Video: ಮಗಳು ತನ್ನ ಪ್ರೀತಿ ವಿಷ್ಯ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ತಂದೆ
ಯಾರೇ ಆಗಲಿ, ತಾವು ಪ್ರೀತಿಸುವ ವಿಷ್ಯ ಹೆತ್ತವರಿಗೆ ಹೇಳಲು ಹಿಂದೇಟು ಹಾಕ್ತಾರೆ. ತಂದೆಗೆ ಈ ವಿಷ್ಯ ಗೊತ್ತಾದ್ರೆ ಏನ್ ಹೇಳ್ತಾರೆ ಅನ್ನೋ ಭಯ. ಆದರೆ ಇಲ್ಲೊಬ್ಬ ಮಗಳು ತಂದೆಗೆ ತನ್ನ ಪ್ರೀತಿ ವಿಷಯ ತಿಳಿಸಿದ್ದಾಳೆ. ಮಗಳು ಹೀಗೆನ್ನುತ್ತಿದ್ದಂತೆ ತಂದೆ ಕೊಟ್ಟ ರಿಯಾಕ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪ್ರೀತಿ (love) ಅಂತ ಬಂದಾಗ ಹೆತ್ತವರ ಬಳಿ ಹೇಳಿದ್ರೆ ಏನು ಅಂದುಕೊಳ್ತಾರೆ, ಬೇಡ ಅಂದ್ರೆ ಏನ್ ಮಾಡೋದು ಹೀಗೆ ನಾನಾ ರೀತಿಯ ಪ್ರಶ್ನೆ ಕಾಡುತ್ತದೆ. ಆದರೆ ಕೆಲವರು ಧೈರ್ಯ ಮಾಡಿಕೊಂಡು ಪ್ರೀತಿ ವಿಷ್ಯ ತಂದೆ ತಾಯಿ ಮುಂದೇ ಹೇಳುವುದನ್ನು ನೋಡಬಹುದು. ಆದರೆ ಇಲ್ಲೊಬ್ಬಳು ಮಗಳು ತನ್ನ ತಂದೆ (father) ಮುಂದೆ ತನಗೆ ಬಾಯ್ ಫ್ರೆಂಡ್ ಇರುವುದಾಗಿ ಹೇಳಿದ್ದಾಳೆ. ಮಗಳ ಮಾತು ಕೇಳಿ ಜೋರಾಗಿ ನಕ್ಕು ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
driiiishtiiii) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಗಳು ತಂದೆಯ ಕೈ ಹಿಡಿದುಕೊಂಡು ತನ್ನ ಪ್ರೀತಿ ವಿಷ್ಯ ಹೇಳುತ್ತಿರುವುದನ್ನು ನೋಡಬಹುದು. ತಂದೆ ಕೈ ಹಿಡಿದುಕೊಂಡು ನನಗೆ ಬಾಯ್‌ಫ್ರೆಂಡ್ ಇದ್ದಾನೆ ಪಪ್ಪ ಎಂದು ಹೇಳುತ್ತಾಳೆ. ಆದರೆ ಈ ಯುವತಿಯ ಧ್ವನಿಯಲ್ಲಿ ಭಯ ಹಾಗೂ ದುಃಖ ಎರಡು ಎದ್ದು ಕಾಣುತ್ತಿದೆ. ಆಗ ತಂದೆ ಇರಲಿ ಬಿಡು, ಅದರಲ್ಲೇನಿದೆ, ಎಲ್ಲರೂ ಪ್ರೀತಿ ಮಾಡ್ತಾರೆ, ನಾನು ಮಾಡಿದ್ದೆ, ನಿಮ್ಮಮ್ಮನೂ ಮಾಡಿದ್ರು ಎಂದು ನಗುತ್ತಾ ಹೇಳುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಆ ಬಳಿಕ ಮಗಳು ಹನ್ನೊಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳುತ್ತಿದ್ದಂತೆ ತಂದೆ ನಗುತ್ತಲೇ ಎಲ್ಲವನ್ನೂ ಕೇಳಿಸಿಕೊಂಡಿದ್ದು, ಹುಡುಗನ ಫೋಟೊ ತೋರಿಸು ಎಂದು ಹೇಳಿ ತಂದೆ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ
ಈ ವಿಡಿಯೋ 1.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾದ ಕ್ಷಣ, ಅದ್ಭುತ ಸ್ಟೋರಿ ಎಂದಿದ್ದಾರೆ. ಇನ್ನೊಬ್ಬರು, ಬೆಂಬಲ ನೀಡುವ ಹಾಗೂ ಮುದ್ದಾದ ಕುಟುಂಬ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾವನಾತ್ಮಕ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




