ಹೆಣ್ಣಿಗಾಗಿ ನಡೆಯಿತು ಜಗಳ, ಕೊಲೆ, ಸ್ನೇಹಿತನನ್ನು ಕೊಂದು ದೇಹ ಕತ್ತರಿಸಿ ಎಸೆದ ಯುವಕ
ಆರು ದಿನಗಳಿಂದ ನಾಪತ್ತೆಯಾಗಿದ್ದ 20 ವರ್ಷದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿತ್ತು. ಆ ಜಗಳ ತಾರಕಕ್ಕೇರಿ ರಮೇಶ್ ಮಹೇಶ್ವರಿ ಎಂಬುವವರನ್ನು ಸ್ನೇಹಿತ ಕಿಶೋರ್ ಕೊಲೆ ಮಾಡಿದ್ದಷ್ಟೇ ಅ್ಲದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 2 ರಂದು ನಖತ್ರಾಣದ ಮುರು ಗ್ರಾಮದಿಂದ ರಮೇಶ್ ಮಹೇಶ್ವರಿ ನಾಪತ್ತೆಯಾಗಿದ್ದರು.ಇದರಿಂದಾಗಿ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು.ತನಿಖೆ ಮುಂದುವರೆದಂತೆ, ಅವರ ಸ್ನೇಹಿತ ಕಿಶೋರ್ ಮೇಲೆ ಅನುಮಾನ ಬಂದಿತ್ತು.

ಗುಜರಾತ್, ಡಿಸೆಂಬರ್ 10: ಆರು ದಿನಗಳಿಂದ ನಾಪತ್ತೆಯಾಗಿದ್ದ 20 ವರ್ಷದ ಯುವಕ ಶವ(Dead Body)ವಾಗಿ ಪತ್ತೆಯಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿತ್ತು. ಆ ಜಗಳ ತಾರಕಕ್ಕೇರಿ ರಮೇಶ್ ಮಹೇಶ್ವರಿ ಎಂಬುವವರನ್ನು ಸ್ನೇಹಿತ ಕಿಶೋರ್ ಕೊಲೆ ಮಾಡಿದ್ದಷ್ಟೇ ಅ್ಲದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 2 ರಂದು ನಖತ್ರಾಣದ ಮುರು ಗ್ರಾಮದಿಂದ ರಮೇಶ್ ಮಹೇಶ್ವರಿ ನಾಪತ್ತೆಯಾಗಿದ್ದರು.ಇದರಿಂದಾಗಿ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು.ತನಿಖೆ ಮುಂದುವರೆದಂತೆ, ಅವರ ಸ್ನೇಹಿತ ಕಿಶೋರ್ ಮೇಲೆ ಅನುಮಾನ ಬಂದಿತ್ತು.
ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನೂ ಒಳಗೊಂಡಿದ್ದು, ಕಿಶೋರ್, ತಮ್ಮಿಬ್ಬರಿಗೂ ಪರಿಚಿತಳಾದ ಮಹಿಳೆಯ ವಿಷಯದಲ್ಲಿ ನಡೆದ ವಾಗ್ವಾದದ ನಂತರ ರಮೇಶ್ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಕಿಶೋರ್ ಆ ಮಹಿಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಿ, ತನ್ನೊಂದಿಗೆ ಸಂಬಂಧ ಹೊಂದುವಂತೆ ಒತ್ತಡ ಹೇರಿದ್ದ. ಆಕೆ ರಮೇಶ್‌ಗೆ ಮಾಹಿತಿ ನೀಡಿದ್ದರಿಂದ ಇಬ್ಬರು ಸ್ನೇಹಿತರ ನಡುವೆ ಘರ್ಷಣೆ ಉಂಟಾಗಿತ್ತು. ಇದರಿಂದ ಬೇಸತ್ತ ಕಿಶೋರ್ ಆತನನ್ನು ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.
ಮತ್ತಷ್ಟು ಓದಿ: ಹಾಸನದಲ್ಲಿ ಮೆಕ್ಯಾನಿಕ್ ಹತ್ಯೆ: ಬಳಿಕ ಶವದೊಂದಿಗೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕರು
ವಿಚಾರಣೆಯ ನಂತರ, ಕಿಶೋರ್ ರಮೇಶ್‌ನನ್ನು ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಕೊಲೆ ಮಾಡಿ, ನಂತರ ಚಾಕುವಿನಿಂದ ತಲೆ, ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದೇಹದ ಭಾಗಗಳನ್ನು ಕೊಳವೆ ಬಾವಿಗೆ ಎಸೆದು, ಉಳಿದ ದೇಹವನ್ನು ಹತ್ತಿರದಲ್ಲೇ ಹೂಳಲಾಗಿದೆ.
ತಪ್ಪೊಪ್ಪಿಗೆಯ ಮೇರೆಗೆ ಕಾರ್ಯಾಚರಣೆ ನಡೆಸಿದ ನಖತ್ರಾಣ ಪೊಲೀಸರು ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ, ಹೂತು ಹಾಕಲಾದ ಶವವನ್ನು ಹೊರತೆಗೆದು, ಕೊಳವೆ ಬಾವಿಯಿಂದ ಕತ್ತರಿಸಿದ ಭಾಗಗಳನ್ನು ಹೊರತೆಗೆದರು. ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




