Optical Illusion: ಈ ಚಿತ್ರದಲ್ಲಿ ಅವಿತು ಕುಳಿತಿರುವ ಇಲಿಯನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ
ಒಗಟಿನ ಚಿತ್ರಗಳನ್ನು ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ಮೆದುಳಿಗೆ ಕೆಲಸ ಕೊಡುತ್ತದೆ. ಎಷ್ಟೇ ಯೋಚನೆ ಮಾಡಿದರೂ ಉತ್ತರ ಹೊಳೆಯುವುದೇ ಇಲ್ಲ. ಅದರಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ವಸ್ತುವನ್ನು ಹುಡುಕುವುದು ಮತ್ತೊಂದು ರೀತಿಯ ಸವಾಲು. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಸಿಂಹದ ಮುಖದ ನಡುವೆ ಇಲಿಯೊಂದು ಅಡಗಿ ಕುಳಿತಿದೆ. ಈ ಟ್ರಿಕ್ಕಿ ಒಗಟು ಬಿಡಿಸುವ ಸವಾಲು ನಿಮ್ಮ ಮುಂದೆ ಇದೆ.

ಆಪ್ಟಿಕಲ್ ಇಲ್ಯೂಷನ್ (optical illusion) ಅಥವಾ ಒಗಟನ್ನು ಬಿಡಿಸುವ ಮೋಜಿನ ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತದೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲ, ಬುದ್ಧಿವಂತಿಕೆಗೂ ಸವಾಲು ಎಸಗುತ್ತದೆ. ಹೌದು, ನೋಡಿದಾಗ ಸುಲಭದಾಯಕ ಎಂದೆನಿಸಿದರೂ ಇಂತಹ ಒಗಟನ್ನು ಬಿಡಿಸುವುದು ಅಷ್ಟೇ ಕಷ್ಟಕರ. ಈ ಇಲ್ಯೂಷನ್ ಚಿತ್ರವನ್ನು ಬಿಡಿಸುವುದು ಟ್ರಿಕ್ಕಿಯಾಗಿದ್ದು, ಸಿಂಹದ ಮುಖದ ನಡುವೆ ಇಲಿಯೂ ಅಡಗಿ ಕುಳಿತಿದೆ. ಈ ಒಗಟು ಬಿಡಿಸಲು ಐದು ನಿಮಿಷ ಸಮಯಾವಕಾಶವನ್ನು ನಿಮಗೆ ನೀಡಲಾಗಿದೆ.
ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಮೆದುಳಿನ ಕಸರತ್ತು ಆಟಗಳನ್ನು ಬಿಡಿಸುವುದು ಜೀವನದ ಸಮಸ್ಯೆಗಳ ಬಗ್ಗೆ ಯೋಚಿಸಲು ಸಹಾಯ ಮಾಡುತ್ತದೆ. ನಿಮ್ಮ ಕಣ್ಣನ್ನು ಮೋಸಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಸಿಂಹದ ಮುಖವು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿರುವ ಸವಾಲು ಎಂದರೆ ಇಲಿ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 5 ಸೆಕೆಂಡುಗಳಲ್ಲಿ ಇಲಿಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯ ಅದ್ಭುತ ಎಂದರ್ಥ.
ಇದನ್ನೂ ಓದಿ:ಈ ಚಿತ್ರದಲ್ಲಿದೆ ಕಲರ್ ಫುಲ್ ಕಪ್, 9 ಸೆಕೆಂಡುಗಳಲ್ಲಿ ಗುರುತಿಸಿದ್ರೆ ನೀವು ಬುದ್ಧಿವಂತರು
ಇಲಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?
ಎಷ್ಟೆ ತಲೆಕೆಡಿಸಿಕೊಂಡರೂ, ಸೂಕ್ಷ್ಮವಾಗಿ ಗಮನಿಸಿದರೂ ಇಲಿಯೂ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಸಿಂಹದ ಮುಖದ ನಡುವೆ ಅಡಗಿ ಕುಳಿತಿರುವ ಇಲಿಯನ್ನು ಕಂಡುಹಿಡಿಯುವುದು ಬಹುತೇಕರಿಗೆ ಕಷ್ಟಕರವಾಗಿದೆ. ಈ ಚಿತ್ರದಲ್ಲಿ ಇಲಿ ಎಲ್ಲಿದೆ ಎಂದು ನಾವೇ ನಿಮಗೆ ಹೇಳುತ್ತೇವೆ. ನಿಮ್ಮ ಮೊಬೈಲ್ ಅನ್ನು ಉಲ್ಟಾ ಮಾಡಿ ಈ ಚಿತ್ರವನ್ನು ನೋಡಿ ನಿಮ್ಮ ಕಣ್ಣಿಗೆ ಇಲಿಯೂ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




