಿಗೆದ್ದ ವ್ಯಕ್ತಿ ಲಾಬಿಯೊಳಗೆ ಕಾರು ನುಗ್ಗಿಸಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ!

ಇನ್ನು ಗಂಡ ಅತ್ತೆ ಹೊಡೆಯುತ್ತಿರುವುದನ್ನು ಅಲ್ಲಿ ನಿಂತುಕೊಂಡು ಅಂಕುರ್ ವರ್ಮಾ ಪತ್ನಿ ಸುಧಾ ನೋಡುತ್ತಿರವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಬಗ್ಗೆ ದೀಪಶಿಖಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳ ತಂಡವು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪ್ರತಿನಿಧಿಗಳೊಂದಿಗೆ ಶನಿವಾರ (ಅಕ್ಟೋಬರ್ 28) ಆಶಾರಾಣಿ ಅವರ ನಿವಾಸಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ:

ಇನ್ನು ಆಶಾ ರಾಣಿ ಅವರು ತನ್ನ ಗಂಡ ಹೃದಯಘಾತದಿಂದ ವಿಧಿವಶವಾದ ನಂತರ ಮಗನ ಜತೆಗೆ ವಾಸಿಸುತ್ತಿದ್ದಾರೆ. ಇದೀಗ ದೀಪಶಿಖಾ ತನ್ನ ತಂದೆಗೂ ಕೂಡ ಸಹೋದರ ಹಿಂಸೆ ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಪಂಜಾಬ್​​​ ಪತ್ರಕರ್ತಯೊಬ್ಬರು ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಎಕ್ಸ್​​ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಇಂತಹ ಮಗ ಬೇಕಾ ಎಂದು ಒಬ್ಬರು ಕಮೆಂಟ್​​​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಆಕೆ ಏನು ತಪ್ಪು ಮಾಡಿದ್ದಾಳೆ? ನಿನ್ನಂತ ಮಗನನ್ನು ಎತ್ತಿರುವುದು ದೊಡ್ಡ ತಪ್ಪು ಎಂದು ಕಮೆಂಟ್​​ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ