Shocking Video: ರಸ್ತೆಯ ಮಧ್ಯದಲ್ಲಿ ಬೈಕ್ ಸವಾರ ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ನೋಡಿ

ರಸ್ತೆ ಮಧ್ಯದಲ್ಲಿ ಸ್ಟಂಟ್​ ಮಾಡುತ್ತಿದ್ದ ಬೈಕ್​ ಸವಾರನ ಪರಿಸ್ಥಿತಿ ಏನಾಯ್ತು ನೋಡಿ. ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​.

Shocking Video: ರಸ್ತೆಯ ಮಧ್ಯದಲ್ಲಿ ಬೈಕ್ ಸವಾರ ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ನೋಡಿ
ಬೈಕ್​ ಸ್ಟಂಟ್​
Edited By:

Updated on: Nov 01, 2021 | 10:45 AM

ಸಾಮಾಜಿಕ ಜಾಲತಾಣದಲ್ಲಿ ನಕ್ಕು ಹೊಟ್ಟೆ ಹುಣ್ಣಾಗಿಸುವ ದೃಶ್ಯದ ವಿಡಿಯೊಗಳ ಜೊತೆಗೆ ಎಚ್ಚರಿಸುವ ಸಂದೇಶ ಸಾರುವ ವಿಡಿಯೊಗಳು ಹೆಚ್ಚು ವೈರಲ್ ಆಗುತ್ತದೆ. ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋದರೆ ಏನೆಲ್ಲಾ ಆಗಬಹುದು ಎಂದು ಎಚ್ಚರಿಸುವ ವಿಡಿಯೊವೊಂದು ಇದೀಗ ಫುಲ್ ವೈರಲ್ ಆಗಿದೆ. ಸ್ಟಂಟ್ ಮಾಡುವ ಭಯದಲ್ಲಿ ವ್ಯಕ್ತಿ ತನ್ನ ಜೀವವನ್ನೇ ಅಪಾಯದಲ್ಲಿ ಸಿಲುಕಿಸಿಕೊಂಡಿದ್ದಾನೆ. ವಿಡಿಯೊ ಇದೆ ನೀವೇ ನೋಡಿ.

ದೃಶ್ಯದಲ್ಲಿ ನೋಡುವಂತೆ ಬೈಕ್ ಸವಾರನೊಬ್ಬ ರಸ್ತೆಯ ಮಧ್ಯdಲ್ಲಿ ಬೈಕ್ ಓಡಿಸುತ್ತಿದ್ದಾನೆ. ವೇಗದಲ್ಲಿ ಬೈಕ್ ಓಡಿಸುತ್ತಲೇ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಎರಡೂ ಬದಿಯಿಂದ ವಾಹನಗಳು ಚಲಿಸುತ್ತಿರುವುದನ್ನು ಗಮನಿಸಬಹುದು. ರಸ್ತೆಯ ಮಧ್ಯದಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದಂತೆ ಎದುರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.

ವಿಡಿಯೊ ನೋಡಿದ ಕೆಲವು ಭಯಗೊಂಡಿದ್ದಾರೆ. ಈ ಆಘಾತಕಾರಿ ವಿಡಿಯೊ ಜನರನ್ನು ಎಚ್ಚರಿಸುವಂತೆ ಮಾಡಿದೆ. ಇದನ್ನು ನೋಡಿದ ಮೇಲಾದರೂ ಜನರು ಎಚ್ಚೆತ್ತುಕೊಳ್ಳಲೇಬೇಕು ಎಂದು ಕೆಲವರು ಹೇಳಿದ್ದಾರೆ. ನೂರಕ್ಕಿಂತಲೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿದೆ. ಇಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್​; ನೆಟ್ಟಿಗರೆಲ್ಲಾ ಫಿದಾ

Viral Video: ಓರ್ವನಿಗಾಗಿ ಇಬ್ಬರು ಯುವತಿಯರ ಫೈಟಿಂಗ್​; ರಸ್ತೆಯಲ್ಲೇ ಜಗಳವಾಡಿದ ವಿಡಿಯೋ ವೈರಲ್

Published On - 12:45 pm, Fri, 29 October 21