
ಬಡತನ ಎಲ್ಲವನ್ನು ಕಲಿಸಿಬಿಡುತ್ತದೆ. ಸಣ್ಣ ವಯಸ್ಸಿನಿಂದಲೇ ತನ್ನ ಕನಸುಗಳನ್ನು ರಾಜಿ ಮಾಡಿಕೊಳ್ಳುತ್ತಾ, ಅದನ್ನು ನನಸು ಮಾಡಿಕೊಳ್ಳುವುದೇ ಕೈಗೊಂದು ಉದ್ಯೋಗ ಸಿಕ್ಕ ಮೇಲೆಯೇ. ಸ್ವಿಗ್ಗಿ ಡೆಲಿವರಿ (Swiggy delivery boy) ಏಜೆಂಟ್ ಆಗಿ ಕೆಲಸ ಮಾಡುವ ಯುವಕನೊಬ್ಬ, ತನ್ನ ಹೆತ್ತಮ್ಮನಿಗೆ ಸ್ಮಾರ್ಟ್ ಟಿವಿ ಗಿಫ್ಟ್ ಕೊಟ್ಟಿದ್ದಾನೆ. ಮಗ ನೀಡಿದ ಉಡುಗೊರೆ ನೋಡಿ ತಾಯಿ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.
ಫಾರ್ ಮೆನ್ ಇಂಡಿಯಾ (For men India) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಯುವಕನು ಮನೆಗೆ ಟಿವಿ ತಂದಿರುವುದನ್ನು ಕಾಣಬಹುದು. ಸ್ವಂತ ದುಡಿಮೆಯಿಂದ ಅಮ್ಮನಿಗೆ ಏನಾದ್ರೂ ತಂದುಕೊಡಬೇಕು ಎನ್ನುವುದಿತ್ತು. ಹೀಗಾಗಿ ತನ್ನ ದುಡಿಮೆಯ ಹಣವನ್ನು ಕೂಡಿಟ್ಟು ಟಿವಿ ತಂದಿರುವುದಾಗಿ ಇಲ್ಲಿ ಹೇಳಿಕೊಂಡಿದ್ದಾನೆ. ಹೊಸ ಸ್ಮಾರ್ಟ್ ಟಿವಿ ಮನೆಗೆ ತಂದೊಡನೆ ಈ ಯುವಕನ ತಾಯಿ ಹಾಗೂ ಅಜ್ಜಿ ಖುಷಿಯಲ್ಲಿ ಭಾವುಕರಾಗಿರುವುದನ್ನು ಈ ದೃಶ್ಯದಲ್ಲಿ ನೋಡಬಹುದು.
ಇದನ್ನೂ ಓದಿ: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿದ ಡೆಲಿವರಿ ಬಾಯ್! ವೀಡಿಯೋ ವೈರಲ್
ಈ ವಿಡಿಯೋ ನಲವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತಿದೆ ಎಂದಿದ್ದಾರೆ. ಮತ್ತೊಬ್ಬರು, ಬೇರೆಯವರ ಖುಷಿಯನ್ನು ತನ್ನ ಖುಷಿ ಕಾಣೋದು ಅಂದ್ರೆ ಅದು ಇದೆ ಇರ್ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಗೆ ತುಂಬಾ ಶಕ್ತಿಯಿದೆ, ಹೀಗೆ ಕನಸುಗಳನ್ನು ಬೆನ್ನತ್ತಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ