Optical Illusion: ‘V’ ಮಧ್ಯೆ ಅಡಗಿರುವ ‘W’ ವನ್ನು 5 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ?

ಈ ವೈರಲ್ ಆಪ್ಟಿಕಲ್ ಇಲ್ಯೂಷನ್ ನಿಮ್ಮ ಅರಿವನ್ನು ಪರೀಕ್ಷಿಸುತ್ತದೆ! ಅನೇಕ 'V' ಗಳ ನಡುವೆ ಮರೆಮಾಡಲಾಗಿರುವ 'W' ಅನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಪ್ರಯತ್ನಿಸಿ. ಸಮಯ ಮಿತಿಯೊಳಗೆ ಪತ್ತೆಹಚ್ಚಲು ಸಾಧ್ಯವಾಗದಿದ್ದರೂ ಚಿಂತಿಸಬೇಡಿ; ಉತ್ತರವನ್ನು ಲೇಖನದ ಅಂತ್ಯದಲ್ಲಿ ನೀಡಲಾಗಿದೆ.

Optical Illusion: V ಮಧ್ಯೆ ಅಡಗಿರುವ W ವನ್ನು 5 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ?
Optical Illusion

Updated on: Nov 21, 2024 | 10:47 AM

ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಆಪ್ಟಿಕಲ್‌ ಇಲ್ಯೂಷನ್‌ ಅಥವಾ ಒಗಟಿನ ಆಟಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಇದೀಗ ಇಂತದ್ದೇ ಮತ್ತೊಂದು ಚಿತ್ರ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ ಇದರಲ್ಲಿ 5ಸೆಕೆಂಡುಗಳಲ್ಲಿ ಉತ್ತರ ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ.

ಮೇಲೆ ನೀಡಲಾದ ಚಿತ್ರವನ್ನು ಸರಿಯಾಗಿ ಗಮನಿಸಿ. ಚಿತ್ರದಲ್ಲಿ ಸಾಕಷ್ಟು ‘V’ ಇರುವುದನ್ನು ಕಾಣಬಹುದು. ಆದರೆ ಅದರ ಮಧ್ಯೆ ಒಂದೇ ಒಂದು ‘W’ ಅಡಗಿದೆ. ನೀವು ನಿಮ್ಮ ಕಣ್ಣು ಮತ್ತು ಗಮನವನ್ನು ಕೇಂದ್ರೀಕರಿಸಿ ಈ ಒಗಟಿನ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ‘V’ ಮಧ್ಯೆ ಅಡಗಿರುವ ‘W’ ವನ್ನು ಪತ್ತೆಹಚ್ಚಲು ಸಾಧ್ಯ.

ಈ ಸವಾಲು ನಿಮಗೆ ಕಷ್ಟಕರವಾಗಿದ್ದರೆ ಮತ್ತು ಸಮಯ ಮಿತಿಯೊಳಗೆ ಗುರುತಿಸಲು ಸಾಧ್ಯವಾಗದಿದ್ದರೆ, ಚಿಂತಿಸಬೇಡಿ. ಯಾಕೆಂದರೆ ಈ ಕೆಳಗೆ ನೀಡಲಾದ ಚಿತ್ರದಲ್ಲಿ ‘V’ ಮಧ್ಯೆ ಅಡಗಿರುವ ‘W’ ಎಲ್ಲಿದೆ ಎಂದು ಗುರುತಿಸಲಾಗಿದೆ.

ಉತ್ತರ ಇಲ್ಲಿದೆ:

ಇದನ್ನೂ ಓದಿ: ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವೇ?

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಟವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಉತ್ತರವನ್ನು ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಹೇಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us