Viral Video: ಸಂತೂರ್ ವಾದ್ಯದಲ್ಲಿ ಅದ್ಭುತ ಶೃತಿ, ಲಯ; ನೆಟ್ಟಿಗರ ಮನಗೆದ್ದ ಇರಾನಿಯನ್ ಹುಡುಗಿ ನುಡಿಸಿದ ರಾಷ್ಟ್ರಗೀತೆ
Independence day 2021: ವರದಿಗಳ ಪ್ರಕಾರ ತಾರಾ ಘಹ್ರೆಮನಿ ಅವರಿಗೆ 12 ವರ್ಷದಿಂದ ಸಂತೂರ್ ವಾದ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಇಡೀ ದೇಶವೇ ಇಂದು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ಇರಾನಿಯನ್ ಯುವತಿಯೋರ್ವಳು ಸಂತೂರ್ ವಾದ್ಯದ ಮೂಲಕ ರಾಷ್ಟ್ರಗೀತೆಯನ್ನು ನುಡಿಸಿದ್ದಾಳೆ. ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದ್ದು ಫುಲ್ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಂತೂರ್ ವಾದ್ಯದಲ್ಲಿ ಸುಂದರವಾಗಿ ರಾಷ್ಟ್ರಗೀತೆ ನುಡಿಸಿದ ಇರಾನಿಯನ್ ಯುವತಿಗೆ ಧನ್ಯವಾದ ತಿಳಿಸಿದ್ದಾರೆ.
ಯುವತಿಯ ಹೆಸರು ತಾರಾ ಘಹ್ರೆಮನಿ. ಯುವತಿ ಸಂತೂರ್ ವಾದ್ಯದ ಎದುರು ಕುಳಿತು ಪಿಂಕ್ ಬಣ್ಣದ ಉಡುಗೆ ತೊಟ್ಟು ರಾಷ್ಟ್ರಗೀತೆಯನ್ನು ನುಡಿಸಿದ್ದಾರೆ. 72ನೇ ಗಣರಾಜ್ಯೋತ್ಸವದ ಅಂಗವಾಗಿ ಈ ಹಿಂದೆ ಸಂತೂರ್ ವಾದ್ಯ ನುಡಿಸಿದ ವಿಡಿಯೋ ಕೂಡಾ ವೈರಲ್ ಆಗಿತ್ತು. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ನೆಟ್ಟಿಗರು ಇಷ್ಟಪಟ್ಟಿದ್ದರು.
National anthem in any form would give us goosebumps. Many thanks to this Iranian girl for this beautiful performance. #happyindependenceday ?? pic.twitter.com/KhyylXsP0W
— Sudha Ramen IFS ?? (@SudhaRamenIFS) August 15, 2021
ವರದಿಗಳ ಪ್ರಕಾರ ತಾರಾ ಘಹ್ರೆಮನಿ ಅವರಿಗೆ 12 ವರ್ಷದಿಂದ ಸಂತೂರ್ ವಾದ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಅದ್ಭುತ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವತಃ ಅವರೇ ಕೆಲವು ಹಾಡುಗಳನ್ನು ರಚಿಸಿದ್ದಾರೆ. ತಮ್ಮ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುತ್ತಾರೆ.
View this post on Instagram
ಇದನ್ನೂ ಓದಿ:
Independence day 2021: ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೂಗಲ್ ಡೂಡಲ್ ವಿಶೇಷ ಗೌರವ
ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ 5 ಅತ್ಯುತ್ತಮ ದೇಶಭಕ್ತಿ ಸಿನಿಮಾ: ಯಾವ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ?