AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಮಾಷೆ ನೆಪದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರಿಗೆ ಅವಮಾನ ಮಾಡಿದ ಯುವಕರು

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದೇ ರೀತಿ ನಾವು ಮಾಡುವಂತಹ ತಮಾಷೆಗಳು ಕೂಡಾ ಅತಿರೇಕಕ್ಕೆ ಏರಿದರೆ ಅದರ ಪರಿಣಾಮವೂ ಋಣಾತ್ಮಕವಾಗಿರುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತಮಾಷೆಯ ನೆಪದಲ್ಲಿ ಯುವಕರ ಗುಂಪೊಂದು ಮದುವೆ ಮಂಟಪದಲ್ಲಿಯೇ ಪುರೋಹಿತರೊಬ್ಬರಿಗೆ ಅವಮಾನ ಮಾಡಿದ್ದಾರೆ. ಪುರೋಹಿತರಿಗಾದ ಅವಮಾನವನ್ನು ಕಂಡು ನೆಟ್ಟಿಗರು ಕೆಂಡಮಂಡಲವಾಗಿದ್ದಾರೆ.  

Viral Video: ತಮಾಷೆ ನೆಪದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರಿಗೆ ಅವಮಾನ ಮಾಡಿದ ಯುವಕರು
ವೈರಲ್​​ ವಿಡಿಯೋ
TV9 Web
| Edited By: |

Updated on: Apr 22, 2024 | 10:28 AM

Share

ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಗಳಲ್ಲಿ  ವಧುವರರ ಗೆಳೆಯರು ಅಥವಾ ಸಂಬಂಧಿಕರು ತರ್ಲೆ ತಮಾಷೆಗಳನ್ನು ಮಾಡುತ್ತಿರುತ್ತಾರೆ. ಕೆಲವೊಬ್ಬರು ಪುರೋಹಿತರೊಂದಿಗೂ ತಮಾಷೆ ಮಾಡುವುದುಂಟು. ಆದರೆ ಈ ತರ್ಲೆ ತಮಾಷೆಗಳು ಯಾವುದೇ ಕಾರಣಕ್ಕೂ ಅತಿರೇಕಕ್ಕೆ ಹೋಗಬಾರದು.  ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿರೇಕದ ತರ್ಲೆ ತಮಾಷೆಗಳು ಕೂಡಾ ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.  ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ತಮಾಷೆಯ ನೆಪದಲ್ಲಿ ಯುವಕರ ಗುಂಪೊಂದು ಮದುವೆ ಮಂಟಪದಲ್ಲಿಯೇ ಪುರೋಹಿತರಿಗೆ ಅವಮಾನವನ್ನು ಮಾಡಿದ್ದಾರೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಈ ಕುರಿತ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪುರೋಹಿತರೊಬ್ಬರಿಗೆ ಆದ  ಈ ಅವಮಾನವನ್ನು  ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಶುಭ ಕಾರ್ಯವನ್ನು ನಡೆಸಿಕೊಡುತ್ತಿರುವಾಗ ಈ ರೀತಿ ಏಕೆ ಮಾಡಬೇಕಿತ್ತು? ಕುಟುಂಬದ ಹಿರಿಯರು ಇದನ್ನು ಹೇಗೆ ಅನುಮತಿಸಿದರು?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಪುರೋಹಿತರೊಬ್ಬರು ವಧುವರರನ್ನು ಕೂರಿಸಿ ಪೂಜಾ ವಿಧಿವಿಧಾನಗಳನ್ನು ಸುಸೂತ್ರವಾಗಿ ನಡೆಸಿಕೊಡುತ್ತಿರುವ ವೇಳೆಯಲ್ಲಿ ಇಬ್ಬರು ಯುವಕರು ತಮಾಷೆಯ ನೆಪದಲ್ಲಿ ಪುರೋಹಿತರ ತಲೆಗೆ ಗೋಣಿ ಚೀಲವನ್ನು ಹಾಕುವ ದೃಶ್ಯವನ್ನು ಕಾಣಬಹುದು.  ಇಷ್ಟು ಸಾಲದ್ದಕ್ಕೆ ಪುರೋಹಿತರ ಮೇಲೆ ಕುಂಕುಮ, ಅಕ್ಷತೆ, ಬೆಡ್ ಶೀಟ್ ಅಅನ್ನು ಕೂಡಾ ಎಸೆಯುತ್ತಾರೆ. ಪುರೋಹಿತರಿಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದವರು ಇದನ್ನು ಕಂಡು ನಗುತ್ತಿದ್ದರೇ ಹೊರತು, ಯಾರೊಬ್ಬರು ಯುವಕರನ್ನು ಹೀಗೆ ಮಾಡಬೇಡಿ ಎಂದು ತಡೆಯಲಿಲ್ಲ. ಕೊನೆಯಲ್ಲಿ ಅವಮಾನವನ್ನು ಸಹಿಸಲಾರದೆ ಪುರೋಹಿತರು ಮಂಟಪದಿಂದ ಎದ್ದು ಹೋಗಿದ್ದಾರೆ.  ಪುರೋಹಿತರಿಗಾದ ಈ ಅವಮಾನ ಎಂತಹವರಿಗೂ ಬೇಸರ ತರಿಸುವಂತಿದೆ.

ಇದನ್ನೂ ಓದಿ: 100 ಕೊಠಡಿಗಳಿರುವ ವಿಶ್ವದ ಅತ್ಯಂತ ದುಬಾರಿ ಮನೆ ಹೇಗಿದೆ ನೋಡಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಕೈಯಲ್ಲಿ ಪುರೋಹಿತರಿಗೆ ಗೌರವ ಕೊಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಅವರನ್ನು ಕರೆದು ಈ ರೀತಿ ಅವಮಾನ ಮಾಡಬೇಡಿʼ ಎಂದು ಕಿಡಿಕಾರಿದ್ದಾರೆ. ಇನ್ನೂ ಅನೇಕರು ಪುರೋಹಿತರಿಗಾದ ಅವಮಾನವನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್