ಒಮ್ಮೆ ಆಸ್ಪತ್ರೆಯ ಮೆಟ್ಟಿಲು ಹತ್ತಬೇಕೆಂದು ನಾಲ್ಕೈದು ಬಾರಿ ಪರ್ಸ್ ಚೆಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ. ಆಸ್ಪತ್ರೆಗಳಲ್ಲಿ ಸಣ್ಣ ಪುಟ್ಟ ಟೆಸ್ಟ್ಗೂ ಸಾವಿರಾರು ರೂ. ಬಿಲ್ ಮಾಡುವವರಿದ್ದಾರೆ. ಇಲ್ಲೊಬ್ಬರು ಅಮೆರಿಕದ ವೈದ್ಯರು ತನ್ನ ರೋಗಿ ತನ್ನ ಬಳಿ ಬಂದಾಗ ಅತ್ತಿದ್ದಕ್ಕೂ ಬಿಲ್ (Hospital Bill) ಮಾಡಿದ್ದಾರೆ. ರೋಗಿ ಅತ್ತಿದ್ದಾಳೆ ಎಂಬ ಕಾರಣಕ್ಕೆ ಸುಮಾರು 3,100 ರೂ. ಬಿಲ್ ಮಾಡಿದ್ದಾರೆ. ಈ ಬಿಲ್ನ ರಶೀದಿ ಇದೀಗ ಭಾರೀ ವೈರಲ್ ಆಗಿದೆ.
ಅಮೆರಿಕಾದ ವೈದ್ಯರ ಅಪಾಯಿಂಟ್‌ಮೆಂಟ್‌ನಲ್ಲಿ “ಅತ್ತಿದ್ದಕ್ಕಾಗಿ” ತನ್ನ ಸಹೋದರಿಗೆ ಸುಮಾರು 3,100 ರೂ. ವಿಧಿಸಲಾಗಿದೆ ಎಂದು ಅಮೆರಿಕಾದ ಮಹಿಳೆಯೊಬ್ಬರು ಇತ್ತೀಚೆಗೆ ಬಿಲ್ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಸಹೋದರಿಗೆ “ಅಪರೂಪದ ಕಾಯಿಲೆ” ಇತ್ತು. ಆಕೆಯನ್ನು ನಾವು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಆಕೆ ಭಾವುಕಳಾಗಿ ಕಣ್ಣೀರು ಹಾಕಿದಳು. ವೈದ್ಯರು ನೀಡಿರುವ ಬಿಲ್ನಲ್ಲಿ ಬ್ರೀಫ್ ಎಮೋಷನ್/ ಬಿಹೇವಿಯರಲ್ ಅಸೆಸ್ಮೆಂಟ್ ಎಂದು ನಮೂದಿಸಿ ಅದಕ್ಕೂ ಚಾರ್ಜ್ ಮಾಡಲಾಗಿದೆ.
My little sister has been really struggling with a health condition lately and finally got to see a doctor. They charged her $40 for crying. pic.twitter.com/fbvOWDzBQM
— Camille Johnson (@OffbeatLook) May 17, 2022
ಬಿಲ್ನಲ್ಲಿ ವೈದ್ಯರ ಭೇಟಿಯ ವಿವಿಧ ವೆಚ್ಚವು ಹೀಗಿದೆ. ದೃಷ್ಟಿ ಮೌಲ್ಯಮಾಪನ ಪರೀಕ್ಷೆ- 20 ಡಾಲರ್, ಹಿಮೋಗ್ಲೋಬಿನ್ ಪರೀಕ್ಷೆ- 15 ಡಾಲರ್, ಕ್ಯಾಪಿಲ್ಲರಿ ರಕ್ತ ಡ್ರಾ – 30 ಡಾಲರ್, ಆರೋಗ್ಯ ತಪಾಸಣೆ- 350 ಡಾಲರ್ ಮತ್ತು ಬ್ರೀಫ್ ಎಮೋಷನಲ್/ ಬಿಹೇವಿಯರಲ್ ಅಸೆಸ್ಮೆಂಟ್- 40 ಡಾಲರ್ ಶುಲ್ಕ ವಿಧಿಸಲಾಗಿದೆ.
ಇದನ್ನೂ ಓದಿ: Shocking News: ಮದುವೆ ಮಂಟಪದಲ್ಲೇ ವಧುವಿಗೆ ಶೂಟ್ ಮಾಡಿ ಕೊಂದ ಮಾಜಿ ಪ್ರಿಯಕರ!
ಈ ಬಿಲ್ನ ಫೋಟೋಗೆ ಟ್ವಿಟ್ಟರ್ನಲ್ಲಿ 4,94,000ಕ್ಕೂ ಹೆಚ್ಚು ಲೈಕ್ಗಳು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಇಂಟರ್ನೆಟ್ ಬಳಕೆದಾರರು ಅಧಿಕ ಶುಲ್ಕದ ವೈದ್ಯಕೀಯ ಬಿಲ್‌ಗಳೊಂದಿಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ