Viral Video : ಭಜ್ಜಿ! ಯಾರಿಗೂ ಎಂಥ ಸಮಯದಲ್ಲಿಯೂ ಬಾಯಲ್ಲಿ ನೀರೂರುತ್ತದೆ. ಗರಿಗರಿಯಾದ ಈರುಳ್ಳಿ ಭಜ್ಜಿ, ಮೆತ್ತಗಿನ ಬಾಳೆಕಾಯಿ, ಆಲೂ, ಹೀರೇಕಾಯಿ ಭಜ್ಜಿ. ಇನ್ನು ಮೆಣಸಿನಕಾಯಿ ಭಜ್ಜಿಯನ್ನು ಹೆಸರಿಸಲೇಬೇಕೆ? ಭಜ್ಜಿಪ್ರಿಯರಾದ ನಿಮಗೆ ಬಗೆಬಗೆಯ ಭಜ್ಜಿ, ಪಕೋಡಾಗಳನ್ನು ಸವಿಯುವ ಕುತೂಹಲ ಯಾವ ಊರು, ದೇಶಕ್ಕೆ ಹೋದರೂ ಬಿಡಲು ಸಾಧ್ಯವೇ ಇಲ್ಲ. ಹೀಗಿರುವಾಗ ಭಜ್ಜಿ ಹಿಟ್ಟಿನೊಳಗೆ ಓರಿಯೋ ಬಿಸ್ಕಿಟ್ ಹಾಕಿ ಕರಿದ ಭಜ್ಜಿ ನಿಮ್ಮೆದುರಿಗಿಟ್ಟರೆ ಏನು ಮಾಡುವಿರಿ? ವಿಡಿಯೋ ನೋಡಿ ಹೇಳಿ.
ಬ್ಲಾಗರ್ ಆಶಿಶ್ ಅಗರವಾಲ್ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್ 24ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ ಪ್ರಯತ್ನಿಸುತ್ತೀರಾ? ಏಪ್ರಿಲ್ 24 ರಂದು ಹಂಚಿಕೊಂಡಾಗಿನಿಂದ, ವೀಡಿಯೊವನ್ನು ಈಗಾಗಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ, ಈ ಭೂಮಿಯನ್ನೇ ಬಿಟ್ಟು ಹೋಗಬೇಕು ಎನ್ನಿಸುತ್ತಿದೆ ಎಂದಿದ್ಧಾರೆ.
ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು!
ಓರಿಯೋ ಪ್ರಿಯರಿಗೆ ಮತ್ತು ಭಜ್ಜಿ ಪ್ರಿಯರಿಗೆ ಏಕಕಾಲಕ್ಕೆ ಇದು ದಂಗುಬಡಿಸಿರಲು ಸಾಕು ಎಂದು ಒಬ್ಬರು ಹೇಳಿದ್ದಾರೆ. ಅಣ್ಣಾ ಯಾಕೆ ಚೀಝ್ ಸಿಗಲಿಲ್ಲವಾ ಇದರ ಮಧ್ಯೆ ತುರುಕುವುದಕ್ಕೆ ಎಂದು ಮತ್ತೊಬ್ಬರು ಕೇಳಿದ್ದಾರೆ. ರೀಲ್ಸ್ಗಾಗಿ ಹೀಗೆಲ್ಲ ಮಾಡಬೇಡಿರೋ ಎಂದು ಅನೇಕರು ಗೋಗರೆದಿದ್ದಾರೆ. ಪ್ರಯೋಗದ ನೆಪದಲ್ಲಿ ನೀವು ಹೀಗೆ ಯಾಕೆ ಸ್ವಾದವನ್ನು ಕೆಡಿಸುತ್ತೀರಿ ಎಂದು ಅನೇಕರು ಬೈದಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:24 am, Mon, 15 May 23