ಈ ರೀತಿ ಜಗಳ ನೀವೆಲ್ಲಾದ್ರೂ ನೋಡಿದೀರಾ? ನೋ ವೇ ಚಾನ್ಸೆ ಇಲ್ಲ

ಸಾಮಾನ್ಯವಾಗಿ ಗಂಡಸರು ಜಗಳವಾಡ್ತಾರೆ ಎಂದ್ರೆ ಮಾತಿಗಿಂತ ಕೈಗಳೇ ಮುಂದಿರುತ್ತೆ. ಆದರೆ ಇತ್ತೀಚೆಗೆ ಚೀನಾದಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅದು ಜಗಳವೋ ಚುಂಬನವೋ ಒಂದು ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ವೈರಲ್ ಆಗುವ ಜಗಳದ ವಿಡಿಯೋಗಳು ಮನಸ್ಸಿಗೆ ಘಾಸಿ ಮಾಡುವಂತಿರುತ್ತವೆ, ಆದರೆ ಈ ವಿಡಿಯೋ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ. ಸಾರ್ವಜನಿಕ ರೈಲಿನೊಳಗೆ ಇಬ್ಬರು ಚೀನೀ ವ್ಯಕ್ತಿಗಳ ನಡುವೆ ಆರಂಭವಾದ ವಾಗ್ವಾದ ಈ ಹಂತಕ್ಕೆ ತಲುಪಿತ್ತು. ಆದರೆ ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಈ ರೀತಿ ಜಗಳ ನೀವೆಲ್ಲಾದ್ರೂ ನೋಡಿದೀರಾ? ನೋ ವೇ ಚಾನ್ಸೆ ಇಲ್ಲ
ಜಗಳವಾಡಿದ ಚೀನಿಗಳು

Updated on: Dec 18, 2025 | 10:20 AM

ಸಾಮಾನ್ಯವಾಗಿ ಗಂಡಸರು ಜಗಳ (Quarrel)ವಾಡ್ತಾರೆ ಎಂದ್ರೆ ಮಾತಿಗಿಂತ ಕೈಗಳೇ ಮುಂದಿರುತ್ತೆ. ಆದರೆ  ಕೆಲವು ದಿನಗಳ ಹಿಂದೆ ಚೀನಾದಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅದು ಜಗಳವೋ ಚುಂಬನವೋ ಒಂದು ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ವೈರಲ್ ಆಗುವ ಜಗಳದ ವಿಡಿಯೋಗಳು ಮನಸ್ಸಿಗೆ ಘಾಸಿ ಮಾಡುವಂತಿರುತ್ತವೆ, ಆದರೆ ಈ ವಿಡಿಯೋ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ. ಸಾರ್ವಜನಿಕ ರೈಲಿನೊಳಗೆ ಇಬ್ಬರು ಚೀನೀ ವ್ಯಕ್ತಿಗಳ ನಡುವೆ ಆರಂಭವಾದ ವಾಗ್ವಾದ ಈ ಹಂತಕ್ಕೆ ತಲುಪಿತ್ತು. ಆದರೆ ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಪರಸ್ಪರ ಹೊಡೆದಾಡಿಕೊಳ್ಳುವ ಅಥವಾ ಕೂಗಾಡುವ ಬದಲು ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಬೆದರಿಸುವ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ಎಂಜಿಲು ಉಗುಳುತ್ತಾರೆ. ವಾದ ಉಲ್ಬಣಗೊಳ್ಳುತ್ತಿದ್ದಂತೆ, ಅವರು ಮತ್ತಷ್ಟು ಹತ್ತಿರಕ್ಕೆ ಹೋಗುತ್ತಾರೆ. ಹತ್ತಿರದಿಂದ ಉಗುಳಲು ಯತ್ನಿಸುತ್ತಿರುವುದು ಚುಂಬಿಸುತ್ತಿರುವಂತೆ ಕಾಣುತ್ತದೆ. ಉದ್ದೇಶಪೂರ್ವಕವಲ್ಲದ ಹಾಸ್ಯಮಯ ಕ್ಷಣವಾಗಿ ಪರಿವರ್ತನೆಗೊಂಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದು ಸಿಂಗಾಪುರ್ ಎಂಆರ್‌ಟಿ ರೈಲಿನಲ್ಲಿ ನಡೆದ ಘಟನೆಯಾಗಿದ್ದು, ಇಬ್ಬರು ಪುರುಷರು ಬಿಸಿಯಾದ ವಾದದಲ್ಲಿ ತೊಡಗಿಕೊಂಡು ಪರಸ್ಪರ ಉಗುಳುವವರೆಗೆ ಹೋಗುತ್ತದೆ. ಇದು ಪರಸ್ಪರ  ಜಗಳವಾಡಲು ಹೊಸ ಮಾರ್ಗ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ ಮತ್ತೊಬ್ಬರು ಅವರಿಗೆ ತಿಳಿದಿರುವ ಒಂದೇ ಒಂದು ಹೋರಾಟ ಅದು ಕರಾಟೆ ಎಂದುಕೊಂಡಿದ್ದೆ ಆದರೆ ಇದೇನಿದು ಎಂದು ಕಮೆಂಟ್ ಮಾಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Thu, 18 December 25