
Viral : ಡಿಜಿಟಲ್ ಯುಗದಲ್ಲಿ ತಮ್ಮ ಜೀವನ ಸಂಗಾತಿಗಳನ್ನು ಹುಡುಕಿಕೊಳ್ಳುವ ವಿಧಾನ ಇತ್ತೀಚೆಗೆ ಗಮನ ಸೆಳೆಯುವಂತಿರುತ್ತವೆ; ಹಿಂದೂ ಪಿಳ್ಳೈ, ಮಾಂಸಾಹಾರಿ, ಶ್ರೀಮಂತ ಮನೆತನದ ಸೌಂದರ್ಯವತಿಯಾಗಿರುವ, ಎಂಬಿಎ ಓದಿರುವ 24 ವಯಸ್ಸಿನ ವಧುವಿಗೆ ಇದೇ ಜಾತಿಯ ವರ ಬೇಕಾಗಿದೆ. ಐಪಿಎಸ್, ಐಎಎಸ್, ವೈದ್ಯ (ಪಿಜಿ) ಉದ್ಯಮಿ, ಕೈಗಾರಿಕೋದ್ಯಮಿಗಳು ಸಂಪರ್ಕಿಸಬಹುದು. ಆದರೆ ದಯವಿಟ್ಟು ಸಾಫ್ಟ್ವೇರ್ ಎಂಜನಿಯರುಗಳು ಫೋನ್ ಮಾಡಬೇಡಿ-ಪತ್ರಿಕೆಯಲ್ಲಿ ಬಂದ ಜಾಹೀರಾತಿನ ತುಣುಕೊಂಡು ವೈರಲ್ ಆಗಿದೆ. ಹಾಗಿದ್ದರೆ ಸಾಫ್ಟ್ವೇರ್ ಎಂಜಿನಿಯರ್ ವರಗಳಿಗೆ ಬೇಡಿಕೆ ಕುಸಿಯುತ್ತಿದೆಯೇ?
ಒಟ್ಟಾರೆಯಾಗಿ ಸಾಫ್ಟ್ವೇರ್ ಕ್ಷೇತ್ರದ ಭವಿಷ್ಯದ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಪನ್ ಮಾಡಿ ಈ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಇಂಥ ವಿಚಿತ್ರ ಜಾಹೀರಾತುಗಳ ಕಾಲೆಳೆಯಲು ಆಗಾಗ ಕಾಯುತ್ತಿರುತ್ತಾರೆ. ಸದ್ಯ ಈ ಜಾಹೀರಾತು ನೆಟ್ಟಿಗರನ್ನು ಬಗೆಬಗೆಯಲ್ಲಿ ಯೋಚಿಸುವಂತೆ, ಪ್ರತಿಕ್ರಿಯಿಸುವಂತೆ ಮಾಡಿದೆ.
‘ಮೆಕ್ಯಾನಿಕಲ್ ಎಂಜಿನಿಯರುಗಳು ಫೋನ್ ಮಾಡಬಹುದಾ?’ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ‘ಈ ಜಾಹೀರಾತು ನೋಡುತ್ತಿದ್ದಂತೆ, ಇಡೀ ದೇಶದ ಭವಿಷ್ಯ ಅಷ್ಟೊಂದು ಚೆನ್ನಾಗಿಲ್ಲ ಎಂದೆನ್ನಿಸುತ್ತಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಚಿಂತೆ ಮಾಡಬೇಡಿ, ಸಾಫ್ಟ್ವೇರ್ ಎಂಜಿನಿಯರುಗಳು ಪತ್ರಿಕೆಯ ಜಾಹೀರಾತುಗಳನ್ನು ಅವಲಂಬಿಸಿರುವುದಿಲ್ಲ. ತಮಗೆ ಬೇಕಾದುದನ್ನು ಸ್ವತಃ ಹುಡುಕಿಕೊಳ್ಳುತ್ತಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.
ನಿಮಗೇನೆನ್ನಿಸುತ್ತಿದೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:20 am, Wed, 21 September 22