Photo Puzzle: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ 8ರ ಮಧ್ಯೆ ಅಡಗಿರುವ 3ರನ್ನು ಪತ್ತೆ ಹಚ್ಚಲು ಸಾಧ್ಯ

ಚಿತ್ರ ಸಂಪೂರ್ಣವಾಗಿ ಸಂಖ್ಯೆ 8ರಿಂದ ತುಂಬಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು ಸಂಖ್ಯೆ 3 ಅಡಗಿದೆ. ಎಷ್ಟೇ ಹುಡುಕಿದರೂ ನಿಮಗೆ ಸಂಖ್ಯೆ 3ರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.

Photo Puzzle: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ 8ರ ಮಧ್ಯೆ ಅಡಗಿರುವ 3ರನ್ನು ಪತ್ತೆ ಹಚ್ಚಲು ಸಾಧ್ಯ

Updated on: Sep 24, 2024 | 6:05 PM

ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಆಪ್ಟಿಕಲ್ ಇಲ್ಯೂಷನ್​ಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿರುತ್ತವೆ. ಇದೀಗ ಅಂತದ್ದೇ ಫೋಟೋ ಒಂದು ವೈರಲ್​​ ಆಗಿದ್ದು, ಇದರಲ್ಲಿ ನೀವು 8ರ ಮಧ್ಯೆ ಅಡಗಿರುವ ಸಂಖ್ಯೆ 3ರನ್ನು ಪತ್ತೆ ಹಚ್ಚಬೇಕಿದೆ.

ಮೇಲಿನ ಚಿತ್ರ ಸಂಪೂರ್ಣವಾಗಿ ಸಂಖ್ಯೆ 8ರಿಂದ ತುಂಬಿರುವುದನ್ನು ಕಾಣಬಹುದು. ಆದರೆ ಈ ಚಿತ್ರದಲ್ಲಿ ಒಂದೇ ಒಂದು ಸಂಖ್ಯೆ 3 ಅಡಗಿದೆ. ಇದನ್ನು ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಹದ್ದಿನ ಕಣ್ಣು ನಿಮ್ಮದಾಗಿದ್ದಾರೆ ಕೇವಲ ಕೆಲವೇ ಕೆಲವು ಸೆಕೆಂಡುಗಳಲ್ಲಿ ನೀವು ಉತ್ತರವನ್ನು ಕಂಡು ಹುಡುಕುವಿರಿ.

ಹುಡುಕಲು ಆರಂಭಿಸಿ. ಕೆಲ ಸೆಕೆಂಡುಗಳ ವರೆಗೆ ಚಿತ್ರವನ್ನು ದಿಟ್ಟಿಸಿ ನೋಡಿ. ಆದರೆ ನೀವು ಎಷ್ಟೇ ಹುಡುಕಿದರೂ ನಿಮಗೆ ಸಂಖ್ಯೆ 3ರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಯಾಕೆಂದರೆ ಈ ಕೆಳಗೆ ನೀಡಿರುವ ಚಿತ್ರದಲ್ಲಿ 3 ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ. ಈ ಕೆಳಗಿನ ಚಿತ್ರದಲ್ಲಿ ಉತ್ತರ ಕಂಡುಕೊಳ್ಳಿ.

ಉತ್ತರ ಇಲ್ಲಿದೆ:

ಇದನ್ನೂ ಓದಿ: Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮೂಲಕ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us