Viral Video: ಹಲವು ದಿನಗಳ ನಂತರ ಮತ್ತೆ ಒಂದಾದ ಎರಡು ಹಂಸಗಳು ಪರಸ್ಪರ ಪ್ರೀತಿಸುವ ವಿಡಿಯೋ ವೈರಲ್

ಹಲವು ದಿನಗಳ ನಂತರ ತನ್ನ ಸಂಗಾತಿಯನ್ನು ಸೇರಿಕೊಂಡ ಹಂಸ. ನೀರಿನಲ್ಲಿ ಪರಸ್ಪರ ಪ್ರೀತಿಸುತ್ತಾ ಈಜಾಡಿದ ಹಂಸಗಳ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ.

Viral Video: ಹಲವು ದಿನಗಳ ನಂತರ ಮತ್ತೆ ಒಂದಾದ ಎರಡು ಹಂಸಗಳು ಪರಸ್ಪರ ಪ್ರೀತಿಸುವ ವಿಡಿಯೋ ವೈರಲ್
ಬಹುದಿನಗಳ ನಂತರ ಮತ್ತೆ ಒಂದಾದ ಹಂಸಗಳು
Follow us
TV9 Web
| Updated By: Rakesh Nayak Manchi

Updated on:Jul 17, 2022 | 12:48 PM

ಅತ್ಯಂತ ಪ್ರೀತಿಪಾತ್ರರನ್ನು ಹಲವು ದಿನಗಳ ನಂತರ ಭೇಟಿಯಾದಾಗ ಪ್ರೀತಿ ಉಕ್ಕಿ ಬರುವುದು ಸಹಜ. ತನ್ನ ಒಡನಾಡಿಯನ್ನು ಬಿಟ್ಟು ದೂರು ಹೋಗಿ ಮತ್ತೆ ಬಳಿ ಬಂದಾಗ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಪ್ರೀತಿಯಿಂದ ವರ್ತಿಸುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾರಗಟ್ಟಲೆ ದೂರ ಉಳಿದಿದ್ದ ಎರಡು ಹಂಸಗಳು (Swans) ಮೊದಲ ಬಾರಿಗೆ ಮತ್ತೆ ಒಂದಾಗಿವೆ. ಈ ವೇಳೆ ಅವುಗಳು ತೋರಿದ ಪರಪಸ್ಪರ ಪ್ರೀತಿಯ ಹೃದಯಸ್ಪರ್ಶಿ ವಿಡಿಯೋ ವೈರಲ್ (Video Viral) ಆಗುತ್ತಿದೆ. ಗಾಯಗೊಂಡು ಚಿಕಿತ್ಸೆ ಪಡೆದ ಹಂಸವನ್ನು ನೀರಿನಲ್ಲಿ ಒಂಟಿಯಾಗಿರುವ ಹಂಸದೊಂದಿಗೆ ಬಿಡುವುದನ್ನು ಮತ್ತು ಪರಸ್ಪರ ಪ್ರೀತಿಸುವುದನ್ನು ವಿಡಿಯೋ ತೋರಿಸುತ್ತದೆ.

ವಿಡಿಯೋದಲ್ಲಿ ಇರುವಂತೆ, ಒಬ್ಬ ವ್ಯಕ್ತಿಯು ಬಿಳಿ ಚೀಲದಲ್ಲಿ ಹಂಸವನ್ನು ಇಟ್ಟುಕೊಂಡು ಕೊಳದ ಬಳಿ ಬರುತ್ತಾನೆ. ನಂತರ ಚೀಲವನ್ನು ಬಿಚ್ಚಿ ಹಂಸವನ್ನು ನೀಡಿಗೆ ಬಿಟ್ಟಾಗ ಅದು ಹೋಗಿ ತನ್ನ ಸಂಗಾತಿಯನ್ನು ಸೇರಿಕೊಳ್ಳುತ್ತದೆ. ಈ ವೇಳೆ ಹಲವು ದಿನಗಳ ನಂತರ ಒಟ್ಟಾದ ಖುಷಿಯಲ್ಲಿ ಎರಡು ಹಂಸಗಳು ಪರಸ್ಪರ ಪ್ರೀತಿಸಿವೆ. ಪ್ರೀತಿಯ ಹಾವಭಾವನ್ನು ನೋಡಲು ಕಣ್ಣುಗಳೆರಡು ಸಾಲದೆಂಬಂತಿದೆ.

Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಹಂಸಗಳ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ವಾರಗಳ ನಂತರ ಮೊದಲ ಬಾರಿಗೆ ಹಂಸಗಳು ಮತ್ತೆ ಒಂದಾಗುತ್ತಿವೆ” ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದು ನೆಟ್ಟಗರ ಮನಗೆದ್ದುಕೊಂಡಿದ್ದು,  2.4 ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್​ಗಳು, 12ಸಾವಿರಕ್ಕೂ ಹೆಚ್ಚು ರೀಟ್ವೀಟ್​ಗಳು ಆಗಿವೆ.

ಪಕ್ಷಿ ಗಾಯಗೊಂಡ ಹಿನ್ನೆಲೆ ಚಿಕಿತ್ಸೆಗಾಗಿ ಕರೆದೊಯ್ದು ಮತ್ತೆ ಬಿಡಲಾಗಿದೆ ಎಂದು ಬಳಕೆದಾರರು ಊಹಿಸಿದ್ದಾರೆ. “ಬ್ಯಾಗ್‌ನಲ್ಲಿರುವ ಹಂಸ ದೈಹಿಕವಾಗಿ ಗಾಯಗೊಂಡಿರಬಹುದು ಅಥವಾ ಅನಾರೋಗ್ಯದಿಂದ ಕೂಡಿರಬಹುದು” ಎಂದು ನೆಟ್ಟಿಗರೊಬ್ಬರು ತನ್ನ ಊಹೆಯನ್ನು ತಿಳಿಸಿದ್ದಾರೆ. ಪ್ರೀತಿಯ ಶಕ್ತಿಯು ಭೂಮಿಯ ಎಲ್ಲಾ ಜೀವಿಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿದ ಇನ್ನೊಬ್ಬ ಬಳಕೆದಾರರು, ಜೀವಿಗಳ ಸೌಂದರ್ಯ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು.

ಹಂಸಗಳು ಏಕಪತ್ನಿ ಜೀವಿಗಳು. ಒಮ್ಮೆ ಅವುಗಳು ತಮ್ಮ ಸಂಗಾತಿಯನ್ನು ಆರಿಸಿಕೊಂಡರೆ ಅವುಗಳೊಂದಿಗೆಯೇ ಜೀವನದ ಬಂಧವನ್ನು ಬೆಸೆಯುತ್ತವೆ. ಮಾನವರಂತೆಯೇ ಹಂಸಗಳು ಸಹ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುತ್ತವೆ ಮತ್ತು ಕೆಲವೊಮ್ಮೆ ಬಿಡುತ್ತವೆ. ಹೆಚ್ಚಿನ ಹಂಸ ದಂಪತಿಗಳು ಸಾಮಾನ್ಯವಾಗಿ ಜೀವನದುದ್ದಕ್ಕೂ ಒಟ್ಟಿಗೆ ಇರುತ್ತವೆ. ಸಂಗಾತಿ ಸಾವನ್ನಪ್ಪಿದಾಗ ಅವುಗಳು ಮತ್ತೊಂದು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ.

Published On - 12:48 pm, Sun, 17 July 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?