ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅಹಿತಕರ ಹಾಗೂ ಶಾಂತಿ ಕದಡುವ ಘಟನೆಗಳು ನಡೆಯಬಾರದೆಂದು ಭದ್ರತೆಯತ್ತ ಹೆಚ್ಚಿನ ಎಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ರೀತಿ ಕಾರೊಂದನ್ನು ಅಡ್ಡಹಾಕಿ ಭದ್ರತಾ ತಪಾಸಣೆಗೆ ಮುಂದಾದ ಪೊಲೀಸ್ ಸಿಬ್ಬಂದಿಯನ್ನು ಕಾರಿನೊಂದಿಗೇ ಎಳೆದುಕೊಂಡು ಹೋದ ಭಯಾನಕ ವಿಡಿಯೋ ವೈರಲ್ ಆಗಿದೆ.
ಪಂಜಾಬ್ನ ಪಟಿಯಾಲದಲ್ಲಿ ಈ ಘಟನೆ ನಡೆದಿದ್ದು, ಕಾರಿಗೆ ಸಿಕ್ಕ ಪೊಲೀಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಎನ್ಐ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ವೇಗವಾಗಿ ಬಂದ ಕಾರನ್ನು ಅಡ್ಡಹಾಕಿದ ಪೊಲೀಸ್ ಆ ಕಾರನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಆದರೆ, ರಸ್ತೆಯಲ್ಲಿ ನಿಂತು ಅಡ್ಡಹಾಕಿದರೂ ಕಾರು ನಿಲ್ಲಿಸದ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಈ ವೇಳೆ ಕಾರಿನ ಎದುರಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿ ತನ್ನ ಮೇಲೆ ಕಾರು ಹತ್ತುವುದನ್ನು ತಪ್ಪಿಸಿಕೊಳ್ಳಲು ಪಕ್ಕಕ್ಕೆ ಸರಿದಿದ್ದಾರೆ. ಎಷ್ಟು ಕೂಗಿದರೂ ಕಾರು ನಿಲ್ಲಿಸದ ಚಾಲಕ ಪೊಲೀಸನ್ನು ಎಳೆದುಕೊಂಡು ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರಿನ ರಭಸಕ್ಕೆ ಪೊಲೀಸ್ ಹಣೆ ಕಾರಿನ ಎಡಭಾಗದ ಕನ್ನಡಿಗೆ ಬಡಿದಿದೆ. ಬಳಿಕ ಅವರು ರಸ್ತೆಯಲ್ಲಿ ಬಿದ್ದಿದ್ದಾರೆ.
#WATCH Car evading security check hits police personnel in Patiala, Punjab
Police say the injured police personnel is under medical treatment, car traced, further investigation underway
(Video source: Police) pic.twitter.com/ZF9wygy8Xm
— ANI (@ANI) August 14, 2021
ಕಾರಿನ ಮುಂಭಾಗದಲ್ಲಿ ಕಪ್ಪು ಬಾವುಟ ಇದ್ದುದರಿಂದ ಅನುಮಾನಗೊಂಡ ಪೊಲೀಸ್ ಕಾರು ನಿಲ್ಲಿಸುವಂತೆ ಅಡ್ಡಗಟ್ಟಿದ್ದಾರೆ. ಆದರೆ, ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ಪೊಲೀಸನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಕಾರು ಯಾರದ್ದು ಎಂಬುದನ್ನು ಪೊಲೀಸರು ಸಿಸಿಟಿವಿ ಮೂಲಕ ಪತ್ತೆಹಚ್ಚುತ್ತಿದ್ದಾರೆ.
ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು
Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್
(Shocking Video: Punjab Police Dragged By Car He Was Trying To Stop For Checking Watch Viral Video)