Belly Fat: ಸೊಂಟದ ಸುತ್ತಲಿನ ಕೊಬ್ಬನ್ನು ವೇಗವಾಗಿ ಕರಗಿಸಲು ಈ ವ್ಯಾಯಾಮ ಟ್ರೈ ಮಾಡಿ
ಸಾಕಷ್ಟು ಜನರಲ್ಲಿ ಸೊಂಟದ ಸುತ್ತಲೂ ಹೆಚ್ಚಿನ ಕೊಬ್ಬು ಸಂಗ್ರಹವಾಗಿರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಈ ಕೊಬ್ಬನ್ನು ವೇಗವಾಗಿ ಕರಗಿಸಲು ಈ ವ್ಯಾಯಾಮಗಳನ್ನು ಟ್ರೈ ಮಾಡಿ. ಕೆಲವೇ ವಾರಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಹೆಚ್ಚಿನ ಪ್ರಮಾಣದಲ್ಲಿ ಫಾಸ್ಟ್ ಫುಡ್ ತಿನ್ನುವುದು, ಒಂದೇ ಸ್ಥಳದಲ್ಲಿ ಕುಳಿತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ಜನರಲ್ಲಿ ಬೊಜ್ಜಿನ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಹೆಚ್ಚಿನ ಒತ್ತಡದ ಕೆಲಸದಿಂದಾಗಿ ವ್ಯಾಯಾಮ ಮಾಡಲು ಸಮಯವಿಲ್ಲದಿರುವಾಗ,ಅವರ ದೇಹದ ಕೊಬ್ಬು ಹೆಚ್ಚುತ್ತದೆ ಮತ್ತು ಬೊಜ್ಜು ಉಂಟಾಗುತ್ತದೆ. ಇದರಿಂದಾಗಿ ಸ್ಥೂಲಕಾಯತೆಯಂತಹ ಅನೇಕ ಗಂಭೀರ ಕಾಯಿಲೆಗಳನ್ನು ಎದುರಿಸುತ್ತಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಸೊಂಟದ ಸುತ್ತಲಿನ ಕೊಬ್ಬು ಕರಗಿಸಿ, ಫಿಟ್ ಆಗಿರಬೇಕು ಎಂಬುದು ಸಾಕಷ್ಟು ಜನರ ಕನಸಾಗಿರುತ್ತದೆ. ಆದ್ದರಿಂದ ಕೆಟ್ಟ ಕೊಬ್ಬನ್ನು ವೇಗವಾಗಿ ಕರಗಿಸಲು ಈ ವ್ಯಾಯಾಮಗಳನ್ನು ಟ್ರೈ ಮಾಡಿ. ಕೆಲವೇ ವಾರಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಮೆಟ್ಟಿಲುಗಳನ್ನು ಹತ್ತುವುದು:
ಸೊಂಟದ ಸುತ್ತಲಿನ ಕೊಬ್ಬನ್ನು ಕಳೆದುಕೊಳ್ಳಲು ನೀವು ಬಯಸಿದರೆ, ನೀವು ಮೆಟ್ಟಿಲುಗಳನ್ನು ಬಳಸಬಹುದು. ಇದಕ್ಕಾಗಿ, ಕಚೇರಿಗೆ ಹೋಗುವಾಗ, ಮನೆಗೆ ಹೋಗುವಾಗ, ಯಾವಾಗಲೂ ಲಿಫ್ಟ್ ಬಳಸಬೇಡಿ, ಬದಲಾಗಿ ಮೆಟ್ಟಿಲುಗಳನ್ನು ಹತ್ತಿ. ಮೆಟ್ಟಿಲುಗಳ ಮೇಲೆ ಮತ್ತು ಕೆಳಗೆ ಹೋಗುವುದು ನಿಮ್ಮ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಫಿಟ್ ಆಗಿರಲು ಸೆಲೆಬ್ರಿಟಿಗಳು ಅನುಸರಿಸುವ ಈ ವರ್ಕೌಟ್‌ಗಳನ್ನು ಟ್ರೈ ಮಾಡಿ
ಸಿಟ್ ಅಪ್: ತೂಕ ನಷ್ಟಕ್ಕೆ ಸಿಟ್-ಅಪ್‌ಗಳು ಬಹಳ ಪ್ರಯೋಜನಕಾರಿ ವ್ಯಾಯಾಮ. ಸಿಟ್-ಅಪ್ ಮಾಡುವ ಮೂಲಕ ನಿಮ್ಮ ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಬಹುದು. ಈ ವ್ಯಾಯಾಮವು ಹೊಟ್ಟೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ.
ಪ್ಲ್ಯಾಂಕ್ ವ್ಯಾಯಾಮ:
ಪ್ಲ್ಯಾಂಕ್ ವ್ಯಾಯಾಮವನ್ನು ಮಾಡುವುದರಿಂದ ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬು ನಷ್ಟಕ್ಕೆ ಇದು ಅತ್ಯಂತ ಪರಿಣಾಮಕಾರಿ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ಮಾಡುವುದರಿಂದ ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಿಮ್ಮ ದೇಹದ ಎಲ್ಲಾ ಭಾಗಗಳನ್ನು ಬಲಪಡಿಸುತ್ತದೆ.ಪ್ಲ್ಯಾಂಕ್ ವ್ಯಾಯಾಮದಿಂದ ದೇಹಕ್ಕೆ ಅನೇಕ ಪ್ರಯೋಜನಗಳಿದ್ದರೂ ಕೂಡ,ಇದು ಅಪಾಯಕಾರಿ ವ್ಯಾಯಾಮ. ಆದ್ದರಿಂದ ತುಂಬಾ ಎಚ್ಚರಿಕೆಯಿಂದ ತರಬೇತುದಾರರ ಸಲಹೆ ಪಡೆದು ಮಾಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: