ಜೇಡದಂತಹ ಅವತಾರದಲ್ಲಿ ಕಾಣಸಿಗುವವನೇ ಸ್ಪೈಡರ್ ಮ್ಯಾನ್ (Spider-Man) ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ತನ್ನ ಕೈ ಮೂಲಕ ಪ್ರಬಲವಾದ ಜೇಡದ ಬಲೆಯನ್ನು ಬೀಸುತ್ತಾನೆ, ಆ ಜೇಡದ ಬಲೆಯಲ್ಲೇ ನೇತಾಡುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಾನೆ, ಶತ್ರಗಳ ವಿರುದ್ಧ ಫೈಟ್ ಮಾಡುವಾಗಲೂ ಪ್ರಬಲ ಬಲೆಯನ್ನು ಬೀಸುತ್ತಾನೆ, ಇಂತಹ ಅನೇಕ ದೃಶ್ಯಗಳನ್ನು ಸ್ಪೈಡರ್ ಮ್ಯಾನ್ ಸಿನಿಮಾದಲ್ಲಿ ಕಾಣಬಹುದು. ಇಂತಹ ಸ್ಪೈಡರ್ ಮ್ಯಾನ್ನ ವೇಷವನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡು ವಿಚಿತ್ರವಾಗಿ ವರ್ತಿಸಿದರೆ ಹೇಗೆ? ಇಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಸ್ನ ಮೇಲೆ ಸ್ಪೈಡರ್ ಮ್ಯಾನ್ ಡಾನ್ಸ್ (Dance) ಮಾಡಿ ಕೀಟಲೆ ಕೊಡುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಬಸ್ನ ಮೇಲೆ ಸ್ಪೈಡರ್ ಮ್ಯಾನ್ ವೇಷ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಆತ ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡುತ್ತಾನೆ ಎಂದು ವಿಡಿಯೋ ನೋಡುವಾಗ ಯೋಚಿಸಿದರೆ, ಆತ ಮಾಡಿದ್ದೇ ಬೇರೆ. ಅಷ್ಟಕ್ಕೂ ಆತ ಬಸ್ನ ಮೇಲ್ಛಾವಣಿ ಮೇಲೆ ನಿಂತು ಮಾಡಿದ್ದ ಡಾನ್ಸ್. ಬಸ್ನ ಮೇಲೆ ಮಲಗಿ ಕಿಟಕಿಯಲ್ಲಿ ಇಣುಕುವುದನ್ನು ಮಾಡಿದ ಸ್ಪೈಡರ್ ಮ್ಯಾನ್, ನಂತರ ಫನ್ನಿಯಾಗಿ ಡಾನ್ಸ್ ಮಾಡಿ ನೋಡುಗರನ್ನು ನಕ್ಕು ನಗಿಸಿದ್ದಾನೆ. ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸಗಳನ್ನು ಮಾಡದಿದ್ದರೂ ಕೆಲವೊಂದು ಸ್ಪೈಡರ್ ಮ್ಯಾನ್ ಸನ್ನೆಗಳನ್ನು ಮಾಡಿದ್ದಾನೆ.
Published On - 6:10 pm, Sun, 17 July 22