Viral Video: ಸವಾರನ ದುಸ್ಸಾಹಸದ ಬೈಕ್ ರೈಡಿಂಗ್ ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವೈರಲ್ ಆಗುತ್ತಿದೆ ವಿಡಿಯೋ
ಬೈಕ್ನ ಹಿಂಬದಿ ಸೀಟಿನಲ್ಲಿ ಕುಳಿತು ಕಾಲಮೇಲೆ ಕಾಲು ಹಾಕಿ ಮೊಬೈಲ್ನಲ್ಲಿ ಮಾತನಾಡುತ್ತಾ ಬೈಕ್ ರೈಡಿಂಗ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೈಕ್ ರೈಡಿಂಗ್(Bike Riding)ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು ಒಂದಲ್ಲಾ ಒಂದು ರೀತಿಯ ಸಾಹಸಕ್ಕೆ ಅಥವಾ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಕೈಗಳನ್ನು ಬಿಟ್ಟು ಬೈಕ್ ಓಡಿಸುವುದು, ಸೀಟಿನಲ್ಲಿ ಮಲಗಿಕೊಂಡು ಬೈಕ್ ಬಿಡುವುದು, ಬೈಕ್ ಮೇಲೆ ನಿಂತು ರೈಡ್ ಮಾಡುವುದು, ಹ್ಯಾಂಡಲ್ ಮೇಲೆ ಕುಳಿತುಕೊಂಡು ಬೈಕ್ ರೈಡ್ ಮಾಡುವುದು ಸೇರಿದಂತೆ ಇತ್ಯಾದಿ ಸಹಾಸಗಳನ್ನು ಮಾಡುತ್ತಾರೆ. ಇಂತಹ ಸಾಹಸವನ್ನು ನೋಡುವಾಗ ಎಂತಹವರ ಮೈ ಕೂಡ ಜುಮ್ಮೆನ್ನುತ್ತದೆ. ಇದೀಗ ಬೈಕ್ ಸವಾರನೊಬ್ಬ ಬೈಕ್ನಲ್ಲಿ ಸಾಹಸ ಮಾಡುತ್ತಾ ರೈಡ್ ಮಾಡಿದ್ದು, ಇದರ ವಿಡಿಯೋ (Video) ನೋಡಿದರೆ ಒಂದು ನಿಮಿಷ ನೀವು ಕೂಡ ಬೆಚ್ಚಿ ಬೀಳುತ್ತೀರಿ.
ಅಪಾಯದ ಸಾಹಸಗಳ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣ ಹಾಟ್ಸ್ಪಾಟ್ ಆಗಿದೆ. ಸದ್ಯ ಇಂಟರ್ನೆಟ್ನಲ್ಲಿ ಗಮನಸೆಳೆದ ಬೈಕ್ ಸವಾರನ ರೈಡಿಂಗ್ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇರುವಂತೆ, ವ್ಯಕ್ತಿಯೊಬ್ಬರು ಬೈಕ್ನ ಮುಂದಿನ ಸೀಟಿನಲ್ಲಿ ಅಲ್ಲ, ಬೈಕ್ ಹ್ಯಾಂಡಲ್ ಬಿಟ್ಟು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ವೇಗವಾಗಿ ರೈಡ್ ಮಾಡುವುದನ್ನು ಕಾಣಬಹುದು. ವಿಡಿಯೋದಲ್ಲಿ ಗಮನಿಸಬೇಕಾದ ಅಂಶವೆಂದರೆ, ಆ ಬೈಕ್ ಸವಾರ ತನಗೆ ಯಾರೂ ಸರಿಸಾಠಿ ಇಲ್ಲ ಎಂಬಂತೆ ಕಾಲಮೇಲೆ ಕಾಲು ಹಾಕಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಾ ಹೋಗುತ್ತಿರುತ್ತಾನೆ.
ಬೈಕ್ ಸವಾರನ ಮೈನರಳಿಸುವ ಸಾಹಸದ ದೃಶ್ಯಾವಳಿಯನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ realkaranchawla_ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 18.94 ಲಕ್ಷ ಲೈಕ್ಗಳು ಬಂದಿವೆ ಮತ್ತು 24.3 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದಾರೆ.
View this post on Instagram
ವಿಡಿಯೋವನ್ನು ವೀಕ್ಷಿಸಿದ ನಂತರ, ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವು ಬಳಕೆದಾರರು ವಿಡಿಯೋದಲ್ಲಿ ಕಂಡ ವ್ಯಕ್ತಿಯನ್ನು ಹೆವಿ ಡ್ರೈವರ್ ಎಂದು ಕರೆದರೆ, ಕೆಲವರು ಮಿಸ್ಟರ್ ಇಂಡಿಯಾ ಚಲನಚಿತ್ರವನ್ನು ನೆನಪಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮತ್ತೊಬ್ಬ ಬಳಕೆದಾರ, “ಅನಿಲ್ ಕಪೂರ್ ಬೈಕ್ ಚಲಾಯಿಸುತ್ತಿದ್ದಾರೆ” ಎಂದು ಕಾಮೆಂಟ್ ಮಾಡಿದ್ದಾರೆ.
Published On - 2:54 pm, Sun, 17 July 22