Shocking News: 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಗುಜರಾತ್​ನ ವೃದ್ಧೆ!

| Updated By: ಸುಷ್ಮಾ ಚಕ್ರೆ

Updated on: Oct 20, 2021 | 4:23 PM

Viral News: ಗುಜರಾತ್ ರಾಜ್ಯದ ಕಚ್‌ನ 70 ವರ್ಷದ ಜಿವನ್‌ಬೆನ್ ರಬಾರಿ ಮತ್ತು ಆಕೆಯ ಪತಿ 75 ವರ್ಷದ ವಾಲ್ಜಿಭಾಯಿ ರಬಾರಿಗೆ ಮಗು ಜನಿಸಿದೆ. ಆ ಮಗುವಿಗೆ ಲಾಲೋ ಎಂದು ಹೆಸರಿಡಲಾಗಿದೆ.

Shocking News: 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಗುಜರಾತ್​ನ ವೃದ್ಧೆ!
70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ
Follow us on

ರಾಜ್​ಕೋಟ್: ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಅದ್ಭುತಗಳನ್ನು ನಮಗೇ ನಂಬಲಾಗುವುದಿಲ್ಲ. ವಯಸ್ಸು 35 ದಾಟಿದರೆ ಮಹಿಳೆಯರಿಗೆ ಮಕ್ಕಳಾಗುವ ಸಾಧ್ಯತೆಗಳು ಕಡಿಮೆ ಎಂಬಂತಹ ಪರಿಸ್ಥಿತಿ ಈಗಿನ ಕಾಲದಲ್ಲಿ ನಿರ್ಮಾಣವಾಗಿದೆ. ಇಂದಿನ ಒತ್ತಡದ ಜೀವನಶೈಲಿಯೂ ಅದಕ್ಕೆ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಗುಜರಾತ್​ನ 70 ವರ್ಷದ ಅಜ್ಜಿಯೊಬ್ಬರು ಇದೀಗ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇಡೀ ವಿಶ್ವದಲ್ಲೇ ಮಗುವಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆಯೆಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಮೊಮ್ಮಕ್ಕಳು, ಮರಿಮಕ್ಕಳನ್ನು ಆಟವಾಡಿಸಿಕೊಂಡಿರಬೇಕಾದ ವಯಸ್ಸಿನಲ್ಲಿ ಇವರು ಮೊದಲ ಮಗುವಿಗೆ ತಾಯಿಯಾಗಿದ್ದಾರೆ.

ಗುಜರಾತ್ ರಾಜ್ಯದ ಕಚ್‌ನ 70 ವರ್ಷದ ಜಿವನ್‌ಬೆನ್ ರಬಾರಿ ಮತ್ತು ಆಕೆಯ ಪತಿ 75 ವರ್ಷದ ವಾಲ್ಜಿಭಾಯಿ ರಬಾರಿಗೆ ಮಗು ಜನಿಸಿದೆ. ಆ ಮಗುವಿಗೆ ಲಾಲೋ ಎಂದು ಹೆಸರಿಡಲಾಗಿದೆ. ಸಿಸೇರಿಯನ್ ಮೂಲಕ ಮಗುವನ್ನು ಡೆಲಿವರಿ ಮಾಡಲಾಗಿದೆ. ಮದುವೆಯಾಗಿ 45 ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಬುಜ್​ನ ಐವಿಎಫ್ ಸೆಂಟರ್ ಮೂಲಕ ಗರ್ಭ ಧರಿಸಿರುವ ಇವರು ಇದಕ್ಕೂ ಮೊದಲು ಕೆಲವು ದಶಕಗಳಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರು.

70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ

ಸಂಬಂಧಿಕರ ಮೂಲಕ ಐವಿಎಫ್ ಬಗ್ಗೆ ತಿಳಿದ ನಂತರ ಅವರು ಬುಜ್‌ನಲ್ಲಿ ಹರ್ಶ್ ಐವಿಎಫ್ ಕೇಂದ್ರವನ್ನು ನಡೆಸುತ್ತಿರುವ ಡಾ ನರೇಶ್ ಭಾನುಶಾಲಿಯನ್ನು ಸಂಪರ್ಕಿಸಿದರು. ಆಗ ಆಕೆಯ ರಕ್ತದೊತ್ತಡ ಹೆಚ್ಚಾಗಿತ್ತು ಮತ್ತು ಗರ್ಭಾವಸ್ಥೆಯ ಎಂಟನೇ ತಿಂಗಳಲ್ಲಿ ನಾವು ಮಗುವನ್ನು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಬೇಕಾಯಿತು ಎಂದು ಡಾ. ಭಾನುಶಾಲಿ ಹೇಳಿದ್ದಾರೆ.

ಅತ್ಯಂತ ಹಿರಿಯ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಸ್ಪೇನ್​ನ 66 ವರ್ಷದ ಕೀರ್ತಿ ಮರಿಯಾ ಡೆಲ್ ಕಾರ್ಮೆನ್ ಬೌಸಾಡಾ ಲಾರಾ ವಿಶ್ವ ದಾಖಲೆ ಮಾಡಿದ್ದರು. ಅವರಿಗೆ ಅವಳಿ ಗಂಡು ಮಕ್ಕಳಾಗಿತ್ತು. ಇದೀಗ ಆ ದಾಖಲೆ 70 ವರ್ಷದ ಜಿವನ್​ಬೆನ್ ರಬರಿ ಅವರದ್ದಾಗಿದೆ.

70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ಧೆ

ಒಂದೂವರೆ ವರ್ಷದ ಹಿಂದೆ ಜಿವನ್​ಬೆನ್ ರಬರಿ ತಮ್ಮ ಗಂಡನೊಂದಿಗೆ ನನ್ನ ಚಿಕಿತ್ಸಾಲಯಕ್ಕೆ ಬಂದರು. ಅವರು ಈ ವಯಸ್ಸಿನಲ್ಲಿ ಮಗುವನ್ನು ಹೊಂದಲು ಬಯಸಿದ್ದಾರೆ ಎಂದು ಅವರು ಹೇಳಿದಾಗ ನನಗೆ ಆಘಾತವಾಯಿತು. ಆಕೆಯ ವಯಸ್ಸಿನಿಂದಾಗಿ ಇದು ಅಪಾಯಕಾರಿ ಎಂದು ನಾವು ಅವಳಿಗೆ ಹೇಳುತ್ತಲೇ ಇದ್ದೆವು. ಋತುಬಂಧದಿಂದಾಗಿ ಆಕೆಯ ಗರ್ಭಕೋಶ ಕುಗ್ಗಿತ್ತು. ಆದರೆ, ಅವರು ಸಾಯುವ ಮೊದಲು ಮಗುವನ್ನು ಹೊಂದಬೇಕೆಂದು ಹಠಕ್ಕೆ ಬಿದ್ದಿದ್ದರು. ಹೀಗಾಗಿ ಆಕೆಯ ಕೋರಿಕೆಯನ್ನು ಈಡೇರಿಸಲು ನಾವು ನಿರ್ಧರಿಸಿದೆವು ಎಂದು ಐವಿಎಫ್ ಕೇಂದ್ರದ ವೈದ್ಯರು ಹೇಳಿದ್ದಾರೆ.
ಈ ವಯಸ್ಸಿನಲ್ಲಿಯೂ ನಿಯಮಿತ ತಪಾಸಣೆಗಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರಿ ಬಸ್‌ನಲ್ಲಿ 150 ಕಿಲೋಮೀಟರ್ ಪ್ರಯಾಣಿಸಿ ಆಸ್ಪತ್ರೆಗೆ ಬರುತ್ತಿದ್ದರು. ನಾವು ಹೇಳಿದ ಎಲ್ಲ ಸೂಚನೆಗಳನ್ನೂ ಅನುಸರಿಸುತ್ತಿದ್ದರು. ಅದೃಷ್ಟವಶಾತ್ ಮೊದಲ ಪ್ರಯತ್ನದಲ್ಲೇ ಅವರಿಗೆ ಮಗು ಜನಿಸಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!