ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಯ ಹೊಟ್ಟೆಯಲ್ಲಿ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳು ಇರುವುದು ಕಂಡು ಬಂದಿದೆ. ತೀವ್ರವಾದ ಹೊಟ್ಟೆ ನೋವು ಎಂದು ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಹೊಟ್ಟೆಯಲ್ಲಿ ಕಬ್ಬಿಣದ ತುಂಡುಗಳಿವೆ, ಸುಮಾರು 1ಕೆಜಿಗಿಂತಲೂ ಹೆಚ್ಚಿನ ಕಬ್ಬಿಣದ ಚೂರುಗಳಿವೆ ಎಂಬುದು ಸ್ಕ್ಯಾನಿಂಗ್ ಮೂಲಕ ತಿಳಿದು ಬಂದಿದೆ. ಚಿಕಿತ್ಸೆಯ ಬಳಿಕ ಎಲ್ಲಾ ಲೋಹದ ತುಂಡುಗಳನ್ನು ವ್ಯಕ್ತಿಯ ದೇಹದಿಂದ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವ್ಯಕ್ತಿಯನ್ನು ಕ್ಲೈಪೆಡಾ ಆಸ್ಪತ್ರೆಗೆ ಸೇರಿಸಲಾಯಿತು. ಎಕ್ಸ್-ರೇ ಬಳಿಕ ವ್ಯಕ್ತಿಯ ಹೊಟ್ಟೆಯಲ್ಲಿ ಕಬ್ಬಿಣದ ತುಂಡುಗಳು ಜತೆಗೆ ಉಗುರಿನ ಚೂರುಗಳು ಇರುವುದು ಕಂಡು ಬಂದಿದೆ. ಚಿಕಿತ್ಸೆಯ ಬಳಿಕ ವ್ಯಕ್ತಿಯ ಹೊಟ್ಟೆಯಿದ ವೈದ್ಯರು ಸುಮಾರು ಒಂದು ಕೆಜಿಯಷ್ಟು ತಿರುಪು ಮೊಳೆಗಳನ್ನು ಹೊರತೆಗೆದಿದ್ದಾರೆ.
ವರದಿಗಳ ಪ್ರಕಾರ, ವೈದ್ಯರು ಮೂರು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಎಲ್ಲಾ ಲೋಹದ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ರೀತಿಯ ಘಟನೆಯನ್ನು ನಾನು ಈ ಹಿಂದೆ ನೋಡಿರಲಿಲ್ಲ. ಆತನ ಹೊಟ್ಟೆಯಲ್ಲಿ ಉಗುರುಗಳು ಮತ್ತು ಸ್ಕ್ರೂಗಳಿದ್ದವು ಎಂದು ಕ್ಲೈಪಡಾ ಯೂನಿವರ್ಸಿಟಿ ಆಸ್ಪತ್ರೆಯ ಸರ್ಜನ್ ಅಲ್ಗಿರ್ದಾಸ್ ಸ್ಲೇಪಾವೀಸಿಯಸ್ ಅವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಇಡೀ ಮೊಬೈಲ್ಅನ್ನೇ ವ್ಯಕ್ತಿ ನುಂಗಿಬಿಟ್ಟಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ವ್ಯಕ್ತಿಯ ಹೊಟ್ಟೆಯಿಂದ ನೋಕಿಯಾ ಮೊಬೈಲ್ಅನ್ನು ಹೊರತೆಗೆಯಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು, ವ್ಯಕ್ತಿಯ ಹೊಟ್ಟೆಯಿಂದ ಮೊಬೈಲ್ ಫೋನ್ಅನ್ನು ಹೊರತೆಗೆಯಲಾಗಿದೆ ಎಂದು ಡಾ. ಸ್ಕೆಂದರ್ ತಿಳಿಸಿದ್ದರು.
ಇದನ್ನೂ ಓದಿ:
Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!
Viral News: ಲೇಹ್ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ