Video: ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಸೋಶಿಯಲ್ ಮೀಡಿಯಾದಲ್ಲಿ ಶ್ವಾನ ಹಾಗೂ ಮಕ್ಕಳ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ವಿಡಿಯೋ ನೋಡಿದ ಮೇಲೆ ಈ ಶ್ವಾನ ಎಷ್ಟು ಬುದ್ದಿವಂತಿಕೆ ಹೊಂದಿದೆ ಎಂದು ತಿಳಿಯುತ್ತದೆ. ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಹೆತ್ತವರು ಕಲಿಸಿ ಕೊಡುತ್ತಿದ್ದಂತೆ ಸಾಕು ನಾಯಿಯು ಮುದ್ದಾಗಿ ರಿಯಾಕ್ಷನ್ ಕೊಟ್ಟಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುಟಾಣಿ (little kids) ಮಕ್ಕಳ ತೊದಲು ನುಡಿಗಳನ್ನು ಕೇಳುವುದೇ ಚಂದ. ಪುಟ್ಟ ಕಂದಮ್ಮಗಳು ಬೆಳೆಯುತ್ತಿದ್ದಂತೆ ಹೆತ್ತವರು ಒಂದೊಂದೇ ಪದಗಳನ್ನು ಹೇಳಲು ಕಲಿಸಿ ಕೊಡುತ್ತಾರೆ. ಈ ವಿಡಿಯೋದಲ್ಲಿ ಹೆತ್ತವರು ಅಮ್ಮ ಹೇಳಲು ಕಲಿಸುತ್ತಿದ್ದಾರೆ. ಕಂದಮ್ಮ ಅಮ್ಮ ಹೇಳಲು ಹರಸಾಹಸ ಪಡುತ್ತಿದ್ದನ್ನು ನೋಡಿದ ಮನೆಯ ಮುದ್ದಿನ ಶ್ವಾನವು (dog) ಕ್ಯೂಟ್ ರಿಯಾಕ್ಷನ್ ನೀಡಿದೆ. ಈ ಶ್ವಾನದ ಬುದ್ಧಿವಂತಿಕ ನೆಟ್ಟಿಗರು ಫಿದಾ ಆಗಿದ್ದಾರೆ.
ಎಕ್ಸಟ್ ಡೈಲಿ (Excitdaily) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಪುಟ್ಟ ಮಗು ಹಾಗೂ ಸಾಕು ನಾಯಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಪೋಷಕರು ತಮ್ಮ ಮಗುವಿಗೆ “ಅಮ್ಮ” ಎಂದು ಹೇಳಲು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚಮಚದಲ್ಲಿ ಆಹಾರ ಹಿಡಿದುಕೊಂಡು ಹೆತ್ತವರು ಮಗುವು ಅಮ್ಮ ಎಂದು ಹೇಳಿದ ತಕ್ಷಣ ತಿನ್ನಿಸಲು ಕಾಯುತ್ತಿದ್ದಾರೆ. ಆದರೆ ಅಲ್ಲೇ ಪಕ್ಕ ಕುಳಿತ ಸಾಕು ನಾಯಿಯೂ ಮೊದಲು ಅಮ್ಮ ಎಂದು ಹೇಳಿದೆ. ಅಷ್ಟೇ ನನಗೆ ಆಹಾರ ಕೊಡಿ ಎನ್ನುವಂತೆ ರಿಯಾಕ್ಷನ್ ಕೊಟ್ಟಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಎಮ್ಮೆಯ ಕರುವಿನ ಹಲ್ಲುಜ್ಜಲು ಪುಟಾಣಿಯ ಪರದಾಟ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ 12 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮಗುವಿಗಿಂತ ಈ ಶ್ವಾನವೇ ಹೆಚ್ಚು ಚುರುಕಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಡಾಂಗೇಶ್ ಬಾಯ್ ಕೊನೆಗೂ ಯಶಸ್ವಿಯಾದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ದೃಶ್ಯ, ಶ್ವಾನ ಎಲ್ಲರ ಗಮನ ಸೆಳೆದಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




