Viral: ರಾಷ್ಟ್ರಗೀತೆ ಕೇಳುತ್ತಿದ್ದಂತೆ ತನ್ನ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಎದ್ದು ನಿಂತು ಗೌರವಿಸಿದ ಪೈಂಟರ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 5:06 PM

ನಮ್ಮ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಲ್ಲುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದ್ರೆ ಇಲ್ಲೊಂದು ಬೇಸರದ ಸಂಗತಿಯೊಂದು ನಡೆದಿದ್ದು, ರಾಷ್ಟ್ರಗೀತೆ ಪ್ರಸಾರವಾದಾಗ ತನ್ನ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿ ಎದ್ದು ನಿಂತ ಪೈಂಟರ್‌ ಒಬ್ಬರನ್ನು ನೋಡಿ ಒಂದಷ್ಟು ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಆ ವ್ಯಕ್ತಿಗೆ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ನಮ್ಮ ರಾಷ್ಟ್ರ ಗೀತೆ ಜನ ಗಣ ಮನ ಪ್ರಸಾರವಾದಾಗ ಎದ್ದು ನಿಂತು ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಶಾಲಾ-ಕಾಲೇಜುಗಳಲ್ಲಾಗಿರಲಿ ಅಥವಾ ಎಲ್ಲಿಯಾದರೂ ಸಹ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಅಂತಾನೇ ಹೇಳಬಹುದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಈ ಬಗ್ಗೆ ಶಿಕ್ಷಕರು ತಿಳಿಸಿಕೊಡುತ್ತಾರೆ. ಆದ್ರೆ ಇಲ್ಲೊಂದು ಬೇಸರದ ಸಂಗತಿ ನಡೆದಿದ್ದು, ಪ್ರಬುದ್ಧರಂತೆ ನಡೆದುಕೊಳ್ಳಬೇಕಾದ ವಿದ್ಯಾರ್ಥಿಗಳೇ ರಾಷ್ಟ್ರಗೀತೆ ಪ್ರಸಾರವಾದಾಗ ತನ್ನ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸಿ ಎದ್ದು ನಿಂತ ಪೈಂಟರ್‌ ಒಬ್ಬರನ್ನು ನೋಡಿ ಗೇಲಿ ಮಾಡಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇದನ್ನೆಲ್ಲಾ ನೋಡಿದಾಗ ವಿದ್ಯಾವಂತರಿಗೆಯೇ ಮೂಲಭೂತ ಶಿಕ್ಷಣದ ಕೊರತೆಯಿರುವಂತೆ ಎದ್ದು ಕಾಣುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಈ ಕುರಿತ ವಿಡಿಯೋವನ್ನು cyberdddd ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಲೇಜಿನಲ್ಲಿ ರಾಷ್ಟ್ರಗೀತೆ ಪ್ರಸಾರವಾಗಬೇಕಾದರೆ ವಿದ್ಯಾರ್ಥಿಗಳು ಅತ್ತಿಂದಿತ್ತ ಓಡಾಡಿಕೊಂಡು, ಮಾತನಾಡುತ್ತಾ ನಿಂತಿರಬೇಕಾದರೆ, ಅಲ್ಲೇ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಪೈಂಟರ್‌ ಒಬ್ಬರು ತನ್ನ ಕೆಲಸವನ್ನು ಪಕ್ಕಕ್ಕಿಟ್ಟು ಎದ್ದು ನಿಲ್ಲುವ ಮೂಲಕ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ದೃಶ್ಯವನ್ನು ಕಾಣಬಹುದು. ಆದ್ರೆ ಆ ವ್ಯಕ್ತಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ದೃಶ್ಯವನ್ನು ಕಂಡು ಇತ್ತಬದಿಯಲ್ಲಿದ್ದ ಒಂದಷ್ಟು ನಾಚಿಕೆಗೇಡಿನ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡುತ್ತಾ ನಕ್ಕಿದ್ದಾರೆ.

ಇದನ್ನೂ ಓದಿ: ಮಗನ ಬರ್ತ್‌ ಡೇ ಸೆಲೆಬ್ರೇಷನ್‌ ವಿಡಿಯೋ ರೆಕಾರ್ಡಿಂಗ್‌ ಮಾಡುತ್ತಿದ್ದಾಗ ಮಾತನಾಡಿದಳೆಂದು ಹೆಂಡ್ತಿ ಕಪಾಳಕ್ಕೆ ಬಾರಿಸಿದ ಪತಿರಾಯ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 12.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾದ ಅತ್ಯುತ್ತಮ ವಿದ್ಯಾವಂತ ಆ ವ್ಯಕ್ತಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ವಿದ್ಯಾರ್ಥಿಗಳಿಗೆ ಮೂಲಭೂತ ಶಿಕ್ಷಣದ ಅಗತ್ಯವಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ