Optical Illusion: ಜಸ್ಟ್ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ
ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಆದರೆ ಈ ಒಗಟಿನ ಚಿತ್ರ ಬಿಡಿಸುವುದರಲ್ಲಿ ಸುಸ್ತೋ ಸುಸ್ತು ಆಗಿರುತ್ತದೆ. ಕೆಲವರು ಇಂತಹ ಒಗಟುಗಳನ್ನು ಸಲೀಸಾಗಿ ಬಿಡಿಸುತ್ತಾರೆ. ಇದೀಗ ವೈರಲ್ ಆಗಿರುವ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಸವಾಲು ಸ್ವೀಕರಿಸಿ ಜಾಣರು ಎನಿಸಿಕೊಳ್ಳಿ.

ಕೆಲವೊಮ್ಮೆ ನೀವು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಹೀಗಾದಾಗ ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳತ್ತ ಗಮನ ಹರಿಸುವುದು ಉತ್ತಮ. ಈ ಚಿತ್ರಗಳಲ್ಲಿ ಕೆಲವೊಂದು ಟ್ರಿಕ್ಕಿ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. ಇಲ್ಲಿ ನಿಮಗಿರುವ ಸವಾಲು ಎಂದರೆ ಆ ವ್ಯತ್ಯಾಸಗಳನ್ನು ಕಂಡುಹಿಡಿಯುವುದು. ಈ ಒಗಟು ಬಿಡಿಸಲು ನಿಮಗೆ 13 ಸೆಕೆಂಡುಗಳು ಮಾತ್ರ ಇವೆ.
ಈ ಚಿತ್ರದಲ್ಲಿ ಏನಿದೆ ಎಂದು ಸೂಕ್ಷ್ಮವಾಗಿ ಗಮನಿಸಿ
ಕಣ್ಣನ್ನು ಮೋಸಗೊಳಿಸಿ, ಮೆದುಳಿಗೆ ಕೆಲಸ ನೀಡುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಒಗಟಿನ ಚಿತ್ರ ಟ್ರಿಕ್ಕಿಯಾಗಿದೆ. ಈ ಬ್ಯಾರೆಲ್‌ನಲ್ಲಿ ಮೂರು ಸೇಬು ಹಣ್ಣುಗಳಂತೆ ಕಾಣುತ್ತದೆ. ಅದರ ಪಕ್ಕದಲ್ಲಿರುವ ಚಿತ್ರವೂ ಒಂದೇ ರೀತಿ ಇದೆ. ಆದರೆ ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. 13 ಸೆಕೆಂಡುಗಳಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸುವ ಚಾಲೆಂಜ್ ನಿಮ್ಮ ಮುಂದಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅವಿತು ಕುಳಿತಿರುವ ಇಲಿಯನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ
ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಭ್ರಮೆಯನ್ನುಂಟು ಮಾಡಬಹುದು. ಮೊದಲ ನೋಟದಲ್ಲೇ ನಿಮ್ಮನ್ನು ಮೋಸಗೊಳಿಸಬಹುದು. ಇಲ್ಲಿ ನೀಡಲಾಗಿರುವ ಎರಡು ಚಿತ್ರಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಳಿದ್ದಷ್ಟು ಸುಲಭವಲ್ಲ. ಒಂದು ವೇಳೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ಚಿಂತಿಸ ಬೇಡಿ. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 am, Fri, 19 December 25




