Video: ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ
ಹೆಣ್ಣು ಲಕ್ಷ್ಮಿಯ ಸ್ವರೂಪ. ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸುವ ಕುಟುಂಬವನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ತಂದೆಯ ಮೊಗದಲ್ಲಿ ಹೆಣ್ಣು ಮಗು ಹುಟ್ಟಿತು ಎಂಬ ಖುಷಿಯೂ ಎದ್ದು ಕಾಣುತ್ತಿದೆ. ಈ ವಿಡಿಯೋದಲ್ಲಿ ತಂದೆಯೂ ಹೆಣ್ಣು ಮಗು ಹುಟ್ಟಿದ ಸಂಭ್ರಮದಲ್ಲಿ ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು. ಹೆಣ್ಣು ಮಕ್ಕಳನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು, ಹೀಗೆ ನಾನಾ ರೀತಿಯ ಮಾತುಗಳನ್ನು ಹೇಳುವುದನ್ನು ನೀವು ಕೇಳಿರುತ್ತೀರಿ. ಹೀಗಾಗಿ ಮನೆಗೆ ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲಾ ಖುಷಿಯಿಂದಲೇ ಕುಣಿದು ಸಂಭ್ರಮಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಬ್ಬ ಅಪ್ಪನ (father) ಖುಷಿಯೂ ಎಲ್ಲೇ ಮೀರಿದೆ. ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಯಲ್ಲೇ ತಂದೆಯೂ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಣ್ಣು ಮಗಳಿಗೆ ಅಪ್ಪನಾದೆ ಎನ್ನುವ ತಂದೆಯ ಖುಷಿಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
Positive fan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಸ್ಪತ್ರೆಯ ಚಿತ್ರಣ ಕಾಣಬಹುದು. ನವಜಾತ ಶಿಶುವನ್ನು ಎತ್ತಿಕೊಂಡು ಮಹಿಳೆಯೂ ಖುಷಿಯಿಂದಲೇ ಬರುತ್ತಿರುವುದನ್ನು ನೋಡಬಹುದು. ಆ ಮಹಿಳೆಯ ಸುತ್ತಲಿದ್ದ ಮಹಿಳೆಯರು ಕೂಡ ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಿದ್ದಾರೆ. ಇತ್ತ ತಂದೆಯೂ ಹೆಣ್ಣು ಮಗು ಹುಟ್ಟಿತು ಎನ್ನುವ ಖುಷಿಗೆ ಆಸ್ಪತ್ರೆಯಲ್ಲೇ ಕುಣಿದಾಡಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
Winner Of The Trend ❤️🔥 pic.twitter.com/7kvPDO03IM
— POSITIVE FAN (@imashishsrrk) December 17, 2025
ಇದನ್ನೂ ಓದಿ: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ
ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂದು ನಾನು ನೋಡಿದ ಅತ್ಯುತ್ತಮ ವಿಷಯ ಎಂದಿದ್ದಾರೆ. ಮತ್ತೊಬ್ಬರು, ಜೀವನದಲ್ಲಿ ಗೆದ್ದಂತಹ ಅನುಭವ, ಅವರ ನಗುವೇ ಎಲ್ಲಾ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಮಗಳ ಆಗಮನವನ್ನು ಎಲ್ಲರಿಗೂ ಸಂಭ್ರನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




