ಇದು ನಿಮ್ಮ ಭಾರತವಲ್ಲ, ಆಸ್ಟ್ರೇಲಿಯಾ: ದೀಪಾವಳಿಯಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದೀಪಾವಳಿ ಸಂಭ್ರಮವನ್ನು ವಿರೋಧಿಸಿದ ಮಹಿಳೆ. ಇದು ನಮ್ಮ ಸಂಸ್ಕೃತಿಗೆ ಅಪಾಯ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತೀಯರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಆದರೆ ಆಸ್ಟ್ರೇಲಿಯಾ ತನ್ನ ಗುರುತನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ಸಮ್ಮಿಲನದ ಬಗ್ಗೆ ವ್ಯಾಪಕ ಚರ್ಚೆಗೆ ಇದು ಕಾರಣವಾಗಿದೆ.

ಇದು ನಿಮ್ಮ ಭಾರತವಲ್ಲ, ಆಸ್ಟ್ರೇಲಿಯಾ: ದೀಪಾವಳಿಯಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯ
ವೈರಲ್​​ ಪೋಸ್ಟ್​

Updated on: Oct 25, 2025 | 3:20 PM

ದೀಪಾವಳಿ ಹಬ್ಬವನ್ನು (Deepavali Celebration) ಭಾರತ ಮಾತ್ರವಲ್ಲ ಜಗತ್ತಿನ ಬೇರೆ ಬೇರೆ ಕಡೆ ಆಚರಣೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಸಂಸ್ಕೃತಿಯನ್ನು ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ವಿದೇಶಿ ಸಂಸ್ಕೃತಿಯನ್ನು ಭಾರತ ಅಳವಡಿಸಿಕೊಳ್ಳುತ್ತಿದೆ ಎಂಬ ಟೀಕೆಗಳು ಇತ್ತು. ಇದೀಗ ಇದಕ್ಕೆ ವಿರುದ್ಧವಾಗಿ ಭಾರತದ ಸಂಸ್ಕೃತಿಯಿಂದ ವಿದೇಶ ಸಂಸ್ಕೃತಿಗೆ ಅಪಾಯ ಇದೆ ಎಂದು ಹೇಳುತ್ತಿದ್ದಾರೆ. ಹೀಗೊಂದು ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಆಸ್ಟ್ರೇಲಿಯಾದ ಸಿಡ್ನಿಯ ಒಂದು ನಗರದಲ್ಲಿ ಅದ್ದೂರಿಯಾಗಿ ಹಾಗೂ ಅದ್ಭುತ ಬೆಳಕಿನಿಂದ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಪಾಯವನ್ನುಂಟು ಮಾಡುತ್ತವೆ ಎಂದು ಮಹಿಳೆಯೊಬ್ಬರು ಪೋಸ್ಟ್​​​ ಮಾಡಿದ್ದಾರೆ. ಇದೀಗ ಈ ಪೋಸ್ಟ್​​​​ ಭಾರೀ ಟೀಕೆಗೆ ಗುರಿಯಾಗಿದೆ.

ಈ ಪೋಸ್ಟ್​​ನ್ನು ಸೋಶಿಯಲ್​​ ಮೀಡಿಯಾದ ವೇದಿಕೆಯಾದ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್​​ ವೈರಲ್​ ಆಗುತ್ತಿದಂತೆ ಭಾರೀ ವಿರೋಧಗಳು ವ್ಯಕ್ತವಾಗಿದೆ. ಇನ್ನು ಪೋಸ್ಟ್​​ ಹಾಕಿರುವುದು ಆಸ್ಟ್ರೇಲಿಯಾದ ಕೋಬಿ ಥ್ಯಾಚರ್ ಎಂಬ ಮಹಿಳೆ, ದೀಪಾವಳಿಯ ಆಚರಣೆ ಸಂದರ್ಭದಲ್ಲಿ ವರ್ಣರಂಜಿತ ದೀಪಗಳಿಂದ ಅಲಂಕರಿಸಲ್ಪಟ್ಟ ಸಿಡ್ನಿಯ ನಿರಿಂಬಾ ಫೀಲ್ಡ್ಸ್ ನಗರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಮಹಿಳೆ ಈ ವಿಡಿಯೋವನ್ನು ತನ್ನ ಎಕ್ಸ್​​ಯಲ್ಲಿ ಹಂಚಿಕೊಂಡು ಈ ಮನೆಗಳು ಕ್ರಿಸ್‌ಮಸ್‌ ದಿನ ದೀಪಗಳಿಂದ ಅಲಂಕರಿಸುವುದಿಲ್ಲ. ಆದರೆ ದೀಪಾವಳಿಯಂದು ಅಲಂಕರಿಸುತ್ತಾರೆ ಎಂದು ವಿಡಿಯೋದ ಕೆಳಗೆ ಬರೆದುಕೊಂಡಿದ್ದಾರೆ.

ಇದಲ್ಲಿದೆ ವೈರಲ್​​ ಪೋಸ್ಟ್​:

ಇನ್ನು ಆಸ್ಟ್ರೇಲಿಯಾದಲ್ಲಿ ಈ ಮಹಿಳೆಯ ನೆರೆಹೊರೆಯವರು ಬಹುತೇಕ ಜನರು ಭಾರತದವರೇ, ನಾವು ನಮ್ಮದೇ ಆದ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ. ಕೋಬಿ ಥ್ಯಾಚರ್ ಇದಕ್ಕೆ ಸಂಬಂಧಿಸಿಂತೆ ಇನ್ನೊಂದು ಪೋಸ್ಟ್​​​ನ್ನು ಕೂಡ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಕೆಲವು ಹಿಂದೂಗಳು ಈಗ ದೀಪಾವಳಿಯನ್ನು ಅಧಿಕೃತ ಸಾರ್ವಜನಿಕ ರಜಾದಿನವನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಆಸ್ಟ್ರೇಲಿಯಾ, ಭಾರತವಲ್ಲ ಎಂದು ಹೇಳಿದ್ದಾರೆ. ಬೇಕಾದರೆ ದೇಶವನ್ನು ಬಿಡಿ, ನಿಮಗಾಗಿ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆದುಳು ಶಸ್ತ್ರಚಿಕಿತ್ಸೆ ವೇಳೆ ಕ್ಲಾರಿನೆಟ್ ನುಡಿಸಿದ 65ರ ಮಹಿಳೆ

ವೈರಲ್​ ಮತ್ತೊಂದು ಪೋಸ್ಟ್​​ ಇಲ್ಲಿದೆ ನೋಡಿ:

ಇನ್ನು ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಕೋಬಿ ಥ್ಯಾಚರ್ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಬಳಕೆದಾರ ಕಷ್ಟಪಟ್ಟು ದುಡಿಯುವ ಜನರು ಆಸ್ಟ್ರೇಲಿಯಾವನ್ನು ತಮ್ಮ ಮನೆಯಾಗಿ ಸ್ವೀಕರಿಸುತ್ತಾರೆ ಮತ್ತು ಆಸ್ಟ್ರೇಲಿಯಾದ ಜೀವನ ವಿಧಾನವನ್ನು ಸ್ವೀಕರಿಸುವಾಗ ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಭಾರತೀಯರು ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ