AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ-ಬೆಳ್ಳುಳ್ಳಿ ವಿವಾದದಲ್ಲಿ ಕೊನೆಗೊಂಡ 11 ವರ್ಷದ ದಾಂಪತ್ಯ ಜೀವನ

ಗುಜರಾತ್‌ನ ಅಹಮದಾಬಾದ್​ನಲ್ಲಿ ವಿಚಿತ್ರ ವಿಚ್ಛೇದನ ಪ್ರಕರಣವೊಂದು ಬೆಳಕಿಗೆ ಬಂದಿದೆ, ವಿಚ್ಛೇದನಗಳು ಸಾಮಾನ್ಯವಾಗಿ ದೈಹಿಕ ಹಿಂಸೆ, ವಿವಾಹೇತರ ಸಂಬಂಧಗಳು ಅಥವಾ ಕೌಟುಂಬಿಕ ಕಲಹಗಳಿಂದ ಉಂಟಾಗುತ್ತವೆ. ಆದರೆ, ಅಹಮದಾಬಾದ್‌ನ ದಂಪತಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದಾಗಿ ವಿಚ್ಛೇದನ ಪಡೆದಿದ್ದಾರೆ.ಪತ್ನಿ ಕೂಡಲೇ ಮಗುವಿನೊಂದಿಗೆ ಮನೆಬಿಟ್ಟು ಹೊರಟು ಹೋಗಿದ್ದಳು, ಪತಿ ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವು ಗುಜರಾತ್ ಹೈಕೋರ್ಟ್‌ ಮಟ್ಟಿಲೇರಿತ್ತು. ಅಲ್ಲಿ ನ್ಯಾಯಾಲಯವು ವಿಚ್ಛೇದನವನ್ನು ಪ್ರಶ್ನಿಸಿ ಪತ್ನಿಯ ಮೇಲ್ಮನವಿಯನ್ನು ವಜಾಗೊಳಿಸಿತು.

ಈರುಳ್ಳಿ-ಬೆಳ್ಳುಳ್ಳಿ ವಿವಾದದಲ್ಲಿ ಕೊನೆಗೊಂಡ 11 ವರ್ಷದ ದಾಂಪತ್ಯ ಜೀವನ
ಈರುಳ್ಳಿ, ಬೆಳ್ಳುಳ್ಳಿ
ನಯನಾ ರಾಜೀವ್
|

Updated on: Dec 10, 2025 | 1:00 PM

Share

ಅಹಮದಾಬಾದ್, ಡಿಸೆಂಬರ್ 10: ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವ ಬಗ್ಗೆ ದಂಪತಿ ನಡುವೆ ಉಂಟಾದ ಜಗಳ ವಿಚ್ಛೇದನ(Divorce)ದೊಂದಿಗೆ ಅಂತ್ಯಗೊಂಡಿದೆ. ವಾದ ಎಷ್ಟು ತೀವ್ರವಾಗಿತ್ತೆಂದರೆ 11 ವರ್ಷದ ದಾಂಪತ್ಯ ಜೀವನವೇ ಕೊನೆಗೊಂಡಿದೆ. ಈ ವಿಚಿತ್ರ ಘಟನೆ ಅಹಮದಾಬಾದಿನಲ್ಲಿ ನಡೆದಿದೆ. ಪತ್ನಿ ಕೂಡಲೇ ಮಗುವಿನೊಂದಿಗೆ ಮನೆಬಿಟ್ಟು ಹೊರಟು ಹೋಗಿದ್ದಳು, ಪತಿ ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವು ಗುಜರಾತ್ ಹೈಕೋರ್ಟ್‌ ಮಟ್ಟಿಲೇರಿತ್ತು. ಅಲ್ಲಿ ನ್ಯಾಯಾಲಯವು ವಿಚ್ಛೇದನವನ್ನು ಪ್ರಶ್ನಿಸಿ ಪತ್ನಿಯ ಮೇಲ್ಮನವಿಯನ್ನು ವಜಾಗೊಳಿಸಿತು. ಈ ಜೋಡಿ 2002ರಲ್ಲಿ ವಿವಾಹವಾಗಿದ್ದರು. ಪತ್ನಿ ಸ್ವಾಮಿನಾರಾಯಣ ಪಂಥದ ಅನುಯಾಯಿಯಾಗಿದ್ದಳು.

ಹಾಗಾಗಿ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಬಿಡುತ್ತಿರಲಿಲ್ಲ. ಆದರೆ ಪತಿ ಹಾಗೂ ಅತ್ತೆಗೆ ಇದು ಇಷ್ಟವಾಗಲಿಲ್ಲ. ಕೊನೆಗೆ ಆಹಾರದ ಆಯ್ಕೆ ದಾಂಪತ್ಯಕ್ಕೆ ವಿಪತ್ತಾಗಿ ಪರಿಣಮಿಸಿತು. ಜಗಳ ಹೆಚ್ಚಾಗಿ, ಸಂಬಂಧ ಹದಗೆಟ್ಟಿತ್ತು. ಸ್ವಾಮಿನಾರಾಯಣ ಪಂಥದ ನಿಯಮಗಳನ್ನು ಪಾಲಿಸುತ್ತಿದ್ದ ಪತ್ನಿ ನಿಯಮಿತವಾಗಿ ದೇವಸ್ಥಾನಗಳಲ್ಲಿ ಪ್ರಾರ್ಥನೆಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಹಾಜರಾಗುತ್ತಿದ್ದರು.

ಆಕೆಯ ಪತಿ ಮತ್ತು ಅತ್ತೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಲು ಇಷ್ಟವಿರಲಿಲ್ಲ, ಪರಿಣಾಮವಾಗಿ ಮನೆಯಲ್ಲಿ ಪ್ರತ್ಯೇಕ ಅಡುಗೆ ವ್ಯವಸ್ಥೆ ಮಾಡಲಾಗಿತ್ತು. 2013 ರಲ್ಲಿ, ಪತಿ ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು, ಆಹಾರದ ವಿಷಯದಲ್ಲಿ ತನ್ನ ಹೆಂಡತಿ ತನ್ನ ಬಳಿ ಕ್ರೂರವಾಗಿ ವರ್ತಿಸಿ ನಂತರ ತನ್ನನ್ನು ಬಿಟ್ಟುಹೋಗಿದ್ದಾಳೆ ಎಂದು ಆರೋಪಿಸಿದ್ದರು.

ಮತ್ತಷ್ಟು ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?

2024 ರಲ್ಲಿ, ಕೌಟುಂಬಿಕ ನ್ಯಾಯಾಲಯವು ಅವರಿಗೆ ವಿಚ್ಛೇದನವನ್ನು ನೀಡಿ, ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿತು. ದಂಪತಿ ಹೈಕೋರ್ಟ್ ಮೆಟ್ಟಿಲೇರಿದರು.

ಪತ್ನಿಯ ಧಾರ್ಮಿಕ ನಂಬಿಕೆಗಳಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಪ್ಪಿಸುವ ಅಭ್ಯಾಸವು ಜಗಳಗಳಿಗೆ ಕಾರಣವಾಗುತ್ತಿದೆ ಎಂದು ಪತಿ ಕುಟುಂಬ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದು, ಆಕೆ ಬದಲಾಗಲು ಸಿದ್ಧಳಿಲ್ಲ ಎಂದು ಮಹಿಳೆ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದರು.ಈ ಕಾನೂನು ಪ್ರಕ್ರಿಯೆಯು ಸುಮಾರು 12 ವರ್ಷಗಳ ಕಾಲ ನಡೆಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ