Viral : ಹಳೆಯ ವಸ್ತುಗಳನ್ನು ಅನೇಕರು ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳುವ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಹಳೆಯ ಪಗಡೆ, ಪಾತ್ರೆ, ನಾಣ್ಯ, ಅಂಚೆಚೀಟಿ, ಒಡವೆ ಅಥವಾ ಸೆಲೆಬ್ರಿಟಿಗಳು ಉಪಯೋಗಿಸಿದ ವಸ್ತುಗಳು, ಧರಿಸಿದ ವಸ್ತ್ರಗಳು ಹೀಗೆ ಏನನ್ನೂ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಗಮನಿಸಿ, ‘ಜೂಲಿಯನ್ಸ್ ಆಕ್ಷನ್’ ತನ್ನ ವೆಬ್ಸೈಟ್ನಲ್ಲಿ ಸ್ಟೀವ್ ಜಾಬ್ ಅವರ ಹಳೆಯ ಸ್ಯಾಂಡಲ್ಸ್ ಅನ್ನು ಹರಾಜಿಗಿಟ್ಟಿದೆ. ಈ ಪೋಸ್ಟ್ ಅನ್ನು ನೆಟ್ಟಿಗರು ಕುತೂಹಲದಿಂದ ಓದುತ್ತಿದ್ದಾರೆ.
ಬಿರ್ಕನ್ಸ್ಟಾಕ್ ಅರಿಝೋನಾ ಕಂಪೆನಿಯ ಸ್ಯಾಂಡಲ್ಗಳು 1970-1980ರ ಸಮಯದಲ್ಲಿ ಚಾಲ್ತಿಯಲ್ಲಿದ್ದವು. ಸ್ಟೀವ್ ಈ ಕಂದುಬಣ್ಣದ ಚರ್ಮದ ಸ್ಯಾಂಡಲ್ಸ್ ಅನ್ನು ಧರಿಸುತ್ತಿದ್ದರು. ಇಷ್ಟು ದಿನ ಸ್ಟೀವ್ ಜಾಬ್ನ ಹೌಸ್ ಮ್ಯಾನೇಜರ್ ಮಾರ್ಕ್ ಶೆಫ್ ಅವರ ಬಳಿ ಈ ಸ್ಯಾಂಡಲ್ಸ್ ಇದ್ದವು. ಇದೀಗ ಇವುಗಳನ್ನು ಹರಾಜಿಗಿಟ್ಟಿದ್ದು, 48,32,889 ದಿಂದ 64,43,852 ತನಕ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಜ್ಯೂಲಿಯನ್ಸ್ ಆಕ್ಷನ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಜೂಲಿಯನ್ ಆಕ್ಷನ್ ಈ ಸ್ಯಾಂಡಲ್ಸ್ನ್ನು ಹರಾಜಿಗೆ ಇಡುವ ಮೊದಲು 2017ರಲ್ಲಿ ಇಟಲಿಯ ಮಿಲಾನೋದ ಅನೇಕ ಹರಾಜು ಪ್ರದರ್ಶನಗಳಲ್ಲಿ ಇವು ಕಾಣಿಸಿಕೊಂಡಿದ್ದವು. ಅಲ್ಲದೆ 2017ರಲ್ಲಿ ಜರ್ಮನಿ, ನ್ಯೂಯಾರ್ಕ್‌ನ ಸೋಹೋದ ಬಿರ್ಕನ್ಸ್ಟಾಕ್ನ ಸ್ಟೋರ್ಸ್ನಲ್ಲಿ, ಕೋಲ್ನ ಐಎಂಎಂನಲ್ಲಿ, ಜರ್ಮನಿಯ ಕಲೋನ್‌ನ ಪೀಠೋಪಕರಣ ಮೇಳದಲ್ಲಿ, 2018 ರಲ್ಲಿ ಬರ್ಲಿನ್ನಲ್ಲಿ ನಡೆದ ಡೈ ಝೀತ್ ಮ್ಯಾಗಝೀನ್ನ ಝೀಟ್ ಮೇಳದಲ್ಲಿ ಮತ್ತು ಇತ್ತೀಚೆಗೆ ಸ್ಟಟ್ಗಾರ್ಟ್ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲಿ ಹೀಗೆ ಎಲ್ಲ ಕಡೆ ಪ್ರದರ್ಶನಗೊಂಡು ಇದೀಗ ಈ ವೆಬ್ಸೈಟಿನಲ್ಲಿ ಕಾಣಿಸಿಕೊಂಡಿವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:29 pm, Sat, 12 November 22