ಅಂಬಾನಿ ಮಗನ ಮದುವೆ ಲಂಡನ್​ನಲ್ಲಂತೆ; ಪ್ರೀವೆಡ್ಡಿಂಗ್​ಗೇ 1,200 ಕೋಟಿ ಆದರೆ, ಮದುವೆಗೆಷ್ಟಾಗಬಹುದು ಖರ್ಚು?

ಇತ್ತೀಚೆಗಷ್ಟೇ ಮುಖೇಶ್​​ ಅಂಬಾನಿ ಕಿರಿಯ ಪುತ್ರನ ವಿವಾಹ ಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಇದೀಗ ಜುಲೈನಲ್ಲಿ ನಿಶ್ಚಯವಾಗಿರುವ ಮದುವೆ ಕಾರ್ಯಕ್ರಮ ಭಾರತದಲ್ಲಿ ಅಲ್ಲ, ಬದಲಾಗಿ ಲಂಡನ್​​ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಅಂಬಾನಿ ಮಗನ ಮದುವೆ ಲಂಡನ್​ನಲ್ಲಂತೆ; ಪ್ರೀವೆಡ್ಡಿಂಗ್​ಗೇ 1,200 ಕೋಟಿ ಆದರೆ, ಮದುವೆಗೆಷ್ಟಾಗಬಹುದು ಖರ್ಚು?
Anant Ambani Radhika Merchant wedding
Follow us
ಅಕ್ಷತಾ ವರ್ಕಾಡಿ
|

Updated on: Apr 23, 2024 | 2:26 PM

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರನ ವಿವಾಹ ಪೂರ್ವ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿತ್ತು. ಸುಮಾರು 1200 ಕೋಟಿ ರೂ ಖರ್ಚಿನಲ್ಲಿ ಮೂರು ದಿನಗಳ ಕಾಲ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು. ಇದೀಗಾ ಜುಲೈನಲ್ಲಿ ನಡೆಯುವ ವಿವಾಹ ಭಾರತದಲ್ಲಿ ಅಲ್ಲ, ಬದಲಾಗಿ ಲಂಡನ್​​ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಲಂಡನ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದ್ದು, ಇದೀಗಾಗಲೇ ಬಾಲಿವುಡ್​​ ಸೆಲೆಬ್ರೆಟಿಗಳು ಸೇರಿದಂತೆ ಸಾಕಷ್ಟು ಗಣ್ಯರಿಗೆ ವಿವಾಹ ಪತ್ರ ಹಂಚಿಕೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಂಡನ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್‌ ಹೇಗಿದೆ ನೋಡಿ:

2021ರಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್‌ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಅನ್ನು 57 ಮಿಲಿಯನ್ ಪೌಂಡ್‌ಗಳಿಗೆ(ಸುಮಾರು 592 ಕೋಟಿ ರೂ.) ಖರೀದಿಸಿತ್ತು. ಇದೀಗ ಅದೇ ಸ್ಟೋಕ್ ಪಾರ್ಕ್ನಲ್ಲಿ ಕಿರಿಯ ಪುತ್ರನ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಫ್ರೀ ಟಿಕೆಟ್​​ ಹಾರ ಹಾಕಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ

ಸ್ಟೋಕ್ ಪಾರ್ಕ್ ಲಿಮಿಟೆಡ್ 27 ಚಾಂಪಿಯನ್ ಶಿಪ್ ಗಾಲ್ಫ್ ಕೋರ್ಸ್ ಹಾಗೂ 49 ಐಷಾರಾಮಿ ಬೆಡ್ ರೂಮ್ ಹೊಂದಿರುವ ಹೋಟೆಲ್ ಆಗಿದ್ದು, 13 ಟೆನ್ನಿಸ್ ಕೋರ್ಟ್ ಹಾಗೂ 14 ಎಕರೆ ಖಾಸಗಿ ಪಾರ್ಕ್ ಅನ್ನು ಹೊಂದಿದೆ.  ರಾಣಿ ಎಲಿಜಬೆತ್ I ಈ ಹಿಂದೆ 1581 ರಲ್ಲಿ ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂದು ವರದಿಗಳು ಹೇಳುತ್ತವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ